'ಕಾವಾಲ'ದಂತಹ ಅಸಭ್ಯ ಹಾಡಿಗೆ ಸೆನ್ಸಾರ್ ಅನುಮತಿ ನೀಡಿದ್ದು ಹೇಗೆ ಎಂದು ಕಿಡಿಕಾರಿದ ಹಿರಿಯ ನಟ

ಈ ವರ್ಷದ ತಮಿಳು ಹಿಟ್ ಸಿನಿಮಾ ಜೈಲರ್‌ನ ಹಾಡು ಕಾವಾಲ ಭಾರಿ ಟ್ರೆಂಡ್ ಸೃಷ್ಟಿ ಮಾಡಿತ್ತು. ನಟಿ ತಮನ್ನಾ ಭಾಟಿಯ ನೃತ್ಯಕ್ಕೆ ಜನ ಫಿದಾ ಆಗಿದ್ದರು. ಆದರೆ, ಹಲವಾರು ತಮಿಳು ಚಲನಚಿತ್ರಗಳಲ್ಲಿ ಹಾಸ್ಯ ಮತ್ತು ಖಳನಾಯಕನ ಪಾತ್ರ ಮಾಡಿರುವ ನಟ ಮನ್ಸೂರ್ ಅಲಿ ಖಾನ್ ಹಾಡಿನ ಬಗ್ಗೆ ಟೀಕೆ ಮಾಡಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ನೆಲ್ಸನ್ ಕುಮಾರ್ ನಿರ್ದೇಶನದ ಚಲನಚಿತ್ರ ಜೈಲರ್‌ನ ಕಾವಾಲಾ ಹಾಡು ಸೂಪರ್ ಹಿಟ್ ಆಗಿತ್ತು, ತಮನ್ನಾ ಭಾಟಿಯಗೆ ಮತ್ತಷ್ಟು ಹೆಸರು ತಂದಿತ್ತು. ಆದರೆ, ಈ ಹಾಡಿನಲ್ಲಿ ಅಸಣ್ಯವಾಗಿ ನೃತ್ಯ ಮಾಡಲಾಗಿದೆ. ತೀವ್ರ ಕೀಳು ಅಭಿರುಚಿಯ ಹಾಡು, ನೃತ್ಯ ಎಂದು ನಟ ಮನ್ಸೂರ್ ಅಲಿ ಖಾನ್ ಕಿಡಿಕಾರಿದ್ದಾರೆ.

mansoor-ali-khan-slams-tamannaah-bhatia

ಕಾವಾಲ ನೃತ್ಯ ಅಸಹ್ಯ ಎಂದ ನಟ ಮನ್ಸೂರ್ ಅಲಿ ಖಾನ್!

ಇತ್ತೀಚಿನ ನಟ ಮನ್ಸೂರ್ ಅಲಿ ಖಾನ್ ತಮ್ಮ ಹೊಸ ಚಿತ್ರ 'ಸರಕು' ಬಗ್ಗೆ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಸೆನ್ಸಾರ್ ಮಂಡಳಿ ತಮ್ಮ ಚಿತ್ರಕ್ಕೆ ಹೇಗೆ ಹಲವಾರು ಕಟ್‌ಗಳು ಮತ್ತು ಬದಲಾವಣೆಗಳನ್ನು ಮಾಡಲಿ ತಿಳಿಸಿದೆ ಎಂಬ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರು. ಈ ವೇಳೆ ಕಾವಾಲಾಗೆ ಏಕೆ ಸೆನ್ಸಾರ್ ಕಟ್ ಇಲ್ಲ ಎಂದು ಕಿಡಿಕಾರಿದ್ದಾರೆ.

ಸರಕು ಸಿನಿಮಾಗೆ ಅನೇಕ ಕಟ್ ಸೂಚಿಸಿರುವ ಸೆನ್ಸಾರ್ ಮಂಡಳಿ ವಿರುದ್ಧ ಹರಿಹಾಯ್ದ ನಟ ತಮನ್ನಾ ಭಾಟಿಯ ಅವರ ಕಾವಾಲಾ ಉದಾಹರಣೆಯನ್ನು ತೆಗೆದುಕೊಂಡಿದ್ದಾರೆ. ಇಷ್ಟು ಕೊಳಕು ನೃತ್ಯ ಸಂಯೋಜನೆಯೊಂದಿಗೆ ಮೂಡಿಬಂದ ಹಾಡಿಗೆ ಸೆನ್ಸಾರ್ ಅನುಮತಿ ಹೇಗೆ ಸಿಕ್ಕಿತು ಎಂದು ಹೇಳುವ ಮೂಲಕ ಟೀಕೆ ಮಾಡಿದ್ದಾರೆ.

ಹಾಡಿನ ಸ್ಟೆಪ್‌ಗಳನ್ನು ಉಲ್ಲೇಖಿಸಿರುವ ಮನ್ಸೂರ್ ಅಲಿ ಖಾನ್ ಸೆನ್ಸಾರ್ ಮಂಡಳಿಯ ಅನುಮೋದನೆಯ ಮಾನದಂಡವನ್ನು ಪ್ರಶ್ನಿಸಿ, ಟೀಕಿಸಿದರು. 'ಇತ್ತೀಚೆಗೆ ಕಾವಾಲ ಎಂಬ ಹಾಡು ಬಿಡುಗಡೆಯಾಗಿದೆ. ಆ ಹಾಡಿನಲ್ಲಿ ತಮನ್ನಾ ಭಾಟಿಯ ನೃತ್ಯದಲ್ಲಿ ತಮ್ಮ ಕೈಯನ್ನು ಕೆಟ್ಟದಾಗಿ ಸೊಂಟದ ಕೆಳಗೆ ಕೊಂಡೊಯ್ದು ಕಾವಾಲಾ... ಕಾವಾಲಾ... ರಾ ರಾ ಎಂದು ಕೇಳುತ್ತಿದ್ದಾರೆ. ಆ ಹಾಡಿನಲ್ಲಿ ಅವರು ಏನು ಬೇಕೆಂದು ಕೇಳುತ್ತಿದ್ದಾರೆ..? ಇದು ಏನನ್ನು ಸೂಚಿಸುತ್ತಿದೆ...? ಇದಕ್ಕೆ ಒಪ್ಪಿಗೆ ನೀಡಿದ ಸೆನ್ಸಾರ್ ಮಂಡಳಿ ಅವರು, ನಮ್ಮ ಸಿನಿಮಾದಲ್ಲಿ ಅಂತಹ ದೃಶ್ಯ ಇಲ್ಲದಿದ್ದರೂ ಕಟ್ ಮಾಡಲು ಹೇಳಿದ್ದಾರೆ' ಎಂದು ಕಿಡಿ ಕಾರಿದ್ದಾರೆ. ಮನ್ಸೂರ್ ಅಲಿ ಖಾನ್ ತಮಿಳು ನಟರಾಗಿದ್ದು, ಕೆಲವು ಮಲಯಾಳಂ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

mansoor-ali-khan-slams-tamannaah-bhatia

ಮನ್ಸೂರ್ ಅಲಿ ಖಾನ್ ಹೇಳಿಕೆಗೆ ತಮನ್ನಾ ಫ್ಯಾನ್ಸ್ ಕಿಡಿ

ಮನ್ಸೂರ್ ಅಲಿ ಖಾನ್ ವಿಡಿಯೋ, ಹೇಳಿಕೆಗಳು ವೈರಲ್ ಆದ ಬೆನ್ನಲ್ಲೆ, ನಟಿ ತಮನ್ನಾ ಮತ್ತು ಕಾವಾಲಾ ಹಾಡಿನ ಅಭಿಮಾನಿಗಳಿ ನಟನ ಮೇಲೆ ಮುಗುಬಿದ್ದಿದ್ದಾರೆ. ತಕ್ಷಣ ಮನ್ಸೂರ್ ಅಲಿ ಖಾನ್ ಅವರ ಹೇಳಿಕೆಯನ್ನು ಖಂಡಿಸಿರುವ ಅನೇಕರು, ಸೆನ್ಸಾರ್ ಮಂಡಳಿಯನ್ನು ಟೀಕಿಸಲು ಇದು ಸರಿಯಾದ ಮಾರ್ಗವಲ್ಲ ಎಂದಿದ್ದಾರೆ.

ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿರುವ, ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿರುವ ಕಾವಾಲಾ ಹಾಡು ದೇಶ ಮತ್ತು ವಿದೇಶಗಳಲ್ಲಿಯೂ ಸದ್ದು ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್‌ಗಳು ಇಂದಿಗೂ ಟ್ರೆಂಡ್ ಆಗುತ್ತಿವೆ. ಅನೇಕ ನಟ ನಟಿಯರು, ಸೆಲಬ್ರಿಟಿಗಳು ಈ ಹಾಡಿಗೆ ಸೊಂಟ ಬಳುಕಿಸಿದ್ದರು. ಈ ಹಾಡಿನ ನೃತ್ಯಕ್ಕಾಗಿ ನಟಿ ತಮನ್ನಾ ಅವರನ್ನು ಹಾಡಿ ಹೊಗಳಿದ್ದಾರೆ. ಹೀಗಾಗಿ ಮನ್ಸೂರ್ ಅಲಿ ಖಾನ್ ಕಾಮೆಂಟ್‌ಗಳಿಗೆ ತೀವ್ರ ಆಕ್ರೋಶ ಬಂದಿದೆ.

More from Filmibeat

English summary
Mansoor Ali Khan slams Jailer's Kaavaalaa dance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X