Jailer Vs Leo: "ಜೈಲರ್' ಕಲೆಕ್ಷನ್ 'ಲಿಯೋ' ಮೀರಿಸಿದರೆ ಮೀಸೆ ತೆಗೆಯುತ್ತೇನೆ" ಎಂದಿದ್ದ ತಮಿಳು ನಟ ಈಗ ಏನಂತಾರೆ?

ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ವಿಶ್ವದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಸಿನಿಮಾ 148 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈ ವಿಚಾರವನ್ನು ಸ್ವತಃ ಚಿತ್ರತಂಡ ಘೋಷಿಸಿತ್ತು. ಆದರೆ 2ನೇ ದಿನ ಕಲೆಕ್ಷನ್ ಡ್ರಾಪ್ ಆಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದೇ ಇದಕ್ಕೆ ಕಾರಣ.

ಕಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಟೈಟಲ್‌ಗಾಗಿ ರಜನಿಕಾಂತ್ ಹಾಗೂ ವಿಜಯ್ ಅಭಿಮಾನಿಗಳ ನಡುವೆ ತಿಕ್ಕಾಟ ನಡೀತಿದೆ. ಅದೇ ಕಾರಣಕ್ಕೆ 'ಜೈಲರ್' ಸಕ್ಸಸ್ ಬೆನ್ನಲ್ಲೇ ಈ ದಾಖಲೆಯನ್ನು 'ಲಿಯೋ' ಮುರಿಯುತ್ತದೆ ಎನ್ನುವ ಚರ್ಚೆ ಶುರುವಾಯಿತು. ಈ ಚರ್ಚೆ ತಾರಕ್ಕೇರಿದ್ದು ಸುಳ್ಳಲ್ಲ. ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಲಿಯೋ' ದೊಡ್ಡಮಟ್ಟದ ಓಪನಿಂಗ್ ಪಡೆದುಕೊಂಡಿದೆ. ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಅನ್ನೋದು ಗೊತ್ತಿಲ್ಲ.

Messai-Rajendran-on-leo-collection

'ಲಿಯೋ'ಗೆ ಹೋಲಿಸಿದರೆ 'ಜೈಲರ್' ಓಪನಿಂಗ್ ಕಮ್ಮಿ ಎನ್ನಬಹುದು. ಆದರೆ ತಲೈವಾ ಸಿನಿಮಾ ನಿಧಾನವಾಗಿ ಥಿಯೇಟರ್‌ಗಳಲ್ಲಿ ಕಚ್ಚಿಕೊಂಡಿತ್ತು. ವಿಜಯ್ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿತ್ತು. ಕರ್ನಾಟಕದಲ್ಲೂ ದಾಖಲೆ ಮಟ್ಟದಲ್ಲಿ ಟಿಕೆಟ್ ಬುಕ್ ಆಗಿತ್ತು. 5 ಪಟ್ಟು ಹೆಚ್ಚು ಹಣ ಕೊಟ್ಟು ಟಿಕೆಟ್ ಖರೀದಿಸಿ ಸಿನಿಮಾ ನೋಡಿದವರು ಇದ್ದಾರೆ. ಆದರೆ ಎರಡನೇ ದಿನ 'ಲಿಯೋ' ಕಲೆಕ್ಷನ್ ಗಣನೀಯವಾಗಿ ಕಮ್ಮಿ ಆಗಿದೆ.

ದಸರಾ ಸಂಭ್ರಮದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ನಿರೀಕ್ಷೆಯಿದೆ. ಹಾಗಾಗಿ 'ಜೈಲರ್' ದಾಖಲೆಯನ್ನು ಸಿನಿಮಾ ಅನಾಯಾಸವಾಗಿ ಮುರಿಯುತ್ತದೆ ಎನ್ನುವ ವಾದವೂ ಇದೆ. ತಮಿಳು ಪೋಷಕ ನಟ ಮೀಸೆ ರಾಜೇಂದ್ರನ್ 'ಲಿಯೋ' ಸಿನಿಮಾ 'ಜೈಲರ್' ಕಲೆಕ್ಷನ್ ದಾಖಲೆ ಮುರಿದರೆ ತಮ್ಮ ಮೀಸೆ ತೆಗೆಯುವುದಾಗಿ ಸವಾಲು ಹಾಕಿದ್ದರು. ಇದೇ ಕಾರಣಕ್ಕೆ ಮೀಸೆ ರಾಜೇಂದ್ರನ್ ಬಹಳ ಟ್ರೋಲ್ ಆಗಿದ್ದರು.

Messai-Rajendran-on-leo-collection

ವಿಜಯ್ ಅಭಿಮಾನಿಗಳು ಮೀಸೆ ಬೋಳಿಸಿಕೊಳ್ಳುವುದಕ್ಕೆ ಸಿದ್ಧವಾಗು ಎಂದಿದ್ದರು. ಸದ್ಯ ಚಿತ್ರದ ಓಪನಿಂಗ್ ನೋಡಿ 'ಲಿಯೋ' ಕಂಡಿತ 'ಜೈಲರ್' ದಾಖಲೆ ಮುರಿಯುತ್ತದೆ ಎನ್ನಲಾಗ್ತಿದೆ. ಹಾಗಾಗಿ ಇದೀಗ ಮತ್ತೆ ಮೀಸೆ ರಾಜೇಂದ್ರನ್ ಹೇಳಿಕೆ ಚರ್ಚೆ ಬಂದಿದೆ. ಸದ್ಯ ಸಿನಿಮಾ ನೋಡಿ ಮತ್ತೆ ರಾಜೇಂದ್ರನ್ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಈಗ ಕೂಡ ನನ್ನ ಮಾತಿಗೆ ಬದ್ಧನಾಗಿದ್ದೇನೆ. 'ಲಿಯೋ' ಸಿನಿಮಾ ರಜನಿಕಾತ್ ನಟನೆಯ 'ಜೈಲರ್' ಹಾಗೂ '2.0' ಸಿನಿಮಾ ದಾಖಲೆ ಮುರಿದರೆ ನನ್ನ ಮೀಸೆ ತೆಗೆಯುತ್ತೇನೆ. ಮೊದಲ ದಿನದ ಕಲೆಕ್ಷನ್ ನೋಡಿ ಈಗಲೇ ನಿರ್ಧಾರಕ್ಕೆ ಬರಬೇಡಿ. ಮುಂದೆ ಸಿನಿಮಾ ಕಲೆಕ್ಷನ್ ಏನಾಗುತ್ತದೆ ನೋಡ್ತಾಯಿರಿ" ಎಂದಿದ್ದಾರೆ.

ಮೊದಲ 148 ಕೋಟಿ ರೂ. ಗಳಿಕೆ ಕಂಡಿದ್ದ ಸಿನಿಮಾ 2ನೇ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ಲೆಕ್ಕ ಇನ್ನಷ್ಟೆ ಸಿಗಬೇಕಿದೆ. ಚಿತ್ರತಂಡವೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಬೇಕಿದೆ. ಇನ್ನು 'ಲಿಯೋ' ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸಿದ್ದು ಅರ್ಜುನ್ ಸರ್ಜಾ, ಸಂಜಯ್ ದತ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಆಂಧ್ರ, ತೆಲಂಗಾಣದಲ್ಲಿ 2 ದಿನಕ್ಕೆ 'ಲಿಯೋ' ಸಿನಿಮಾ 24 ಕೋಟಿ ರೂ. ಗಳಿಕೆ ಕಂಡಿದೆ. ಇನ್ನುಳಿದಂತೆ ಕೇರಳ, ಕರ್ನಾಟಕ, ತಮಿಳುನಾಡಿನಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ನಿರ್ಮಾಪಕರು ಮಾತನಾಡಿ "ಲಿಯೋ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುವುದು ಅನುಮಾನ ಎಂದಿದ್ದಾರೆ. ಹಿಂದಿ ಬೆಲ್ಟ್‌ನಲ್ಲಿ ಹೆಚ್ಚು ಕಲೆಕ್ಷನ್ ಆಗಲ್ಲ. ಇನ್ನು ತಮಿಳುನಾಡಿನಲ್ಲಿ ಅರ್ಲಿ ಮಾರ್ನಿಂಗ್ ಶೋಗಳಿಗೆ ಅವಕಾಶ ಸಿಗಲಿಲ್ಲ. ಇದರಿಂದಲೂ ನಮಗೆ ಹಿನ್ನಡೆ ಆಯಿತು" ಎಂದಿದ್ದಾರೆ.

More from Filmibeat

English summary
Messai Rajendran on leo boxoffice report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X