ದೀಪಾವಳಿಗೆ ವಿಜಯ್ 'ಮಾಸ್ಟರ್' ಚಿತ್ರತಂಡದಿಂದ ಉಡುಗೊರೆ!
ದೀಪಾವಳಿ ಅಥವಾ ಸಂಕ್ರಾಂತಿ ಹಬ್ಬಕ್ಕೆ ಹೊಸ ಸಿನಿಮಾಗಳನ್ನು ರಿಲೀಸ್ ಮಾಡುವುದು ತಮಿಳು ನಟ ವಿಜಯ್ ಸಂಪ್ರದಾಯ. ಸಿನಿಮಾ ಬಿಡುಗಡೆ ಮಾಡಿಲ್ಲ ಅಂದರೂ ಟೀಸರ್, ಟ್ರೈಲರ್ ಹೀಗೆ ಏನಾದರೂ ಉಡುಗೊಡೆ ನೀಡ್ತಾರೆ.
ಎಲ್ಲ ಅಂದುಕೊಂಡಂತೆ ಆಗಿದ್ದರೆ ದೀಪಾವಳಿ ಹಬ್ಬಕ್ಕೆ ವಿಜಯ್ ನಟಿಸುತ್ತಿರುವ ಮಾಸ್ಟರ್ ಸಿನಿಮಾ ರಿಲೀಸ್ ಆಗಬಹುದಿತ್ತು. ಆದರೆ, ಕೊರೊನಾ ಹಿನ್ನೆಲೆ ಅದು ಸಾಧ್ಯವಾಗಲಿಲ್ಲ. ಹಾಗಂತ, ದೀಪಾವಳಿಗೆ ತಮ್ಮ ಅಭಿಮಾನಿಗಳನ್ನು ನಿರಾಸೆ ಮಾಡಲು ಇಷ್ಟವಿಲ್ಲದ ವಿಜಯ್ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿಂತಿಸಿದ್ದಾರೆ ಎನ್ನಲಾಗಿದೆ.
ಸದ್ಯದ ಮಾಹಿತಿ ಪ್ರಕಾರ, ದೀಪಾವಳಿ ಹಬ್ಬದ ಪ್ರಯುಕ್ತ ಮಾಸ್ಟರ್ ಸಿನಿಮಾ ಟೀಸರ್ ರಿಲೀಸ್ ಆಗಲಿದೆಯಂತೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಮಾಸ್ಟರ್ ಸಿನಿಮಾ ಒಟಿಟಿಯಲ್ಲಿ ತೆರೆಕಾಣುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಕೇಳಿ ಬಂದಿತ್ತು. ಈ ಸುದ್ದಿಯನ್ನು ಚಿತ್ರತಂಡ ನಿರಾಕರಿಸಿದೆ.
ಇನ್ನುಳಿದಂತೆ ಲೋಕೇಶ್ ಕನಕರಾಜ್ ಈ ಚಿತ್ರ ನಿರ್ದೇಶಿಸಿದ್ದು, ಮಾಳವಿಕಾ ಮೋಹನ್ ನಾಯಕಿಯಾಗಿದ್ದಾರೆ. ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ ರವಿಚಂದ್ರನ್ ಸಂಗೀತವಿದೆ.


Click it and Unblock the Notifications











