ಒಂದೇ ಮಲ್ಟಿಪ್ಲೆಕ್ಸ್ ನಲ್ಲಿ ದರ್ಬಾರ್ 87 ಶೋ: ಯಾವುದು ಆ ಚಿತ್ರಮಂದಿರ? ಎಲ್ಲಿದೆ?

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ನಯನತಾರ ನಟಿಸಿರುವ ದರ್ಬಾರ್ ಸಿನಿಮಾ ನಾಳೆ (ಜನವರಿ 9) ಜಗತ್ತಿನಾದ್ಯಂತ ತೆರೆಕಾಣುತ್ತಿದೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ಬರ್ತಿದ್ದು, ತಮಿಳುನಾಡು, ಕರ್ನಾಟಕ, ಆಂಧ್ರ-ತೆಲಂಗಾಣ ಹಾಗೂ ಮುಂಬೈನಲ್ಲಿ ಕ್ರೇಜ್ ಹೆಚ್ಚಿದೆ.

ಚೆನ್ನೈನ ಮಾಯಾಜಾಲ್ ಮಲ್ಟಿಪ್ಲೆಕ್ಸ್ ನಲ್ಲಿ ದರ್ಬಾರ್ ಸಿನಿಮಾ ತೆರೆಕಾಣುತ್ತಿದ್ದು, ಮೊದಲ ದಿನ 87 ಶೋ ನಡೆಯುತ್ತಿದೆ. 7.10 ನಿಮಿಷಕ್ಕೆ ಮೊದಲ ಶೋ ಆರಂಭವಾಗುತ್ತಿದ್ದು, ಪ್ರತಿ 5 ನಿಮಿಷ ಹಾಗೂ 10 ನಿಮಿಷಕ್ಕೂ ಒಂದೊಂದು ಶೋ ಇದೆ.

ಮಾಯಾಜಾಲ್ ಮಲ್ಟಿಪ್ಲೆಕ್ಸ್ ನಲ್ಲಿ ಒಟ್ಟು 16 ಸ್ಕ್ರೀನ್ ಇದೆ. ಎಲ್ಲ ಸ್ಕ್ರೀನ್ ಗಳಲ್ಲು ದರ್ಬಾರ್ ಸಿನಿಮಾ ಪ್ರದರ್ಶನವಾಗುತ್ತಿದೆ. ದಿನಪೂರ್ತಿ ದರ್ಬಾರ್ ಸಿನಿಮಾ ಪ್ರದರ್ಶಿಸುತ್ತಿದ್ದು, ರಜನಿ ಅಭಿಮಾನಿಗಳಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Mayajaal Multiplex Running 87 Shows In First Day Of Darbar

ಮೊದಲ ದಿನ ಮಾತ್ರವಲ್ಲ, ಎರಡನೇ ಹಾಗೂ ಮೂರನೇ ದಿನವೂ ಸುಮಾರು 70ಕ್ಕೂ ಅಧಿಕ ಶೋಗಳು ಪ್ರದರ್ಶನವಾಗುತ್ತಿದೆ. ಮೊದಲ ವಾರಾಂತ್ಯದ ಬಳಿಕ ಶೋ ಸಂಖ್ಯೆಯಲ್ಲಿ ಕಡಿತ ಆಗಿದೆ.

ಟಿಕೆಟ್ ಬುಕ್ಕಿಂಗ್ ನಲ್ಲಿ ಬಹುತೇಕ ಎಲ್ಲ ಶೋಗಳುಳಿಗೂ ಪ್ರೇಕ್ಷಕರಿದ್ದಾರೆ. ಇದು ಕೇವಲ ಮಾಯಜಾಲ್ ಮಲ್ಟಿಪ್ಲೆಕ್ಸ್ ಮಾತ್ರವಲ್ಲ, ಇನ್ನಿತರ ಕೆಲವು ಮಲ್ಟಿಫ್ಲೆಕ್ಸ್ ಗಳಲ್ಲೂ ಕೂಡ 25ಕ್ಕೂ ಅಧಿಕ ಶೋಗಳು ಮೊದಲನೇ ದಿನ ಪ್ರದರ್ಶನವಾಗ್ತಿದೆ.

More from Filmibeat

English summary
Superstar Rajinikanth starrer Darbar movie releasing on january 9th all over world. mayajaal multiplex running 87 shows in first day of darbar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X