India
  For Quick Alerts
  ALLOW NOTIFICATIONS  
  For Daily Alerts

  ಆಲ್ ಇಂಡಿಯಾ ಪಾಪುಲರ್ ನಟರಲ್ಲಿ ದಳಪತಿ ವಿಜಯ್ ನಂ 1: ಯಶ್‌ಗೆ ಎಷ್ಟನೇ ಸ್ಥಾನ?

  |

  2022ರ ಮೊದಲಾರ್ಧ ಮುಗಿಯುತ್ತಾ ಬಂತು. ಮುಂದಿನ ತಿಂಗಳಿಂದ ಎರಡನೇ ದ್ವಿತಿಯಾರ್ಧ ಆರಂಭ ಆಗುತ್ತೆ. ಐದು ತಿಂಗಳ ಅಂತರದಲ್ಲಿ ಹಲವು ಸಿನಿಮಾಗಳು ಗೆದ್ದಿವೆ. ಕೆಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಇನ್ನೂ ಕೆಲವು ಸಿನಿಮಾ ದಾಖಲೆಯನ್ನೇ ಬರೆದಿವೆ. ಸ್ಟಾರ್ ಆಗಿದ್ದವರು ಸೂಪರ್‌ಸ್ಟಾರ್ ಆಗಿದ್ದಾರೆ. ಸೂಪರ್‌ಸ್ಟಾರ್ ಆಗಿದ್ದವರು ಮೆಗಾ ಸ್ಟಾರ್ ಆಗಿದ್ದಾರೆ.

  ಈ ವರ್ಷ 6 ನೇ ತಿಂಗಳು ಸಮೀಪಿಸುತ್ತಿರುವ ಬೆನ್ನಲ್ಲೇ ಓರ್ಮ್ಯಾಕ್ಸ್ ಮೀಡಿಯಾ ಅನ್ನೊ ಸಂಸ್ಥೆಯೊಂದು ಸರ್ವೆಯೊಂದನ್ನು ಮಾಡಿದೆ. ಏಪ್ರಿಲ್ ತಿಂಗಳಿಲ್ಲಿ ಆಲ್‌ ಇಂಡಿಯಾ ಲೆವೆಲ್‌ನಲ್ಲಿ ಟಾಪ್‌ 10 ಪಟ್ಟಿಯಲ್ಲಿರುವ ನಟರ ಹೆಸರುಗಳನ್ನು ಬಹಿರಂಗ ಪಡಿಸಿದೆ. ಓರ್ಮ್ಯಾಕ್ಸ್ ಸಂಸ್ಥೆ ಮಾಡಿದ ಸರ್ವೆಯಲ್ಲಿ ದಕ್ಷಿಣ ಭಾರತದ ನಟರ ಪ್ರಾಬಲ್ಯವೇ ಹೆಚ್ಚಿದೆ. ಈ ಪಟ್ಟಿಯಲ್ಲಿ ಯಶ್ ಕೂಡ ಸ್ಥಾನ ಪಡೆದಿದ್ದಾರೆ.

  ಯಶ್ ಮುಂದಿನ ಸಿನಿಮಾಗೆ ಮುಹೂರ್ತ ಫಿಕ್ಸ್ ಆಯ್ತಾ? ಕೆವಿಎನ್ ಸಂಸ್ಥೆ ಹೇಳಿದ್ದೇನು?ಯಶ್ ಮುಂದಿನ ಸಿನಿಮಾಗೆ ಮುಹೂರ್ತ ಫಿಕ್ಸ್ ಆಯ್ತಾ? ಕೆವಿಎನ್ ಸಂಸ್ಥೆ ಹೇಳಿದ್ದೇನು?

  ಇಂಡಿಯಾದ ಜನಪ್ರೀಯ ನಟ ವಿಜಯ್ , ಯಶ್ ಗೆ ಯಾವ ಸ್ಥಾನ ? | Vijay | Yash | Indias No1 Actor
  ದಳಪತಿ ವಿಜಯ್ ನಂ 1

  ದಳಪತಿ ವಿಜಯ್ ನಂ 1

  ಆಲ್ ಇಂಡಿಯಾ ಲೆವಲ್‌ನಲ್ಲಿ ಏಪ್ರಿಲ್ ತಿಂಗಳಲ್ಲಿ ಯಾವ ನಟ ಹೆಚ್ಚು ಜನಪ್ರಿಯನಾಗಿದ್ದಾನೆ ಎಂಬ ಸರ್ವೆಯನ್ನು ಮಾಡಲಾಗಿತ್ತು. ಓರ್ಮ್ಯಾಕ್ಸ್ ಮೀಡಿಯಾ ಮಾಡಿದ ಈ ಸರ್ವೆಯಲ್ಲಿ ತಮಿಳಿನ ವಿಜಯ್ ದಳಪತಿ ಮೊದಲ ಸ್ಥಾನದಲ್ಲಿದ್ದಾರೆ. ಏಪ್ರಿಲ್ ತಿಂಗಳಲ್ಲಿ ವಿಜಯ್ ಅಭಿನಯಿಸಿದ್ದ 'ಬೀಸ್ಟ್' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿದ್ದರೂ, ದಳಪತಿ ವಿಜಯ್ ಪಾಪುಲಾರಿಟಿಯೇನು ಕಮ್ಮಿಯಾಗಿಲ್ಲ. 'ಕೆಜಿಎಫ್ 2' ಜೊತೆ ವಿಜಯ್ ಸಿನಿಮಾ 'ಬೀಸ್ಟ್' ಪೈಪೋಟಿಗೆ ಇಳಿದಿತ್ತು. ಆದರೆ, ಸಿನಿಮಾ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ.

  ಯಶ್‌ಗೆ 7ನೇ ಸ್ಥಾನ

  ಯಶ್‌ಗೆ 7ನೇ ಸ್ಥಾನ

  ಇದೇ ಪಟ್ಟಿಯಲ್ಲಿ ಯಶ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕನ್ನಡದ ಏಕೈಕ ನಟ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, 'ಕೆಜಿಎಫ್ 2' ಎಫೆಕ್ಟ್ ಇಲ್ಲೂ ಎದ್ದು ಕಾಣುತ್ತಿದೆ. ಏಪ್ರಿಲ್ 14ರಂದು 'ಕೆಜಿಎಫ್ 2' ರಿಲೀಸ್ ಆಗಿತ್ತು. ಈ ಸಿನಿಮಾ ಬಿಡುಗಡೆಗೂ ಮುನ್ನ ಹಾಗೂ ಬಿಡುಗಡೆಯ ನಂತರ ಭಾರೀ ಹೈಪ್‌ನಲ್ಲಿತ್ತು. ಅಲ್ಲದೆ ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದ್ದರಿಂದ ಯಶ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.

  ಟಾಪ್ 10 ನಟರು ಇವರೇ

  ಟಾಪ್ 10 ನಟರು ಇವರೇ

  ಏಪ್ರಿಲ್ ತಿಂಗಳ ಟಾಪ್ 10 ನಟರ ಲಿಸ್ಟ್ ಅನ್ನು ರಿಲೀಸ್ ಮಾಡಲಾಗಿದೆ. ದಳಪತಿ ವಿಜಯ್ ನಂ 1 ಸ್ಥಾನದಲ್ಲಿದ್ದರೆ. ಜೂ.ಎನ್‌ಟಿಆರ್, ಪ್ರಭಾಸ್, ಅಲ್ಲು ಅರ್ಜುನ್, ಅಕ್ಷಯ್ ಕುಮಾರ್, ಅಜಿತ್, ಯಶ್, ರಾಮ್‌ ಚರಣ್, ಸೂರ್ಯ ಹಾಗೂ ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಈ ಪಟ್ಟಿಯಲ್ಲಿದ್ದಾರೆ. ಆ ಲಿಸ್ಟ್ ಹೀಗಿದೆ.

  ಟಾಪ್‌ 10 ಪಟ್ಟಿಯಲ್ಲಿರುವ ನಟರು

  ದಳಪತಿ ವಿಜಯ್ ನಂ 1
  ಜೂ ಎನ್‌ಟಿಆರ್ ನಂ 2
  ಪ್ರಭಾಸ್ ನಂ 3
  ಅಲ್ಲು ಅರ್ಜುನ್ ನಂ 4
  ಅಕ್ಷಯ್ ಕುಮಾರ್ ನಂ 5
  ಅಜಿತ್ ನಂ 6
  ಯಶ್ ನಂ 7
  ರಾಮ್ ಚರಣ್ ನಂ 8
  ಸೂರ್ಯ ನಂ 9
  ಮಹೇಶ್ ಬಾಬು ನಂ 10

  ಈ ಪಟ್ಟಿಯಲ್ಲಿ ಬಾಲಿವುಡ್‌ನ ಏಕೈಕ ನಟ

  ಈ ಪಟ್ಟಿಯಲ್ಲಿ ಬಾಲಿವುಡ್‌ನ ಏಕೈಕ ನಟ


  ಓರ್ಮ್ಯಾಕ್ಸ್ ಟಾಪ್ 10 ಪಟ್ಟಿಯಲ್ಲಿ ಬಾಲಿವುಡ್‌ನ ಏಕೈಕ ನಟ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. ಅಕ್ಷಯ್ ಕುಮಾರ್ ಬಿಟ್ಟರೆ, ಬೇರೆ ಯಾವುದೇ ನಟನಿಗೂ ಈ ಇಲ್ಲಿ ಅವಕಾಶ ಸಿಕ್ಕಿಲ್ಲ. ಸದ್ಯ ಅಕ್ಷಯ್ ಕುಮಾರ್ ಅಭಿನಯದ 'ಪೃಥ್ವಿರಾಜ್' ಸಿನಿಮಾ ಬಿಡುಗಡೆ ಸಜ್ಜಾಗಿದ್ದು, ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಮೇ ತಿಂಗಳಲ್ಲಿ ಸ್ಥಾನದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.

  English summary
  Ormax media survey: Thalapathy Vijay Top in the list, KGF Chapter 2 star Yash in 7th Position, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X