2021ರಲ್ಲಿ ಅತಿ ಹೆಚ್ಚು ಬಳಕೆಯಾದ ಹ್ಯಾಷ್‌ಟ್ಯಾಗ್ ಯಾವ ಸಿನಿಮಾದ್ದು?
2021ರ ಮೊದಲಾರ್ಧದಲ್ಲಿ ಟ್ವಿಟ್ಟರ್ ತಾಣದಲ್ಲಿ ಹೆಚ್ಚು ಸದ್ದು ಮಾಡಿದ ಚಿತ್ರಗಳ ಪೈಕಿ ತಮಿಳು ಇಂಡಸ್ಟ್ರಿ ಅಗ್ರಸ್ಥಾನ ಪಡೆದುಕೊಂಡಿದೆ. ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾದ ಸಿನಿಮಾ ಹ್ಯಾಷ್‌ಟ್ಯಾಗ್ ಅಜಿತ್ ಕುಮಾರ್ ನಟನೆಯ ವಾಲಿಮೈ (valimai) ಚಿತ್ರದ್ದು ಎನ್ನುವುದು ವಿಶೇಷ.
'ವಾಲಿಮೈ' ಸಿನಿಮಾ ಬಿಟ್ಟು ಹೆಚ್ಚು ಸದ್ದು ಮಾಡಿರುವ ಸಿನಿಮಾ ವಿಜಯ್ ನಟನೆಯ ಮಾಸ್ಟರ್. ವಾಲಿಮೈ ಚಿತ್ರ ಇನ್ನು ಬಿಡುಗಡೆಯಾಗಿಲ್ಲ. ಇತ್ತೀಚಿಗಷ್ಟೆ ಚಿತ್ರದ ಫಸ್ಟ್ ಲುಕ್ ಹಾಗೂ ಹಾಡು ರಿಲೀಸ್ ಆಗಿತ್ತು.
ಆದರೆ, ಮಾಸ್ಟರ್ ಸಿನಿಮಾ ಜನವರಿ ತಿಂಗಳಲ್ಲಿಯೇ ರಿಲೀಸ್ ಆಗಿದೆ. ಕೋವಿಡ್ ಸಂಕಷ್ಟದ ನಡುವೆಯೂ ತೆರೆಗೆ ಬಂದಿದ್ದ ಈ ಚಿತ್ರ 200 ಕೋಟಿಗೂ ಅಧಿಕ ಬಿಸಿನೆಸ್ ಮಾಡಿತ್ತು. ವಿಜಯ್ ಮತ್ತು ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದ ಈ ಚಿತ್ರಕ್ಕೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದರು.

ವಾಲಿಮೈ, ಮಾಸ್ಟರ್ ಬಳಿಕ ತೆಲುಗು ನಟ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಚಿತ್ರದ ಹ್ಯಾಷ್‌ಟ್ಯಾಗ್ ಸದ್ದು ಮಾಡಿದೆ. 2022ರ ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ತೆರೆಗೆ ಬರ್ತಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ #ಅಜಿತ್ ಕುಮಾರ್ ಹ್ಯಾಷ್‌ಟ್ಯಾಗ್ ಹೆಚ್ಚು ಬಳಕೆಯಾಗಿದೆ. ಐದನೇ ಸ್ಥಾನದಲ್ಲಿ #ದಳಪತಿ65 (ಬೀಸ್ಟ್ ಸಿನಿಮಾ) ಬಗ್ಗೆ ಹೆಚ್ಚು ಟ್ವೀಟ್ ಮಾಡಲಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಚಿತ್ರೀಕರಣ ಸಾಗ್ತಿದೆ. ಇನ್ನು ಸಿನಿಮಾ ಹ್ಯಾಷ್‌ಟ್ಯಾಗ್ ನೋಡಿದ್ರೆ 'ವಕೀಲ್ ಸಾಬ್' ಚಿತ್ರದ ಬಗ್ಗೆಯೂ ಹೆಚ್ಚು ಬಳಕೆಯಾಗಿದೆ.
ಅಂದ್ಹಾಗೆ, ಇಂದು ಹ್ಯಾಷ್‌ಟ್ಯಾಗ್ ಡೇ. ಹಾಗಾಗಿ, 2021ರ ಮೊದಲಾರ್ಧದಲ್ಲಿ ಭಾರತದಲ್ಲಿ ಹೆಚ್ಚು ಬಳಕೆಯಾದ ಟ್ವಿಟ್ಟರ್ ಹ್ಯಾಷ್‌ಟ್ಯಾಗ್ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಿನಿಮಾ ಹ್ಯಾಷ್‌ಟ್ಯಾಗ್ ಹೆಚ್ಚಿದೆ.

1 #Valimai
2 #Master
3 #sarkaruvaaripaata
4 #ajithkumar
5 #thalapathy65
6 #iheartawards
7 #rubinadilaik
8 #bts
9 #covie19
10 #vakeelsaab


Click it and Unblock the Notifications











