ವಿಜಯ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಬಗ್ಗೆ ನಿರ್ಮಾಪಕರಿಂದ ಸ್ಪಷ್ಟನೆ
ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ ಅವರ ಹೊಸ ಸಿನಿಮಾ 'ಮಾಸ್ಟರ್' ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂಬ ಮಾತು ಜೋರಾಗಿ ಕೇಳಿಬರುತ್ತಿದೆ, ಈ ಬಗ್ಗೆ ಸಿನಿಮಾದ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.
ಇದೇ ವರ್ಷದ ಏಪ್ರಿಲ್ 9 ರಂದು ಮಾಸ್ಟರ್ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಈಗ ಚಿತ್ರಮಂದಿರಗಳು ತೆರೆದಿವೆಯಾದರೂ ಜನ ಚಿತ್ರಮಂದಿರಗಳತ್ತ ಬರಲು ಹಿಂದಡಿ ಇಡುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಗೆ ಮಾಸ್ಟರ್ ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಬದಲಿಗೆ ಒಟಿಟಿಯಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವ ಚಿಂತನೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ಮಾಪಕರು, ಯಾವುದೇ ಕಾರಣಕ್ಕೂ ಮಾಸ್ಟರ್ ಸಿನಿಮಾವನ್ನು ಒಟಿಟಿಗೆ ನೀಡುವುದಿಲ್ಲ ಎಂದಿದ್ದಾರೆ.

ನಿರ್ಮಾಪಕ ಕ್ಸೇವಿಯರ್ ಬ್ರಿಟ್ಟೊ ಅಧಿಕೃತ ಹೇಳಿಕೆ ನೀಡಿದ್ದು, ದೊಡ್ಡ ಒಟಿಟಿ ಫ್ಲಾಟ್‌ಫಾರ್ಮ್ ನವರು ಸಿನಿಮಾವನ್ನು ಮಾರುವಂತೆ ಮನವಿ ಮಾಡಿದ್ದರಂತೆ, ಆದರು ನಾವು ಅದನ್ನು ನಿರಾಕರಿಸಿದ್ದೇವೆ, ಮಾಸ್ಟರ್ ಅನ್ನು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ ಕ್ಸೇವಿಯರ್.
ಮಾಸ್ಟರ್ ನಿರ್ಮಾಪಕರ ಈ ನಿರ್ಧಾರ ವಿಜಯ್ ಅಭಿಮಾನಿಗಳಿಗೆ ಹಾಗೂ ಚಿತ್ರಮಂದಿರಗಳ ಮಾಲೀಕರಿಗೆ ಸಂತಸ ತಂದಿದೆ.


Click it and Unblock the Notifications











