For Quick Alerts
  ALLOW NOTIFICATIONS  
  For Daily Alerts

  ಬಾಯ್‌ಫ್ರೆಂಡ್‌ ಜೊತೆ ಲಿಪ್‌ಲಾಕ್‌: ವಿಡಿಯೋ ಹಂಚಿಕೊಂಡ ಮೀರಾ ಮಿಥುನ್

  |

  'ಖಿನ್ನತೆ ಕಾಡ್ತಿದೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದು ಫೇಸ್‌ಬುಕ್‌ ಲೈವ್‌ನಲ್ಲಿ ಕಣ್ಣೀರು ಹಾಕಿದ್ದ ತಮಿಳು ನಟಿ, ಮಾಡೆಲ್ ಮೀರಾ ಮಿಥುನ್ ಈಗ ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾನ್ಸ್ ವಿಡಿಯೋ ಹಂಚಿಕೊಂಡು ಸುದ್ದಿಯಾಗಿದ್ದಾರೆ.

  14 ಸೆಕೆಂಡ್‌ಗಳ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ಮೀರಾ ಮಿಥುನ್ ತನ್ನ ಬಾಯ್ ಫ್ರೆಂಡ್ ಜೊತೆ ಲಿಪ್ ಲಾಕ್ ಮಾಡಿದ್ದಾರೆ. ಪರಸ್ಪರ ಇಬ್ಬರು ತಬ್ಬಿಕೊಂಡು, ಮುತ್ತಿನ ಸುರಿಮಳೆ ಸುರಿದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಖಿನ್ನತೆ ಕಾಡ್ತಿದೆ, ಹಿಂಸೆ ಹೆಚ್ಚಾಗಿದೆ, ಆತ್ಮಹತ್ಯೆ ಮಾಡಿಕೊಳ್ಳುವೆ: ತಮಿಳು ನಟಿ ಕಣ್ಣೀರುಖಿನ್ನತೆ ಕಾಡ್ತಿದೆ, ಹಿಂಸೆ ಹೆಚ್ಚಾಗಿದೆ, ಆತ್ಮಹತ್ಯೆ ಮಾಡಿಕೊಳ್ಳುವೆ: ತಮಿಳು ನಟಿ ಕಣ್ಣೀರು

  ಇದೇ ವರ್ಷ ಫೆಬ್ರವರಿಯಲ್ಲಿ ಮೀರಾ ಮಿಥುನ್ ಫೇಸ್‌ಬುಕ್ ಲೈವ್‌ನಲ್ಲಿ ಕಣ್ಣೀರು ಹಾಕಿದ್ದರು. ನನ್ನನ್ನು ಬದುಕಲು ಬಿಡುತ್ತಿಲ್ಲ, ನಾನು ಸಾಯುತ್ತೇನೆ, ಉದ್ದೇಶಪೂರ್ವಕವಾಗಿ ನನ್ನ ಜೀವನ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

  ಇನ್ನು ಲಾಕ್‌ಡೌನ್ ಸಮಯದಲ್ಲಿ ಮೀರಾ ಮಿಥುನ್ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ಫೋನ್ ಕಾಲ್ ಹಾಗೂ ವಾಟ್ಸಾಪ್ ಸಂದೇಶಗಳು ಬರುವುದು ಹೆಚ್ಚಾಗಿದೆಯಂತೆ. ಈ ತೊಂದರೆ ಬಹಳ ವರ್ಷದಿಂದಲೂ ಇದೆ. ಲಾಕ್‌ಡೌನ್ ಸಮಯದಲ್ಲಿ ಇದು ಹೆಚ್ಚಾಗಿದೆ ಎಂದು ಸ್ಕ್ರೀನ್ ಶಾರ್ಟ್‌ ಹಂಚಿಕೊಂಡಿದ್ದಾರೆ.

  ಟ್ವಿಟ್ಟರ್ ನಲ್ಲಿ ಜಗ್ಗೇಶ್ ಬಳಿ ಸಹಾಯಕ್ಕಾಗಿ ಬೇಡಿಕೊಂಡ ರೆಹಮಾನ್

  ಅಂದ್ಹಾಗೆ, 2017ರಲ್ಲಿ '8 ತೋಟಕ್ಕಲ್' ಚಿತ್ರದಲ್ಲಿ ನಟಿಸುವ ಮೂಲಕ ಇಂಡಸ್ಟ್ರಿ ಪ್ರವೇಶಿಸಿದ್ದರು. 'ಜೋಡಿ ನಂಬರ್ 1' ಹಾಗೂ ಬಿಗ್ ಬಾಸ್ 3ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು.

  English summary
  Tamil actress and Model Meera Mithun Shared Romantic Video in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X