"ನಟಿಯರ ಜೊತೆ ಪಾರ್ಟಿ ಮಾಡುವ ಚಿರು ನನ್ನ ಕರೆಯಲ್ಲ.. ಪಕ್ಷ ಕಟ್ಟಿ ಕೋಟಿ ಕೋಟಿ ಬಾಚಿದ್ರು": ಮನ್ಸೂರ್ ಅಲಿಖಾನ್
ನಟಿ ತ್ರಿಶಾ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ನಟ ಮನ್ಸೂರ್ ಅಲಿಖಾನ್ ಕ್ಷಮೆ ಕೇಳದೆ ಮೊಂದುವಾದ ಮುಂದುವರೆಸಿದ್ದಾರೆ. ತ್ರಿಶಾ, ಚಿರಂಜೀವಿ ಹಾಗೂ ಖುಷ್ಬೂ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ. 'ಲಿಯೋ' ಚಿತ್ರದಲ್ಲಿ ತ್ರಿಶಾ ಜೊತೆ ನಟಿಸುವ ಅವಕಾಶ ಸಿಗಲಿಲ್ಲ ಎನ್ನುವುದನ್ನು ವ್ಯಂಗವಾಗಿ ಹೇಳಿ ಮನ್ಸೂರ್ ಅಲಿಖಾನ್ ವಿವಾದ ಸೃಷ್ಟಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ "ನಿರ್ದೇಶಕ ಲೋಕೇಶ್ ಕನಕರಾಜ್ 'ಲಿಯೋ' ಚಿತ್ರದ ಕಥೆ ಹೇಳಿದಾಗ ತ್ರಿಶಾ ಜೊತೆಯೂ ರೇ* ಸೀನ್ ಇರುತ್ತೆ ಎಂದುಕೊಂಡಿದ್ದೆ. ಆಹಾ ಬಿಳಿ ಹತ್ತಿ ರೀತಿ ಕಾಣುವ ಕಾಶ್ಮೀರದಲ್ಲಿ ತ್ರಿಶಾನ ಹಾಗೆ ಎತ್ತಿಕೊಂಡು ಹೋಗ್ಬೋದು ಎಂದುಕೊಂಡೆ. ಆದ್ರೆ ಕಾಶ್ಮೀರದಲ್ಲಿ ಚಿತ್ರೀಕರಣದ ವೇಳೆ ತ್ರಿಶಾಳನ್ನು ನನಗೆ ತೋರಿಸಲೇಯಿಲ್ಲ" ಎಂದು ಮನ್ಸೂರ್ ಅಲಿಖಾನ್ ಹೇಳಿದ್ದರು. ನಟಿ ತ್ರಿಶಾ ಈ ಹೇಳಿಕೆ ಖಂಡಿಸಿ ಇಂತಹ ನಟನೊಟ್ಟಿಗೆ ನಾನು ಮತ್ತೆ ನಟಿಸುವುದಿಲ್ಲ ಎಂದಿದ್ದರು.

ಮನ್ಸೂರ್ ಅಲಿಖಾನ್ ಹೇಳಿಕೆ ಖಂಡಿಸಿ ಟ್ವೀಟ್ ಮಾಡಿದ್ದ ನಟ ಚಿರಂಜೀವಿ "ತ್ರಿಶಾ ಬಗ್ಗೆ ಮನ್ಸೂರ್ ಕಾಮೆಂಟ್ಸ್ ನನ್ನ ಗಮನಕ್ಕೆ ಬಂತು. ಇಂತಹ ಕಾಮೆಂಟ್ಸ್ ನಟಿಗೆ ಮಾತ್ರವಲ್ಲ ಯಾವುದೇ ಮಹಿಳೆಗೆ ಅಸಹ್ಯಕರ. ಈ ಕಾಮೆಂಟ್‌ಗಳನ್ನು ಬಲವಾಗಿ ಖಂಡಿಸಬೇಕು. ವಿಕೃತ ಮನಸ್ಸಿನಿಂದ ಇಂತಹ ಮಾತುಗಳನ್ನು ಹೇಳುತ್ತಾರೆ. ತ್ರಿಶಾ ಮಾತ್ರವಲ್ಲ.. ಯಾವುದೇ ಹುಡುಗಿಗೆ ಇಂತಹ ಕಾಮೆಂಟ್‌ಗಳು ಬಂದರೆ ಅವರ ಬೆಂಬಲಕ್ಕೆ ನಿಲ್ಲುತ್ತೇನೆ" ಎಂದು ಬರೆದಿದ್ದರು.
ಮೊದಲಿಗೆ ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದ ಮನ್ಸೂರ್ ಅಲಿಖಾನ್ ಬಳಿಕ ನಾಲಿಗೆ ಹರಿಬಿಡುತ್ತಿದ್ದಾರೆ. ಪದೇ ಪದೆ ಈ ವಿಚಾರದ ಬಗ್ಗೆ ಕಾಮೆಂಟ್ ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳುತ್ತಿದ್ದಾರೆ. ಇಂಡಿಯಾ ಗ್ಲಿಟ್ಸ್ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿ ಚಿರಂಜೀವಿ ವಿರುದ್ಧ ಮನ್ಸೂರ್ ಅಲಿಖಾನ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
80ರ ದಶಕದ ತಾರೆಯರೆಲ್ಲಾ ಒಂದೆಡೆ ಸೇರಿ ಪ್ರತಿ ವರ್ಷ ಪಾರ್ಟಿ ಮಾಡುತ್ತಾರೆ. ಚಿರಂಜೀವಿ, ಮೋಹನ್ ಲಾಲ್, ರಮ್ಯಾಕೃಷ್ಣ, ಸುಹಾಸಿನಿ, ಜಾಕಿಶ್ರಾಫ್, ಸುಮಲತಾ ಅಂಬರೀಶ್ ಸೇರಿದಂತೆ ಹಲವರು ಈ ಪಾರ್ಟಿಯಲ್ಲಿ ಭಾಗಿ ಆಗುತ್ತಾರೆ. ಪ್ರತಿವರ್ಷ ಒಬ್ಬೊಬ್ಬರ ಮನೆಯಲ್ಲಿ ಪಾರ್ಟಿ ನಡೆಯುತ್ತದೆ. 3 ದಿನಗಳ ಕಾಲ ಹಾಡು, ಡ್ಯಾನ್ಸ್ ಅಂತೆಲ್ಲಾ ಬಹಳ ಎಂಜಾಯ್ ಮಾಡುತ್ತಾರೆ. ಇದೇ ಪಾರ್ಟಿಗೆ ಬಗ್ಗೆ ಪ್ರಸ್ತಾಪಿಸಿ ಮನ್ಸೂರ್ ಅಲಿಖಾನ್ ಕಾಮೆಂಟ್ ಮಾಡಿದ್ದಾರೆ.

"ಪ್ರತಿ ವರ್ಷ ಚಿರಂಜೀವಿ ಆ ಕಾಲದ ನಟಿಯರಿಗೆ ಪಾರ್ಟಿ ಕೊಡುತ್ತಾರೆ. ಅವರ ಜೊತೆ ಈ ಹಿಂದೆ ನಾನು ಕೂಡ ನಟಿಸಿದ್ದೇನೆ. ಆದರೆ ಅವರು ಅಂತಹ ಪಾರ್ಟಿಗಳಿಗೆ ನನ್ನನ್ನು ಎಂದೂ ಆಹ್ವಾನಿಸಲೇ ಇಲ್ಲ. ಆ ಕಾಲದ ನಟಿಯರನ್ನು ಮಾತ್ರ ಆಹ್ವಾನಿಸುತ್ತಾರೆ. ಇದೆಲ್ಲವೂ ಅವರ ವೈಯಕ್ತಿಕ ಬಿಡಿ. ತ್ರಿಶಾ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಚಿರಂಜೀವಿ ನನಗೆ ಕರೆ ಮಾಡಬೇಕಿತ್ತು. ಇದೆಲ್ಲಾ ಏನು? ಯಾಕೆ ಹೀಗಾಯ್ತು ಎಂದು ಕೇಳಬೇಕಿತ್ತು" ಎಂದು ಮನ್ಸೂರ್ ಹೇಳಿದ್ದಾರೆ.
"ಈ ಹಿಂದೆ ರಾಜಕೀಯ ಪಕ್ಷ ಸ್ಥಾಪಿಸಿ ಚಿರಂಜೀವಿ ಕೋಟ್ಯಂತರ ರೂಪಾಯಿಗಳನ್ನು ಚಿರಂಜೀವಿ ಗಳಿಸಿದ್ದಾರೆ. ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಕೂಡ ರಾಜಕೀಯದಲ್ಲಿ ಚೆನ್ನಾಗಿ ಸಂಪಾದಿಸುತ್ತಿದ್ದಾರೆ ಎಂದು ಮನ್ಸೂರ್ ಅಲಿಖಾನ್ ಕಾಮೆಂಟ್ ಮಾಡಿದ್ದಾರೆ.
ಶೀಘ್ರದಲ್ಲೇ ತ್ರಿಶಾ, ಚಿರಂಜೀವಿ ಹಾಗೂ ಖುಷ್ಬು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮನ್ಸೂರ್ ಅಲಿಖಾನ್ ಹೇಳಿದ್ದಾರೆ. ಪರಿಹಾರವಾಗಿ ತ್ರಿಶಾ ಹಾಗೂ ಖುಷ್ಬು ಬಳಿ ತಲಾ 10 ಕೋಟಿ ರೂ. ಹಾಗೂ ಚಿರಂಜೀವಿ ಬಳಿ 20 ಕೋಟಿ ರೂ. ಕೇಳುವುದಾಗಿ ತಿಳಿಸಿದ್ದಾರೆ. 40 ಕೋಟಿ ರೂ. ಹಣವನ್ನು ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸೇವಿಸಿ ಮೃತಪಟ್ಟವರ ಕುಟುಂಬಗಳಿಗೆ ನೀಡುವುದಾಗಿ ಹೇಳಿದ್ದಾರೆ.


Click it and Unblock the Notifications











