ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ; ನಟಿ ಮೀರಾ ಬಂಧನದ ಬೆನ್ನಲ್ಲೇ ಬಾಯ್ ಫ್ರೆಂಡ್ ಕೂಡ ಅರೆಸ್ಟ್

By ಫಿಲ್ಮಿಬೀಟ್ ಡೆಸ್ಕ್

ತಮಿಳಿನ ವಿವಾದಾತ್ಮಕ ನಟಿ ಮೀರಾ ಮಿಥುನ್ ಬಂಧನದ ಬೆನ್ನಲ್ಲೇ ಬಾಯ್ ಫ್ರೆಂಡ್ ನನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಂದು ಬೆಳಗ್ಗೆ ಚೆನ್ನೈ ಕ್ರೈಂ ವಿಭಾಗದ ಪೋಲೀಸರು ಬಂಧಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿ, ನಟಿ ಮೀರಾ ಮಿಥುನ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ದಲಿತರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಮೀರಾ ವಿರುದ್ಧ ವಿಡುತಲೈ ಚಿರುತೈಗಳ್ ಕಚ್ಚಿ ಸಂಘಟನೆ ನಾಯಕ ವನ್ನಿ ಅರಸು ಅವರ ದೂರು ನೀಡಿದ್ದರು. ಇದೀಗ ದೂರಿನ ಮೇರೆಗೆ ಅರೆಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಇದೆ.

ಮೀರಾ ಬಂಧನ ಆಗುತ್ತಿದ್ದಂತೆ ಆಕೆಯ ಬಾಯ್ ಫ್ರೆಂಡ್ ಸ್ಯಾಮ್ ಅಭಿಷೇಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಡಿಯೋದಲ್ಲಿ ಜಾತಿ ನಿಂದನೆ ಹೇಳಿಕೆ ನೀಡಿರುವ ಮೀರಾಗೆ ಬಾಯ್ ಫ್ರೆಂಡ್ ಸ್ಯಾಮ್ ಕುಮ್ಮಕ್ಕು ಇದೆ ಎನ್ನುವ ಕಾರಣಕ್ಕೆ ಆತನನ್ನು ಬಂಧಿಸಿಸಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಮೀರಾ ಮತ್ತು ಬಾಯ್ ಫ್ರೆಂಡ್ ಸ್ಯಾಮ್ ಅಭಿಷೇಕ್ ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದು, ಲಿವಿಂಗ್ ರಿಲೇಶನ್ ಶಿಪ್ ನಲ್ಲಿರುವ ವಿಚಾರ ಈಗಾಗಲೇ ಬಹಿರಂಗವಾಗಿತ್ತು. ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಿದ್ದರು. ಇಬ್ಬರ ಸಾಕಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮುಂದೆ ಓದಿ..

ತಲೆಮರೆಸಿಕೊಂಡಿದ್ದ ಮೀರಾ

ತಲೆಮರೆಸಿಕೊಂಡಿದ್ದ ಮೀರಾ

ಮೀರಾ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಕೇರಳದಲ್ಲಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶನಿವಾರ (ಆಗಸ್ಟ್ 14) ಬಂಧಿಸಿದ್ದಾರೆ. ಪೊಲೀಸರು ಅರೆಸ್ಟ್ ಮಾಡಲು ಹೋದ ಸಂದರ್ಭದಲ್ಲಿ ಮೀರಾ ಮಿಥುನ್ ಹೈಡ್ರಾಮಾವೇ ಮಾಡಿದ್ದು, ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೊಲೀಸರ ಮುಂದೆ ಹೈಡ್ರಾಮ

ಪೊಲೀಸರ ಮುಂದೆ ಹೈಡ್ರಾಮ

ಬಂಧಿಸಲು ಮೀರಾ ಮಿಥುನ್ ಉಳಿದುಕೊಂಡಿದ್ದ ಕೋಣೆಗೆ ನುಗ್ಗಿದ ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ. ಚೆನ್ನೈ ಪೊಲೀಸರು ದೌರ್ಜನ್ಯ ಮಾಡ್ತಿದ್ದಾರೆ. ಮೂರು ಜನ ಅಧಿಕಾರಿಗಳು ಬಂದಿದ್ದಾರೆ. ನನಗೆ ಕಿರುಕುಳ ಕೊಡ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡ್ತಿದ್ದಾರೆ. ಪೊಲೀಸರು ನನಗೆ ಹಲ್ಲೆ ಮಾಡಿದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ನನ್ನನ್ನು ಅರೆಸ್ಟ್ ಮಾಡಲು ನಿಮಗೆ ಏನು ಅಧಿಕಾರ ಇದೆ, ಏಕೆ ನನ್ನನ್ನು ಬಂಧಿಸಲು ಬಂದಿದ್ದೀರಾ ಎಂದು ಈ ವೇಳೆ ಪೊಲೀಸರನ್ನು ಪ್ರಶ್ನಿಸಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ದಲಿತರ ಬಗ್ಗೆ ಮೀರಾ ಹೇಳಿದ್ದೇನು?

ದಲಿತರ ಬಗ್ಗೆ ಮೀರಾ ಹೇಳಿದ್ದೇನು?

ಇತ್ತೀಚಿಗೆ ಟಾಕ್ ಶೋ ಒಂದರಲ್ಲಿ ಮಾತನಾಡುವಾಗ ಪರಿಶಿಷ್ಟ ಜಾತಿ ಜನರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳುತ್ತಲೇ ಮಾತನಾಡಿ ಸಂಕಷ್ಟ ಮೈಮೇಲೆ ಎಳೆದುಕೊಂಡಿದ್ದರು. "ಸಿನಿಮಾರಂಗದಲ್ಲಿ ಎಲ್ಲಾ ತಪ್ಪುಗಳು ಮತ್ತು ದುಷ್ಪರಿಣಾಮಗಳಿಗೆ ಪರಿಶಿಷ್ಟ ಜಾತಿಯವರೇ ಕಾರಣ, ಅವರನ್ನು ಚಿತ್ರರಂಗದಿಂದ ಹೊರಹಾಕಬೇಕು. ಅವರು ಹೆಚ್ಚಾಗಿ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳಲ್ಲಿ ಭಾಗಿಯಾಗುವುದರಿಂದ ಸಮಸ್ಯೆಗಳನ್ನು ಎದುರಿಸುಬೇಕಾಗಿದೆ. ಯಾವುದೇ ಕಾರಣವಿಲ್ಲದೆ ಯಾರು ಅನಗತ್ಯವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ" ಎಂದು ಹೇಳಿದ್ದರು.

ಸಿನಿಮಾರಂಗದಿಂದ ಹೊರಹಾಕಬೇಕು

ಸಿನಿಮಾರಂಗದಿಂದ ಹೊರಹಾಕಬೇಕು

"ಚಿತ್ರರಂಗದಲ್ಲಿ ದಲಿತ ನಿರ್ದೇಶಕರು ಮತ್ತು ಇತರೆ ಜನರು ಚೀಪ್ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂಥವರನ್ನು ಸಿನಿಮಾರಂಗದಿಂದ ಹೊರಹಾಕುವ ಸಮಯವಿದು" ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕರು ಇದನ್ನು ಶೇರ್ ಮಾಡಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೀರಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯೆ ಹರಿದುಬರುತ್ತಿದೆ.

More from Filmibeat

English summary
Tamil Actress Meera Mithun boyfriend Sam Abhishek also arrested by Chennai police.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X