ತ್ರಿಶಾ ವಿರುದ್ಧ ಸೆಕ್ಸಿಸ್ಟ್ ಹೇಳಿಕೆ: ನ್ಯಾಯಮೂರ್ತಿಗಳಿಂದ ಛೀಮಾರಿ, ಜಾಮೀನು ಅರ್ಜಿ ಹಿಂಪಡೆದ ಮನ್ಸೂರ್ ಅಲಿ ಖಾನ್

ನಟಿ ತ್ರಿಶಾ ಮತ್ತು ಇತರ ನಟಿಯರ ವಿರುದ್ಧ ನೀಡಿದ್ದ ಕೆಟ್ಟ ಹೇಳಿಕೆಗಳ ನಂತರ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಸಿನಿಮಾ ಇಂಡಸ್ಟ್ರಿ ಮತ್ತು ಮಹಿಳಾ ಆಯೋಗದಿಮದ ತೀವ್ರ ಆಕ್ರೋಶ ಬಂದಿದೆ. ಇದೇ ಕಾರಣಕ್ಕೆ ಅವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

ಪ್ರಕರಣ ಸಂಬಂಧ ಚೆನ್ನೈನ ಥೌಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಯು ಮನ್ಸೂರ್‌ ಅಲಿ ಖಾನ್‌ಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗಾಗಿ ನವೆಂಬರ್ 23 ರಂದು ಖುದ್ದಾಗಿ ಹಾಜರಾಗುವಂತೆ ಹೇಳಿತ್ತು. ಇದರ ನಡುವೆ ಬಂಧನದ ಭೀತಿಯಿಂದ ಆರೋಪಿ ನಟ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಅರ್ಜಿಗೆ ನ್ಯಾಯಾಲಯ ಛೀಮಾರಿ ಹಾಕಿದೆ.

Mansoor Ali Khan-Trisha row: Court rejects Actor Mansoor Ali Khan anticipatory bail plea

ಜಾಮೀನು ಅರ್ಜಿ ವಾಪಸ್ ಪಡೆದ ಮನ್ಸೂರ್ ಅಲಿ ಖಾನ್

ನವೆಂಬರ್ 23 ರ ಮುಂಜಾನೆ ತನಗೆ ಆರೋಗ್ಯ ಸಮಸ್ಯೆಯಿದೆ. ಪೊಲಿಸ್ ಠಾಣೆಗೆ ಬರಲು ಆಗುವುದಿಲ್ಲ ಎಂದು ನಾಟಕವಾಡಿದ್ದ ಮನ್ಸೂರ್‌ ಅಲಿ ಖಾನ್ ಕೊನೆಗೂ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಇದಕ್ಕೂ ಮುನ್ನ ಅವಹೇಳನಕಾರಿ ಹೇಳಿಕೆಗಳಿಗಾಗಿ ನಟ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.

ಆದರೆ, ಅರ್ಜಿಯಲ್ಲಿ ದೋಷಗಳಿರುವುದರಿಂದ ಅರ್ಜಿಯನ್ನು ಹಿಂಪಡೆಯಬೇಕಾಯಿತು. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ ಎಂದು ವರದಿಯಾಗಿದೆ. ಇನ್ನು, ಅನಾರೋಗ್ಯದ ಬಗ್ಗೆ ಮೊನ್ನೆ ಮೊನ್ನೆ ಹೇಳಿಕೆ ನೀಡಿ ನಾಳೆಯವರೆಗೂ ಕಾಲಾವಕಾಶ ಕೋರಿದ್ದರೂ ಇದೀಗ ಮನ್ಸೂರ್ ಅಲಿ ಖಾನ್ ಠಾಣೆಗೆ ಆಗಮಿಸಿದ್ದಾರೆ.

Mansoor Ali Khan-Trisha row: Court rejects Actor Mansoor Ali Khan anticipatory bail plea

ತ್ರಿಶಾ ವಿರುದ್ಧ ಹೇಳಿಕೆ: ಮನ್ಸೂರ್ ಅಲಿ ಖಾನ್ ವಿರುದ್ಧ ಚಿತ್ರರಂಗ ಕಿಡಿ

ಇನ್ನು, ಇಡೀ ಚಿತ್ರರಂಗವೇ ಎದುರಾಗಿದ್ದರೂ ಕೂಡ, ಮನ್ಸೂರ್ ಅಲಿ ಖಾನ್ ಅವರು ತ್ರಿಶಾ ಅವರಲ್ಲಿ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, 'ಲಿಯೋ' ನಿರ್ದೇಶಕ ಲೋಕೇಶ್ ಕನಗರಾಜ್ ಸೇರಿದಂತೆ ಹಲವರು ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ.

ಮೂಲಗಳ ಪ್ರಕಾರ, ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಡಿಜಿಪಿಗೆ ಸೂಚಿಸಿದ ನಂತರ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವರದಿಯ ಪ್ರಕಾರ, ನಟನ ವಿರುದ್ಧ ಸೆಕ್ಷನ್ 354 ಎ (ಲೈಂಗಿಕ ಕಿರುಕುಳ) ಮತ್ತು ಸೆಕ್ಷನ್ 509 (ಪದ, ಹಾವಭಾವ ಅಥವಾ ಮಹಿಳೆಯ ಘನತೆಯನ್ನು ಹಾಳು ಮಾಡುವ ಕೃತ್ಯ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ವಿಚಾರಣೆಗಾಗಿ ಚೆನ್ನೈ ನಗರ ಪೊಲೀಸರು ನಟನ ಮನೆಗೆ ಹೋಗಿದ್ದರು.

ಮನ್ಸೂರ್ ಅಲಿ ಖಾನ್ ಮತ್ತು ತ್ರಿಶಾ ವಿವಾದ ಏನು?

ತ್ರಿಶಾ ಮತ್ತು ಮನ್ಸೂರ್ ಅಲಿ ಖಾನ್ ಇಬ್ಬರೂ ದಳಪತಿ ವಿಜಯ್ ಅವರ ಇತ್ತೀಚಿನ ಚಿತ್ರ 'ಲಿಯೋ' ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಇಬ್ಬರ ನಡುವೆ ಯಾವುದೇ ಸ್ಕ್ರೀನ್ ಸ್ಪೇಸ್ ಇರಲಿಲ್ಲ. ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ತ್ರಿಶಾ ಜೊತೆಗೆ ಬೆಡ್‌ ರೂಂ ಸೀನ್ ಇರಲಿಲ್ಲ ಎಂದು ಹೇಳಿದ್ದು, ತ್ರಿಶಾ ಜೊತೆಗೆ 'ಅತ್ಯಾಚಾರದ ದೃಶ್ಯ' ಇಲ್ಲ ಎಂದು ಬೇಸರ ವ್ಯಕ್ತಿಪಡಿಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತಪಾಗಿತ್ತು.

"ನಾನು ತ್ರಿಶಾ ಜೊತೆ ನಟಿಸುತ್ತಿದ್ದೇನೆ ಎಂದು ಹೇಳಿದಾಗ ಚಿತ್ರದಲ್ಲಿ ಬೆಡ್‌ರೂಮ್‌ ಸೀನ್‌ ಇರಲಿದೆ ಎಂದುಕೊಂಡಿದ್ದೆ. ನನ್ನ ಹಿಂದಿನ ಸಿನಿಮಾಗಳಲ್ಲಿ ಇತರ ನಟಿಯರೊಂದಿಗೆ ನಟಿಸಿದಂತೆ ಅವರನ್ನು ಬೆಡ್‌ರೂಮ್‌ಗೆ ಎತ್ತಿಕೊಂಡು ಹೋಗುತ್ತೇನೆ ಎಂದುಕೊಂಡಿದ್ದೆ. ಆದರೆ ಕಾಶ್ಮೀರದಲ್ಲಿ ಚಿತ್ರೀಕರಣದ ಸಮಯದಲ್ಲಿ ಈ ವ್ಯಕ್ತಿಗಳು ನನಗೆ ತ್ರಿಶಾ ಅವರನ್ನು ಸೆಟ್‌ನಲ್ಲಿ ತೋರಿಸಲಿಲ್ಲ" ಎಂದಿದ್ದರು.

ವೀಡಿಯೊ ವೈರಲ್ ಆದ ನಂತರ, ತ್ರಿಶಾ ಕೂಡ ಪ್ರತಿಕ್ರಿಯೆ ನೀಡಿದ್ದರು. "ಇತ್ತೀಚಿನ ವೀಡಿಯೊ ನನ್ನ ಗಮನಕ್ಕೆ ಬಂದಿದೆ, ಅಲ್ಲಿ ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಕೆಟ್ಟ ಮತ್ತು ಅಸಹ್ಯಕರ ರೀತಿಯಲ್ಲಿ ಮಾತನಾಡಿದ್ದಾರೆ. ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ಇದು ಲೈಂಗಿಕತೆ, ಅಗೌರವ, ಸ್ತ್ರೀದ್ವೇಷ ಮತ್ತು ಕೆಟ್ಟ ಅಭಿರುಚಿಯಲ್ಲಿದೆ. ಮುಂದೆ ಎಂದು ಅವರ ಜೊತೆಗೆ ತೆರೆ ಹಂಚಿಕೊಳ್ಳದಂತೆ ನೋಡಿಕೊಳ್ಳುತ್ತೇನೆ. ಅವರಂತಹ ಜನರು ಮನುಕುಲಕ್ಕೆ ಕೆಟ್ಟ ಹೆಸರು" ಎಂದಿದ್ದರು.

More from Filmibeat

English summary
Actor Mansoor Ali Khan's anticipatory bail plea withdrawn.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X