For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್‌ ಆಫೀಸ್‌ನಲ್ಲಿ 'ಪೊನ್ನಿಯನ್‌ ಸೆಲ್ವನ್‌' ನಾಗಾಲೋಟ: 200 ಕೋಟಿ ಕ್ಲಬ್ ಸೇರಿದ ಸಿನಿಮಾ

  |

  ಮಣಿರತ್ನಂ ನಿರ್ದೇಶನದ 'ಪೊನ್ನಿಯನ್‌ ಸೆಲ್ವನ್‌-1' ಚಿತ್ರ ಸಪ್ಟೆಂಬರ್30 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಬಹುದೊಡ್ಡ ತಾರಾಗಣವಿರುವ 'ಪೊನ್ನಿಯನ್‌ ಸೆಲ್ವನ್‌ 1' ಬಹು ನಿರೀಕ್ಷೆಯೊಂದಿಗೆ ತೆರೆ ಕಂಡಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ 'ಬ್ರಹ್ಮಾಸ್ತ್ರ' ಚಿತ್ರದ ದಾಖಲೆಯನ್ನು ಹಿಂದಿಕ್ಕಿ 'ಪೊನ್ನಿಯನ್‌ ಸೆಲ್ವನ್‌' ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  ತಮಿಳು, ತೆಲುಗು,ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿ 'ಪೊನ್ನಿಯನ್‌ ಸೆಲ್ವನ್‌-1' ಚಿತ್ರ ತೆರೆ ಕಂಡಿದ್ದು, ತಮಿಳಿನಲ್ಲಿ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. 'ಪೊನ್ನಿಯನ್‌ ಸೆಲ್ವನ್‌' ಚಿತ್ರದ ಬಗ್ಗೆ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲೂ ಅತಿ ಹೆಚ್ಚು ಸಂಖ್ಯೆಯ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿರುವ 'ಪೊನ್ನಿಯನ್‌ ಸೆಲ್ವನ್‌-1' ಚಿತ್ರ ವಿಶ್ವದಾದ್ಯಂತ ಈಗಾಗಲೇ 250 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ.

  ಮೊದಲ ದಿನ ಬ್ರಹ್ಮಾಸ್ತ್ರಕ್ಕಿಂತ ಹೆಚ್ಚು ಗಳಿಸಿದ ಪೊನ್ನಿಯನ್ ಸೆಲ್ವನ್; ಹಳೆ ದಾಖಲೆಗಳೆಲ್ಲ ಪೀಸ್ ಪೀಸ್!ಮೊದಲ ದಿನ ಬ್ರಹ್ಮಾಸ್ತ್ರಕ್ಕಿಂತ ಹೆಚ್ಚು ಗಳಿಸಿದ ಪೊನ್ನಿಯನ್ ಸೆಲ್ವನ್; ಹಳೆ ದಾಖಲೆಗಳೆಲ್ಲ ಪೀಸ್ ಪೀಸ್!

  ಭಾರತದ ಅನೇಕ ಭಾಗಗಳಲ್ಲಿ ಹೌಸ್‌ ಫುಲ್‌ ಪ್ರದರ್ಶನ ಮಾಡುತ್ತಿರುವ 'ಪೊನ್ನಿಯನ್‌ ಸೆಲ್ವನ್‌-1' ಚಿತ್ರ ಈವರೆಗೂ ಸರಿ ಸುಮಾರು 130 ಕೋಟಿ ರೂಪಾಯಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿದೆ ಎಂದು ಅಂದಾಜಿಸಲಾಗಿದೆ. ಮೊದಲ ದಿನ ಭಾರತದ್ಯಾಂತ 36.5ಕೋಟಿ ರೂಪಾಯಿ ಗಳಿಸಿದ್ದ, 'ಪೊನ್ನಿಯನ್‌ ಸೆಲ್ವನ್‌-1' ಚಿತ್ರ ಎರಡನೇ ದಿನ 34.5 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

  'ಪೊನ್ನಿಯನ್‌ ಸೆಲ್ವನ್‌-1' ಚಿತ್ರ ತೆರೆಕಂಡ ಮೊದಲ ಭಾನುವಾರ ಅಕ್ಟೋಬರ್‌2ರಂದು ಚಿತ್ರ ಭರ್ಜರಿ ಪ್ರದರ್ಶನ ಕಂಡಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ನಾಲ್ಕನೇ ದಿನವೂ 'ಪೊನ್ನಿಯನ್‌ ಸೆಲ್ವನ್‌-1' ಚಿತ್ರ ಎರಡಂಕಿಯ ಗಳಿಕೆ ಕಂಡಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಭಾರತದಲ್ಲಿ ಸುಮಾರು 20 ಕೋಟಿ ರೂಪಾಯಿ ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ವಾರವೂ ಚಿತ್ರ ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

  ಪೊನ್ನಿಯಿನ್ ಸೆಲ್ವನ್ ಗೇಮ್ ಆಫ್ ಥ್ರೋನ್ಸ್‌ನ ಕಾಪಿ ಎಂದವರಿಗೆ ನಿರ್ದೇಶಕ ಮಣಿರತ್ನಂ ಎಪಿಕ್ ರಿಪ್ಲೇ!ಪೊನ್ನಿಯಿನ್ ಸೆಲ್ವನ್ ಗೇಮ್ ಆಫ್ ಥ್ರೋನ್ಸ್‌ನ ಕಾಪಿ ಎಂದವರಿಗೆ ನಿರ್ದೇಶಕ ಮಣಿರತ್ನಂ ಎಪಿಕ್ ರಿಪ್ಲೇ!

  ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಸುಮಾರು 400 ಕೋಟಿ ರೂಪಾಯಿ ಬಜೆಟ್‌ನಲ್ಲಿ ಮಾಡಿರುವ ಮಣಿರತ್ನಂ ಅವರ 'ಪೊನ್ನಿಯನ್‌ ಸೆಲ್ವನ್‌-1' ಚಿತ್ರ ಬೆಳ್ಳಿ ತೆರೆ ಮೇಲೆ ಅದ್ಧೂರಿಯಾಗಿ ಮೂಡಿಬಂದಿದೆ. ಚಿತ್ರದ ಒಂದೊಂದು ದೃಶ್ಯವನ್ನು ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ. 'ಪೊನ್ನಿಯನ್‌ ಸೆಲ್ವನ್‌-1' ಚಿತ್ರ ಕಲ್ಕಿ ಕೃಷ್ಣಮೂರ್ತಿಯವರ ಕಾದಂಬರಿ ಆಧರಿತ ಐತಿಹಾಸಿಕ ಕಥೆಯಾಗಿದ್ದು, 1000 ವರ್ಷಗಳ ಹಿಂದಿನ ಚೋಳರ ಸಾಮ್ರಾಜ್ಯದ ಆಳ್ವಿಕೆ ಮತ್ತು ಅವರ ಪರಂಪರೆಯನ್ನು ಚಿತ್ರದಲ್ಲಿ ಆ ಕಾಲದ ಅದ್ಧೂರಿತನಕ್ಕೆ ತಕ್ಕಂತೆ ತೋರಿಸಲಾಗಿದೆ.

  Maniratnams Ponniyin Selvan Day 4 Box Office Collection

  ಬಾಲಿವುಡ್‌ ನಟಿ ಐಶ್ವರ್ಯಾ ರೈ, ಟಾಲಿವುಡ್‌ ನಟ ಚಿಯಾನ್‌ ವಿಕ್ರಮ್‌, ಕಾರ್ತಿ, ಜಯಂ ರವಿ, ತ್ರಿಶಾ, ಶೋಭಿತಾ ಧುಲಿಪಾಲ ಸೇರಿದಂತೆ ದೊಡ್ಡ ತಾರಾ ಬಳಗವೇ 'ಪೊನ್ನಿಯಿನ್ ಸೆಲ್ವನ್-1' ಚಿತ್ರದಲ್ಲಿದೆ. ಪ್ರತಿಯೊಬ್ಬರ ನಟನೆಗೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ವಿಶಾಲವಾದ ಸೆಟ್‌ನಲ್ಲಿ ಚಿತ್ರೀಕರಿಸಿರುವ ಪೊನ್ನಿಯಿನ್ ಸೆಲ್ವನ್-1 ಚಿತ್ರ ರವಿವರ್ಮನ್ ಅವರ ಛಾಯಾಗ್ರಹಣದಲ್ಲಿ ಅದ್ಧೂರಿಯಾಗಿ ಮೂಡಿಬಂದಿದೆ. ಇನ್ನು ಎ.ಆರ್‌ ರೆಹಮಾನ್‌ ಅವರ ಸಂಗೀತ ಚಿತ್ರವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.

  English summary
  Aishwarya Rai and Chiyaan Vikram starrer Ponniyin Selvan 1 Day 4 Box Office Collection Report.
  Tuesday, October 4, 2022, 12:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X