'ನನ್ನನ್ನು ಕೇಸರಿ ಮಾಡಲು ಅನೇಕ ಪ್ರಯತ್ನಗಳು ನಡೆದವು, ಆದರೆ ಅವರ ಬಲೆಗೆ ಬೀಳಲಿಲ್ಲ: ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ತಲೈವ ಬಿಜೆಪಿ ಸೇರಿಕೊಳ್ಳುತ್ತಾರಾ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತಿದ್ದವು. ಈ ವಿಚಾರವಾಗಿ ಮಾತನಾಡಿದ ಸೂಪರ್ ಸ್ಟಾರ್ "ನನ್ನನ್ನು ಕೇಸರಿ ಮಾಡಲು ಅನೇಕ ಪ್ರಯತ್ನಗಳು ನಡೆದವು, ಆದರೆ ಅವರ ಬಲೆಗೆ ಬೀಳಲಿಲ್ಲ" ಎಂದು ಹೇಳಿದ್ದಾರೆ. ಈ ಮೂಲಕ ರಜಿನಿಕಾಂತ್ ಬಿಜೆಪಿ ಸೇರುವುದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ. ರಜನಿಯ ಈ ಮಾತು ಬಿಜೆಪಿಗೆ ದೊಡ್ಡ ಶಾಕ್ ನೀಡಿದೆ.

ಬಿಜೆಪಿ ಮುಖಂಡ ರಾಧಕೃಷ್ಣನ್ ಜೊತೆಗಿನ ಸಭೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ರಜನಿಕಾಂತ್, ತಮಿಳಿನ ಖ್ಯಾತ ಕವಿ ತಿರುವಳ್ಳುವರ್ ಗೆ ಕೇಸರಿ ಶಾಲು ಧರಿಸಿದ್ದ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. "ತಿರುವಳ್ಳುವರ್ ಹಾಗೆ ನನ್ನನ್ನೂ ಕೇಸರಿ ಮಾಡಲು ಅನೇಕ ಪ್ರಯತ್ನಗಳು ನಡೆದವು, ಆದರೆ ನಾನು ಅವರ ಬಲೆಗೆ ಬೀಳಲಿಲ್ಲ" ಎಂದು ಹೇಳಿದ್ದಾರೆ.

ಇತ್ತೀಚಿಗೆ ಬಿಜೆಪಿ ಮುಖಂಡರು ತಮಿಳಿನ ಖ್ಯಾತ ಕವಿ ತಿರುವಳ್ಳುವರ್ ಪ್ರತಿಮೆಗೆ ಕೇಸರಿ ಶಾಲು ಹೊದಿಸಿದ ಫೋಟೋವನ್ನು ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದರು. ರಜನಿಕಾಂತ್ ಮಾತು ಮೋದಿ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ಪಕ್ಷ ಸೇರುವಂತೆ ಮಾಡುತ್ತಿರುವ ಪ್ರಯತ್ನಕ್ಕೆ ಮಣಿಯುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ರಜನಿಕಾಂತ್ ಈ ಮಾತು ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಪ್ಲಾನ್ ನಲ್ಲಿದ್ದ ಬಿಜೆಪಿಗೆ ನಿರಾಸೆ ಮೂಡಿಸಿದೆ.

Many Attempts Have Been Made To Saffronise Me Said Super Star Rajinikanth

ಸೂಪರ್ ಸ್ಟಾರ್ ಸದ್ಯ ದರ್ಬಾರ್ ಸಿನಿಮಾ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ದರ್ಬಾರ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ದರ್ಬಾರ್ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ.

More from Filmibeat

English summary
Many attempts have been made to saffronise me said super star Rajinikanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X