For Quick Alerts
  ALLOW NOTIFICATIONS  
  For Daily Alerts

  ನಯನತಾರ 'ಮೂಕುತಿ ಅಮ್ಮನ್' ಚಿತ್ರಕ್ಕೆ ಮೊದಲ ದಿನವೇ ಆಘಾತ

  |

  ದೀಪಾವಳಿ ಹಬ್ಬದ ವಿಶೇಷವಾಗಿ ಲೇಡಿ ಸೂಪರ್ ಸ್ಟಾರ್ ನಯತನಾರ ನಟನೆಯ 'ಮೂಕುತಿ ಅಮ್ಮನ್' ಸಿನಿಮಾ ಬಿಡುಗಡೆಯಾಗಿದೆ. ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಈ ಚಿತ್ರ ಕೊನೆಗೂ ಆನ್‌ಲೈನ್‌ವಲ್ಲಿ ತೆರೆಕಂಡಿದೆ.

  ನವೆಂಬರ್ 14 ರಂದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನಯನತಾರ ಹೊಸ ಸಿನಿಮಾ ರಿಲೀಸ್ ಆಗಿದೆ. ಆದ್ರೆ, ಮೊದಲ ದಿನವೇ ಈ ಚಿತ್ರಕ್ಕೆ ಪೈರಸಿಗೆ ಒಳಗಾಗಿದೆ.

  ಅನ್‌ಲೈನ್ ರಿಲೀಸ್ ಆದರೂ ತಪ್ಪುತ್ತಿಲ್ಲ ಪೈರಸಿ: ಸೂರ್ಯ ಚಿತ್ರಕ್ಕೆ ಮೊದಲ ದಿನವೇ ಶಾಕ್ಅನ್‌ಲೈನ್ ರಿಲೀಸ್ ಆದರೂ ತಪ್ಪುತ್ತಿಲ್ಲ ಪೈರಸಿ: ಸೂರ್ಯ ಚಿತ್ರಕ್ಕೆ ಮೊದಲ ದಿನವೇ ಶಾಕ್

  ಟೆಲಿಗ್ರಾಪ್ ಮತ್ತು ಇತರೆ ವೆಬ್‌ಸೈಟ್‌ಗಳಲ್ಲಿ ಮೂಕುತಿ ಅಮ್ಮನ್ ಸಿನಿಮಾ ನಕಲು ಲೀಕ್ ಆಗಿದೆ. ಇದು ಸಹಜವಾಗಿ ಚಿತ್ರತಂಡಕ್ಕೆ ಆಘಾತ ತಂದಿದೆ.

  ಇದಕ್ಕೂ ಮುಂಚೆ ಮೇ 1 ರಂದು ಮೂಕುತಿ ಅಮ್ಮನ್ ಸಿನಿಮಾ ಚಿತ್ರಮಂದಿರದಲ್ಲಿ ರಿಲೀಸ್ ಆಗುವುದಾಗಿ ಹೇಳಿತ್ತು. ಆದ್ರೆ, ಲಾಕ್‌ಡೌನ್ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆನ್‌ಲೈನ್‌ನಲ್ಲಿ ಪ್ರದರ್ಶನ ಕಂಡಿದೆ.

  ಆರ್‌ಜೆ ಬಾಲಾಜಿ ಈ ಚಿತ್ರ ನಿರ್ದೇಶನ ಮಾಡಿದ್ದು, ಭಕ್ತಿ ಪ್ರಧಾನ ಹಾಸ್ಯಮಯ ಸಿನಿಮಾ ಇದಾಗಿದೆಯಂತೆ. ಸುಮಾರು 20 ಕೋಟಿ ಬೆಲೆಗೆ ಚಿತ್ರದ ಡಿಜಿಟಲ್ ಹಕ್ಕು ಸೇಲ್ ಆಗಿದೆ ಎಂಬ ಮಾಹಿತಿ ಇದೆ.

  ಸೈಬರ್ ರಾಣೆ ಮೆಟ್ಟಿಲೇರಿದ Vinod Raj | Filmibeat Kannada

  ಇತ್ತೀಚಿಗಷ್ಟೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ತೆರೆಕಂಡಿದ್ದ ಸೂರರೈ ಪೊಟ್ರು ಸಿನಿಮಾ ಸಹ ಮೊದಲ ದಿನವೇ ಪೈರಸಿ ಆಗಿತ್ತು. ಇನ್ನು ಮೂಕತಿ ಅಮ್ಮನ್ ಚಿತ್ರದಲ್ಲಿ ನಯನತಾರ ದೇವಿ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಆರ್‌ಜೆ ಬಾಲಾಜಿ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Tamil actress nayanthara starrer Mookuthi Amman movie release in Disney+ Hotstar. but, movie was leaked in online websites.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X