ವಿಜಯ್ ಸೇತುಪತಿಗೆ ಕ್ಲೀನ್ ಬೌಲ್ಡ್ ಆದ ನಟಿ ಮೇಘನಾ ಗಾಂವ್ಕರ್

ವರ್ಷದ ಆರಂಭದಲ್ಲಿ ತೆರೆಕಂಡಿದ್ದ ತಮಿಳು ಸಿನಿಮಾ 'ಸೂಪರ್ ಡಿಲೆಕ್ಸ್' ವಿಮರ್ಶಾತ್ಮಕವಾಗಿ ಭಾರಿ ಮೆಚ್ಚುಗೆ ಗಳಿಸಿಕೊಂಡಿತ್ತು. ಭಾಷೆಯ ಗಡಿದಾಟಿ ಜನರಿಂದ ಪ್ರಶಂಸೆ ಪಡೆದುಕೊಂಡಿದ್ದ ಈ ಚಿತ್ರಕ್ಕೆ ಈಗ ಕನ್ನಡ ನಟಿ ಮೇಘನಾ ಗಾಂವ್ಕರ್ ಫಿದಾ ಆಗಿದ್ದಾರೆ.

ಇತ್ತೀಚಿಗಷ್ಟೆ 'ಸೂಪರ್ ಡಿಲೆಕ್ಸ್' ಸಿನಿಮಾ ನೋಡಿರುವ ಮೇಘನಾ ನಟ ವಿಜಯ್ ಸೇತುಪತಿ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ನಟಿ ''ಸೂಪರ್ ಡಿಲೆಕ್ಸ್ ಸಿನಿಮಾ ನೋಡಿದೆ. ವಿಜಯ್ ಸೇತುಪತಿ ಸರ್ ನೀವು ಅದ್ಭುತ. ಎಷ್ಟೊಂದು ಸುಂದರವಾಗಿದೆ ಶಿಲ್ಪಾ ಪಾತ್ರ'' ಎಂದು ಖುಷಿ ಹಂಚಿಕೊಂಡಿದ್ದಾರೆ.

Meghana Gaonkar Liked Vijay Sethupathi Acting In Super Deluxe

ಈ ಚಿತ್ರದಲ್ಲಿ ವಿಜಯ್ ಸೇತುಪತಿ ಮಂಗಳಮುಖಿ ಪಾತ್ರದಲ್ಲಿ ನಟಿಸಿದ್ದಾರೆ. ತ್ಯಾಗರಾಜನ್ ಕುಮಾರರಾಜ ನಿರ್ದೇಶನ ಮಾಡಿದ್ದು, ರಮ್ಯಾ ಕೃಷ್ಣನ್, ಸಮಂತಾ ಅಕ್ಕಿನೇನಿ, ಫಾವದ್ ಫಸೀಲ್, ಗಾಯಿತ್ರಿ ಸೇರಿದಂತೆ ಹಲವರು ನಟಿಸಿದ್ದಾರೆ.

ಮೇಘನಾ ಗಾಂವ್ಕರ್ ಹಾಗೂ ಜಗ್ಗೇಶ್ ನಟನೆಯ 'ಕಾಳಿದಾಸ ಕನ್ನಡ ಮೇಷ್ಟ್ರು' ಎರಡು ವಾರದ ಹಿಂದೆ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಹಿಂದೆ ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ, ಚಾರ್ ಮಿನರ್, ನಮ್ ಏರಿಯಲಿ ಒಂದಿನ ಅಂತಹ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kannada actress Meghana Gaonkar liked Vijay Sethupathi performance in Super Deluxe movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X