For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ' ದಾಖಲೆಯನ್ನು ಮುರಿಯಬಹುದೇ ಮಣಿರತ್ನಂ ಸಿನಿಮಾ 'ಪೊನ್ನಿಯಿನ್ ಸೆಲ್ವನ್'?

  |

  ದಕ್ಷಿಣ ಭಾರತದ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು 'ಬಾಹುಬಲಿ'. ರಾಜಮೌಳಿ ನಿರ್ದೇಶನದ ಈ ಸಿನಿಮಾ ಭಾರತದಲ್ಲಂತೂ ದಾಖಲೆ ಗಳಿಕೆ ಮಾಡಿದೆ. 'ಬಾಹುಬಲಿ' ಹಾಗೂ 'ಬಾಹುಬಲಿ 2' ಸಿನಿಮಾ ಎರಡೂ ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನು ಬರೆದಿದೆ.

  ಭಾರತದಲ್ಲಿ 'ಬಾಹುಬಲಿ 2' ಬರೆದ ದಾಖಲೆಯನ್ನು ಸದ್ಯಕ್ಕಂತೂ ಯಾರಿಂದಲೂ ಅಳಿಸಲು ಸಾಧ್ಯವೇ ಇಲ್ಲ ಅಂತ ಟ್ರೇಡ್ ಅನಲಿಸ್ಟ್‌ಗಳು ಅಭಿಪ್ರಾಯ ಪಟ್ಟಿದ್ದರು. ಆದ್ರೀಗ ಮತ್ತೊಂದು ಐತಿಹಾಸಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದೂ ಕೂಡ ದಕ್ಷಿಣ ಭಾರತದ ಸಿನಿಮಾವೇ. ಅದುವೇ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್'.

  '2.0' Vs 'ಪೊನ್ನಿಯಿನ್ ಸೆಲ್ವನ್': ಆ ದಾಖಲೆ ಮುರಿಯುತ್ತಾ ಮಣಿ ಡ್ರೀಮ್ ಪ್ರಾಜೆಕ್ಟ್?'2.0' Vs 'ಪೊನ್ನಿಯಿನ್ ಸೆಲ್ವನ್': ಆ ದಾಖಲೆ ಮುರಿಯುತ್ತಾ ಮಣಿ ಡ್ರೀಮ್ ಪ್ರಾಜೆಕ್ಟ್?

  'ಪೊನ್ನಿಯಿನ್ ಸೆಲ್ವನ್' ಕೂಡ 'ಬಾಹುಬಲಿ'ಯಷ್ಟೇ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಆಗಿದೆ. ದೊಡ್ಡ ತಾರಾಗಣವೇ ಇದೆ. ಮಣಿರತ್ನಂ ಅಂತಹ ನಿರ್ದೇಶಕರ ಸಿನಿಮಾ ಬೇರೆ. ಹೀಗಾಗಿ 'ಬಾಹುಬಲಿ'ಬಾಕ್ಸಾಫೀಸ್ ದಾಖಲೆಯನ್ನು 'ಪೊನ್ನಿಯಿನ್ ಸೆಲ್ವನ್' ಉಡೀಸ್ ಮಾಡಬಹುದಾ? ಸಾಧ್ಯ ಹಾಗೂ ಅಸಾಧ್ಯಗಳೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

   ರಾಜಮೌಳಿ Vs ಮಣಿರತ್ನಂ

  ರಾಜಮೌಳಿ Vs ಮಣಿರತ್ನಂ

  ಈಗಾಗಲೇ ರಾಜಮೌಳಿ ಹಾಗೂ ಮಣಿರತ್ನಂ ನಡುವೆ ಹೋಲಿಕೆ ಶುರುವಾಗಿದೆ. ಈಗಾಗಲೇ ರಾಜಮೌಳಿ ಐತಿಹಾಸಿಕ ಸಿನಿಮಾವನ್ನು ನಿರ್ದೇಶನ ಮಾಡಿ ಗೆದ್ದಿದ್ದಾರೆ. ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನೂ ಬರೆದಿದ್ದಾರೆ. ಈಗ ಮಣಿರತ್ನಂ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಸಹಜವಾಗಿಯೇ ರಾಜಮೌಳಿ ಜೊತೆ ಮಣಿರತ್ನಂರನ್ನು ಹೋಲಿಕೆ ಮಾಡಲಾಗುತ್ತಿದೆ. 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಕೂಡ ಪ್ಯಾನ್ ಇಂಡಿಯಾ ಆಗಿರುವುದರಿಂದ ಮಣಿರತ್ನಂ ಗೆಲ್ಲಲೇ ಬೇಕಿದೆ.

  ರಜನಿಕಾಂತ್ ಕಾಲಿಗೆ ಬಿದ್ದ ಐಶ್ವರ್ಯಾ ರೈ: ಹಾಗಂತ ಇದು ಮೊದಲೇನಲ್ಲ!ರಜನಿಕಾಂತ್ ಕಾಲಿಗೆ ಬಿದ್ದ ಐಶ್ವರ್ಯಾ ರೈ: ಹಾಗಂತ ಇದು ಮೊದಲೇನಲ್ಲ!

   'ಬಾಹುಬಲಿ', 'ಪೊನ್ನಿಯಿನ್ ಸೆಲ್ವನ್' ದಕ್ಷಿಣದ ಸಿನಿಮಾಗಳೇ!

  'ಬಾಹುಬಲಿ', 'ಪೊನ್ನಿಯಿನ್ ಸೆಲ್ವನ್' ದಕ್ಷಿಣದ ಸಿನಿಮಾಗಳೇ!

  ರಾಜಮೌಳಿಯ 'ಬಾಹುಬಲಿ' ಸಿನಿಮಾ ಹಾಗೂ 'ಪೊನ್ನಿಯಿನ್ ಸೆಲ್ವನ್' ಎರಡೂ ಸಿನಿಮಾಗಳೂ ದಕ್ಷಿಣ ಭಾರತದ್ದೇ ಆಗಿವೆ. ಭಾರತದ ಮೂಲೆ ಮೂಲೆಯಲ್ಲೂ 'ಬಾಹುಬಲಿ' ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗಿದ್ದರೆ, 'ಪೊನ್ನಿಯನ್ ಸೆಲ್ವನ್' ಸಿನಿಮಾವನ್ನೂ ಮೆಚ್ಚಿಕೊಳ್ಳುತ್ತಾರಾ? ಅನ್ನೋ ಕುತೂಹಲವಂತೂ ಇದೆ. ಆದರೆ, 'ಪೊನ್ನಿಯಿನ್ ಸೆಲ್ವನ್' ಕ್ರೇಜ್ ತಮಿಳುನಾಡಿನಲ್ಲಿ ಬಿಟ್ಟರೆ ಬೇರೆ ಭಾಷೆಯಲ್ಲಿ ಹೆಚ್ಚಿಲ್ಲ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಇದೊಂದು ಸಮಸ್ಯೆ ಎದುರಾಗಬಹುದು.

   ಮಣಿರತ್ನಂ ಮುಂದಿರೋ ಚಾಲೆಂಜಸ್ ಏನು?

  ಮಣಿರತ್ನಂ ಮುಂದಿರೋ ಚಾಲೆಂಜಸ್ ಏನು?

  'ಬಾಹುಬಲಿ 2' ವಿಶ್ವದಾದ್ಯಂತ ಸುಮಾರು 1800 ಕೋಟಿ ರೂ. ಅಧಿಕ ಹಣವನ್ನು ಬಾಕ್ಸಾಫೀಸ್‌ನಲ್ಲಿ ಕಲೆಹಾಕಿತ್ತು. ಈಗ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಕನಿಷ್ಠ ಅಂದರೂ 1000 ಕೋಟಿ ರೂ. ಕ್ಲಬ್ ಸೇರಲೇ ಬೇಕಾದ ಒತ್ತಡವಿದೆ. ಐದು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದರೂ, ತಮಿಳು, ತೆಲುಗು ಹಾಗೂ ಹಿಂದಿ ಬಾಕ್ಸಾಫೀಸ್ ನಿರ್ಣಾಯಕವಾಗಿರುತ್ತೆ. ಈ ಎಲ್ಲಾ ಸವಾಲುಗಳನ್ನು ಮಣಿರತ್ನಂ ಸಿನಿಮಾ ಮೆಟ್ಟಿ ನಿಲ್ಲುತ್ತಾ? ಅನ್ನೋದು ಈಗ ಸವಾಲು.

  'ಪೊನ್ನಿಯನ್ ಸೆಲ್ವನ್'ಗಾಗಿ ರಜನಿಕಾಂತ್, ಕಮಲ್ ಹಾಸನ್ ಸಮಾಗಮ!'ಪೊನ್ನಿಯನ್ ಸೆಲ್ವನ್'ಗಾಗಿ ರಜನಿಕಾಂತ್, ಕಮಲ್ ಹಾಸನ್ ಸಮಾಗಮ!

   ಚೋಳ Vs ಮಾಹಿಷ್ಮತಿ

  ಚೋಳ Vs ಮಾಹಿಷ್ಮತಿ

  ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಕಾಲ್ಪನಿಕ ಕಥೆಯಾಗಿತ್ತು. ಇಲ್ಲಿ ಕ್ರಿಯೇಟಿವಿಟಿಗೆ ಹೆಚ್ಚು ಅವಕಾಶವಿತ್ತು. ಅದೇ 'ಪೊನ್ನಿಯಿನ್ ಸೆಲ್ವನ್' ಸಿನಿಮಾವನ್ನು ರಿಯಲ್ ಕಥೆಯೊಂದಿಗೆ ಕಾಲ್ಪನಿಕ ಸನ್ನಿವೇಶಗಳನ್ನು ಸೇರಿಸಲಾಗಿದೆ. ಹೀಗಾಗಿ ಜನರಿಗೆ ಇದು ಚೋಳ ಸಾಮ್ರಾಜ್ಯದ ರಿಯಲ್ ಕಥೆ ಎಂದೇ ಭಾವಿಸಲಾಗಿದೆ. ಈ ಕಾರಣಕ್ಕೆ ಮಣಿರತ್ನಂ ಕ್ರಿಯೇಟಿವಿಟಿಗೆ ಹೆಚ್ಚು ಅವಕಾಶ ಸಿಕ್ಕಿರಲು ಸಾಧ್ಯವಿಲ್ಲ. ಎಲ್ಲಾ ಕಾರಣಕ್ಕೆ 'ಬಾಹುಬಲಿ' ದಾಖಲೆ ಉಡೀಸ್ ಮಾಡೋದು ಅಸಾಧ್ಯವೆನಿಸಿದರೂ, ಡಿಸೆಂಟ್ ಕಲೆಕ್ಷನ್ ಮಾಡಬಹುದು ಎನ್ನುವ ನಿರೀಕ್ಷೆಯಿದೆ.

  English summary
  Mani Ratnam Directed Ponniyin Selvan Can Be Able To Beat Baahubali Movie, Know More.
  Monday, September 26, 2022, 20:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X