ಸ್ಟಾಲಿನ್ ಕುರ್ಚಿಗೆ ಗಂಡಾಂತರ ತಂದ ದಳಪತಿ; ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಕ್ರಾಂತಿ?

ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯವಾಗಿದೆ. ರಾಜಕೀಯ ನಾಯಕರೆಲ್ಲಾ ವಿಶ್ರಾಂತಿ ಪಡೆಯುತ್ತಿದ್ದಾರೆ. ಮತದಾನದ ಬೆನ್ನಲ್ಲೇ ನಟ, ಡಿಸಿಎಂ ಉದಯನಿಧಿ ಸ್ಟಾಲಿನ್ ಫ್ಯಾಮಿಲಿ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ. ಸದ್ಯ ಮತದಾರರ ಭವಿಷ್ಯ ಇವಿಎಂ ಯಂತ್ರಗಳಲ್ಲಿ ಭದ್ರವಾಗಿದೆ ಮೇ 4ರಂದು ಚುನಾವಣೆ ಫಲಿತಾಂಶ ಹೊರ ಬೀಳಲಿದೆ.

ಈ ಬಾರಿ ತಮಿಳುನಾಡು ಚುನಾವಣೆಯಲ್ಲಿ ದಾಖಲೆ ಮಟ್ಟದ ಮತದಾನವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ನಡೆದ ಚುನಾವಣೆ ಇದು ಅಧಿಕ ಎಂದು ವರದಿಯಾಗಿದೆ. ಚೆನ್ನೈನಲ್ಲಿ ಕೊಂಚ ಕಮ್ಮಿ ಎನಿಸಿದರೂ ಇನ್ನುಳಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭರ್ಜರಿ ಮತದಾನ ನಡೆದಿದೆ. ಶೇ. 85.15ರಷ್ಟು ಮತದಾನ ನಡೆದು ದಾಖಲೆ ನಿರ್ಮಾಣವಾಗಿದೆ. ಇದೇ ಮೊದಲ ಬಾರಿ ತಮಿಳುನಾಡಿನಲ್ಲಿ ಶೇ. 80ಕ್ಕಿಂತ ಹೆಚ್ಚುಪಟ್ಟು ಮತದಾನ ನಡೆದಂತಾಗಿದೆ. ತಮಿಳು ನಟ ವಿಜಯ್ ಇಂಪ್ಯಾಕ್ಟ್ ಇದು ಎಂದು ವಿಶ್ಲೇಷಿಸಲಾಗುತ್ತಿದೆ.

Massive polling numbers in Tamil Nadu ignite discussions on Vijay s impact

ಕಾಲಿವುಡ್ ಜನಪ್ರಿಯ ನಟ ವಿಜಯ್ ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗ ಪ್ರವೇಶಿಸಿದ್ದಾರೆ. ಟಿವಿಕೆ ಪಕ್ಷ ಈ ಬಾರಿ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದು ಗೊತ್ತೇಯಿದೆ. ವಿಜಯ್ ಹೋದ ಕಡೆಯೆಲ್ಲಾ ಜನಸಾಗರವೇ ಸೇರುತ್ತಿತ್ತು. ತಮಿಳುನಾಡಿನ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಸದ್ಯ ನಡೆದಿರುವ ಮತದಾನದ ಪ್ರಮಾಣವೇ ಅದಕ್ಕೆ ಸ್ಪಷ್ಟ ನಿದರ್ಶನ ಎನ್ನಲಾಗ್ತಿದೆ. ಮುಖ್ಯವಾಗಿ ಯುವಜನತೆ ಈ ಬಾರಿ ಮತದಾನ ಮಾಡಲು ಮುಗಿಬಿದ್ದಿದ್ದರು. ಅದಕ್ಕೆ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಕಾರಣ ಎನ್ನುವ ಮಾತುಗಳು ಕೇಳಿಬರ್ತಿದೆ.

ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಸಾಕಷ್ಟು ಜನ ರಾಜಕೀಯಕ್ಕೆ ಬಂದು ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಸ್ವಂತ ಪಕ್ಷ ಕಟ್ಟಿ ಮೊದಲ ಚುನಾವಣೆಯಲ್ಲೇ ಗೆದ್ದು ಸಿಎಂ ಆಗಿರುವವರು ಇದ್ದಾರೆ. ಆದರೆ ಸೋತು ಸುಣ್ಣವಾಗಿರುವವರು ಇದ್ದಾರೆ. ತೆರೆಮೇಲೆ ನಟನನ್ನು ನೋಡಿ ಶಿಳ್ಳೆ, ಚಪ್ಪಾಳೆ ಹೊಡೆಯುವ ಜನ ಬಂದು ಆತನಿಗೆ ಮತ ಹಾಕುತ್ತಾರೆ ಎಂದು ಹೇಳುವುದು ಕಷ್ಟ. ಸಾಕಷ್ಟು ಈ ಬಾರಿ ಈ ಲೆಕ್ಕಾಚಾರ ಸುಳ್ಳಾಗಿದೆ. ಆಂಧ್ರದಲ್ಲಿ ಎನ್‌ಟಿಆರ್ ಹಾಗೂ ತಮಿಳುನಾಡಿನಲ್ಲಿ ಎಂಜಿಆರ್ ಹೀಗೆ ಸ್ವಂತ ಪಕ್ಷ ಕಟ್ಟಿ ಮೊದಲ ಪ್ರಯತ್ನದಲ್ಲೇ ಗೆದ್ದು ಸಿಎಂ ಪಟ್ಟಕ್ಕೇರಿದ್ದರು. ಮುಂದೆ ಅವರು ಸೋಲುವ ಸಮಯ ಬಂತು.

Massive polling numbers in Tamil Nadu ignite discussions on Vijay s impact

ತೆಲುಗು ನಟ ಚಿರಂಜೀವಿ ಹಾಗೂ ಸಹೋದರ ಪವನ್ ಕಲ್ಯಾಣ್ ಕೂಡ ಸ್ವಂತ ಪಕ್ಷ ಕಟ್ಟಿ ಗೆಲ್ಲುವ ಸಾಹಸ ಮಾಡಿದ್ದರು. ಆದರೆ ಸಾಧ್ಯವಾಗಲಿಲ್ಲ. ಭಾರೀ ಮುಖಭಂಗ ಎದುರಿಸಿದ್ದರು. ಅಂತಿಮವಾಗಿ ಪವನ್ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದು ಆಂಧ್ರದ ಡಿಸಿಎಂ ಆಗಿದ್ದಾರೆ. ಸದ್ಯ ತಮಿಳುನಾಡಿನಲ್ಲಿ ವಿಜಯ್ ಗೆದ್ದು ಸಿಎಂ ಆಗಿಬಿಡುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅದು ಅಷ್ಟು ಸುಲಭವಲ್ಲ ಎನ್ನಲಾಗ್ತಿದೆ. ಆದರೆ ಒಳ್ಳೆ ಪ್ರಮಾಣದ ಮತಗಳು ಟಿವಿಕೆ ಪಕ್ಷಕ್ಕೆ ಸಿಕ್ಕುವ ನಿರೀಕ್ಷೆಯಿದೆ. 10-20 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬಹುದು ಎನ್ನುವ ಚರ್ಚೆ ಜೋರಾಗಿದೆ. ಎರಡು ಕಡೆ ಸ್ಪರ್ಧಿಸಿರುವ ಟಿವಿಕೆ ಪಕ್ಷದ ಸ್ಥಾಪಕ ವಿಜಯ್ ಗೆದ್ದು ಶಾಸಕರಾಗಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ.

ವಿಜಯ್ ಎಂಟ್ರಿಯಿಂದಲೇ ಈ ಬಾರಿ ದಾಖಲೆ ಮಟ್ಟದ ಮತದಾನ ನಡೆದಿದೆ ಎಂದು ಹೇಳಲಾಗ್ತಿದೆ. ಕರೂರಿನಲ್ಲಿ ಅತಿಹೆಚ್ಚು 92.63% ರಷ್ಟು ಮತದಾನವಾಗಿದೆ. ಕನ್ಯಾಕುಮಾರಿಯಲ್ಲಿ ಕಮ್ಮಿ ಅಂದ್ರೆ 75.61%ರಷ್ಟು ಮತದಾನ ನಡೆದಿದೆ. ಒಟ್ಟಾರೆ ಅಂದಾಜು 5.73 ಕೋಟಿ ಮತದಾರರ ಪೈಕಿ 4.87 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಬಾರಿ ಮತದಾನ ಬಹಳ ಕಲರ್‌ಫುಲ್ ಆಗಿ ಕಂಡು ಬಂತು. ಒಂದೇ ಕುಟುಂಬದ 3 ತಲೆಮಾರಿನ 16 ಮತದಾರರು ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಮದುವೆಯಾಗಿ ಮಂಟಪದಿಂದ ನವ ವಧು-ವರರು ಬಂದು ಮತ ಚಲಾಯಿದ್ದರು. ಇನ್ನು ಖಾಕಿ ಬಣ್ಣದ ಪ್ಯಾಂಟ್ ಹಾಗೂ ಬಿಳಿ ಬಣ್ಣ ಶರ್ಟ್ ತೊಟ್ಟು ಕೆಲವರು ಮತಗಟ್ಟೆಗಳಿಗೆ ಬಂದಿದ್ದರು. ಇದು ವಿಜಯ್ ಡ್ರೆಸ್ಸಿಂಗ್ ಸ್ಟೈಲ್‌. ಹಾಗಾಗಿ ಪರೋಕ್ಷವಾಗಿ ಅವರ ಅಭಿಮಾನಿಗಳು ಹೀಗೆ ಬೆಂಬಲ ಸೂಚಿಸಿದ್ದಾರೆ ಎನ್ನುವ ಚರ್ಚೆ ನಡೀತು. ಕೆಲ ಸೆಲೆಬ್ರೆಟಿಗಳು ಕೂಡ ಈ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಬಂದು ಮತ ಹಾಕಿದ್ದಾರೆ.

ಡಿಎಂಕೆ ಪಕ್ಷದ ಸ್ಟಾಲಿನ್ ಸದ್ಯ ತಮಿಳುನಾಡು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಈ ಬಾರಿ ಸ್ಟಾಲಿನ್ ಗೆಲ್ಲುವುದು ಅಷ್ಟು ಸುಲಭ ಅಲ್ಲ, ಟಿವಿಕೆ ಪಕ್ಷದಿಂದ ಚುನಾವಣೆಯಲ್ಲಿ ಬದಲಾವಣೆ ಆಗುತ್ತದೆ. ಡಿಎಂಕೆ ಪಕ್ಷಕ್ಕೆ ಬಹುಮತ ಸಿಗುವುದು ಕಷ್ಟ ಎನ್ನುವ ಲೆಕ್ಕಾಚಾರ ಜೋರಾಗಿದೆ. ಮೇ 4ರಂದು ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

Read more about: vijay politics kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X