ಮೊನ್ನೆಯಷ್ಟೇ ಕ್ಷಮೆ ಕೇಳಿ ಮತ್ತೆ ತಿರುಗಿಬಿದ್ದ ಮನ್ಸೂರ್ ಅಲಿ ಖಾನ್, ಈಗ ಮಾನನಷ್ಟ ಮೊಕದ್ದಮೆ ಹಾಕ್ತಾರಂತೆ!
ತಮಿಳಿನ ನಟ ಮನ್ಸೂರ್ ಅಲಿ ಖಾನ್ ಮತ್ತು ನಟಿ ತ್ರಿಶಾ ನಡುವಿನ ವಿವಾದ ಕೊನೆಯಾಗುವಂತೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ಕ್ಷಮೆ ಕೇಳಿದ್ದ ನಟ ಮನ್ಸೂರ್ ಅಲಿ ಖಾನ್ ಈಗ ಮತ್ತೆ ರಿವರ್ಸ್ ಗೇರ್ ಹಾಕಿದ್ದಾರೆ. ತಮ್ಮ ವಿರುದ್ಧ ಮಾತನಾಡಿದ ಎಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಹೊರಟಿದ್ದಾರೆ.
ಹೌದು, ಲಿಯೋ ನಟ ಮನ್ಸೂರ್ ಅಲಿ ಖಾನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಅವಹೇಳನಕಾರಿ ಮಾತುಗಳಿಗೆ ಸಂಬಂಧಿಸಿದಂತೆ ನಟಿ ತ್ರಿಶಾ ಕೃಷ್ಣನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದಾರೆ ಎಂದು ವರದಿಯಾಗಿದೆ. ನಟಿ ತ್ರಿಶಾ ಅವರನ್ನು ಬೆಂಬಲಿಸಿದ್ದಕ್ಕಾಗಿ ನಟರಾದ ಚಿರಂಜೀವಿ ಮತ್ತು ಖುಷ್ಬು ಸುಂದರ್ ವಿರುದ್ಧವೂ ಕಾನೂನು ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ತ್ರಿಶಾ ಬಳಿ ಕ್ಷಮೆ ಕೇಳಿದ್ದ ಮನ್ಸೂರ್ ಅಲಿ ಖಾನ್
ಮನ್ಸೂರ್ ಅಲಿ ಖಾನ್ ಅವರು ಕೆಲವು ದಿನಗಳ ನಟಿ ತ್ರಿಶಾ ಕೃಷ್ಣನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ನಟಿ ಖುಷ್ಬೂ ಸುಂದರ್, ನಟ ಚಿರಂಜೀವಿ, ನಿರ್ದೇಶಕ ಲೋಕೆರ್ಶ ಕನಕರಾಜನ್ ಸೇರಿದಂತೆ ಹಲವರು ಮನ್ಸೂರ್ ಅಲಿ ಖಾನ್ ವಿರುದ್ಧ ಹೇಳಿಕೆ ನೀಡಿದ್ದರು.
ಇದಾದ ನಂತರ ಅವರ ವಿರುದ್ಧ ಮಹಿಳಾ ಆಯೋಗ ದೂರು ದಾಖಲಿಸಿತ್ತು. ಚೆನ್ನೈನ ಥೌಸಂಡ್ ಐಲ್ಯಾಂಡ್ ಆಲ್ ವುಮೇನ್ ಪೊಲೀಸ್ ಠಾಣೆಗೇ ಹೋಗಿ ವಿಚಾರಣೆ ಎದುರಿಸಿದ್ದರು. ಬಳಿಕ ವ್ಯಂಗ್ಯದ ಧ್ವನಿಯನ್ನು ಹೊಂದಿದ್ದ ಧಾಟಿಯಲ್ಲಿ ಕ್ಷಮೆಯಾಚನೆಯ ಹೇಳಿಕೆಯನ್ನು ನೀಡಿದರು. ಇದನ್ನು ತ್ರಿಶಾ ಒಪ್ಪಿಕೊಂಡು, "ತಪ್ಪು ಮಾಡುವುದು ಮಾನವ.. ಕ್ಷಮಿಸುವುದು ದೈವಿಕ" ಎಂದು ಹೇಳಿದ್ದರು.
ತ್ರಿಶಾ, ಚಿರಂಜೀವಿ ಮತ್ತು ಖುಷ್ಬು ಸುಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ!
ಇನ್ನು, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಿದ ನಂತರ ಮನ್ಸೂರ್ ಅಲಿ ಖಾನ್ ಅವರು ತ್ರಿಶಾ, ಚಿರಂಜೀವಿ ಮತ್ತು ಖುಷ್ಬು ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ ಎಂದು ವದಂತಿಗಳಿವೆ. ಮೂವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿಯೂ ಅವರು ಹೇಳಿದ್ದಾರೆ.

ಮನ್ಸೂರ್ ಅಲಿ ಖಾನ್ ಮತ್ತು ತ್ರಿಶಾ ಕೃಷ್ಣನ್ ವಿದಾದ
ಮನ್ಸೂರ್ ಅಲಿ ಖಾನ್ ಮತ್ತು ತ್ರಿಶಾ ಕೃಷ್ಣನ್ ಇಬ್ಬರೂ ಇತ್ತೀಚೆಗೆ ಲೋಕೇಶ್ ಕನಕರಾಜ್ ನಿರ್ದೇಶನದ ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರದ ಭಾಗವಾಗಿದ್ದರು. ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಮಾತನಾಡುತ್ತಿದ್ದ ಮನ್ಸೂರ್ ಅಲಿ ಖಾನ್ ಅವರಿಗೆ 'ಲಿಯೋ' ಚಿತ್ರದಲ್ಲಿನ ಅನುಭವದ ಬಗ್ಗೆ ಕೇಳಲಾಯಿತು.
ಈ ವೇಲೆ ಲಿಯೋ ಚಿತ್ರದಲ್ಲಿ ನಟಿ ತ್ರಿಶಾ ಜೊತೆ ಯಾವುದೇ ಬೆಡ್ ರೂಮ್ ದೃಶ್ಯಗಳಿಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. 1990 ರ ದಶಕದ ತಮಿಳು ಚಲನಚಿತ್ರಗಳಲ್ಲಿ ತಾನು ಹೇಗೆ ಅತ್ಯಾಚಾರದ ದೃಶ್ಯಗಳನ್ನು ಮಾಡುತ್ತಿದೆ ಅದೇ ರೀತಿ ತ್ರಿಶಾ ಅವರೊಂದಿಗೂ ರೇಪ್ ಸೀನ್ ಮಾಡುತ್ತೇನೆ ಎಂದುಕೊಂಡಿದ್ದೆ. ಅದರೆ, ಅದು ಆಗಲಿಲ್ಲ ಎಂದು ಹೇಳಿದ್ದರು.
ಈ ಹೇಳಿಕೆಗಳು ವಿವಾದವನ್ನು ಹುಟ್ಟುಹಾಕಿದವು. ಇದಕ್ಕೆ ಪ್ರತಿಕ್ರಿಯಿಸಿದ ತ್ರಿಶಾ ಕೃಷ್ಣನ್, ಅವರಂತಹ ನಟರೊಂದಿಗೆ ನಾನು ಎಂದಿಗೂ ಪರದೆಯನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳಿದರು. ಇದಲ್ಲದೆ, ಮೆಗಾಸ್ಟಾರ್ ಚಿರಂಜೀವಿ, ನಿರ್ದೇಶಕರಾದ ಲೋಕೇಶ್ ಕನಕರಾಜ್, ಕಾರ್ತಿಕಾ ಸುಬ್ಬರಾಜ್ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಅವರ ಬೆಂಬಲಕ್ಕೆ ನಿಂತರು.


Click it and Unblock the Notifications











