For Quick Alerts
  ALLOW NOTIFICATIONS  
  For Daily Alerts

  ಯುವ ಸಿನಿಮಾ ವಿಮರ್ಶಕ ಸಾವು: ರಶ್ಮಿಕಾ, ರಿಷಬ್, ದುಲ್ಕರ್ ಸೇರಿ ಹಲವರ ಸಂತಾಪ

  |

  ಯುವ ಸಿನಿಮಾ ವಿಮರ್ಶಕ, ಸಿನಿಮಾ ಟ್ರೇಡ್ ವಿಶ್ಲೇಷಕ ಕೌಶಿಕ್ ಎಲ್‌ಎಂ ನಿನ್ನೆ ಹಠಾತ್ ನಿಧನ ಹೊಂದಿದ್ದು, ಅವರಿಗೆ 35 ವರ್ಷ ವಯಸ್ಸಾಗಿತ್ತು. ನಟ ಯಶ್ ಸೇರಿದಂತೆ ಹಲವು ಸೆಲೆಬ್ರಿಟಿಗಳನ್ನು ಕೌಶಿಕ್ ಸಂದರ್ಶಿಸಿದ್ದರು, ಹಲವು ಸಿನಿಮಾಗಳಿಗೆ ಉತ್ತಮ ವಿಮರ್ಶೆ ನೀಡಿದ್ದರು.

  ಕೌಶಿಕ್ ನಿಧನ ಹೊಂದುವ ಕೆಲವು ಗಂಟೆಗಳ ಹಿಂದೆಯಷ್ಟೆ ರಿಷಬ್ ಶೆಟ್ಟಿ ನಟನೆಯ 'ಕಾಂತಾರ' ಸಿನಿಮಾದ ನಿನ್ನೆ ಬಿಡುಗಡೆ ಹಾಡನ್ನು ಹಂಚಿಕೊಂಡು, ಅದ್ಭುತವಾದ ಹಾಡೆಂದು ಬರೆದುಕೊಂಡಿದ್ದರು. ಕೌಶಿಕ್ ನಿಧನದ ಬಗ್ಗೆ ಟ್ವೀಟ್ ಮಾಡಿರುವ ರಿಷಬ್, ''ನೀವು ಸದಾ ನನ್ನ ಕಂಟೆಂಟ್ ಅನ್ನು ಇಷ್ಟಪಟ್ಟಿದ್ದಿರಿ. ಹೋಗಿ ಬನ್ನಿ ಗೆಳೆಯ'' ಎಂದು ಬರೆದುಕೊಂಡಿದ್ದಾರೆ.

  ಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಶುರುವಾಗುವುದು ಯಾವಾಗ? ಸಿಕ್ಕಿತು ಉತ್ತರಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಶುರುವಾಗುವುದು ಯಾವಾಗ? ಸಿಕ್ಕಿತು ಉತ್ತರ

  ಕೌಶಿಕ್ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೌಶಿಕ್ ನಿಧನದ ಬಗ್ಗೆ ಟ್ವೀಟ್ ಮಾಡಿರುವ ನಟಿ ರಶ್ಮಿಕಾ ಮಂದಣ್ಣ, ''ಈ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಹೃದಯ ಒಡೆಯುವ ಸುದ್ದಿಯಿದು. ಕೌಶಿಕ್ ಎಲ್ಲರ ಮೆಚ್ಚುಗೆಯ ವ್ಯಕ್ತಿಯಾಗಿದ್ದರು'' ಎಂದಿದ್ದಾರೆ.

  ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಸಹ ಕೌಶಿಕ್ ನಿಧನದ ಬಗ್ಗೆ ಟ್ವೀಟ್ ಮಾಡಿದ್ದು, ''ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನಗೆ ಮಾತುಗಳು ಹೊರಡುತ್ತಿಲ್ಲ. ಅವರ ಕುಟುಂಬ ಹಾಗೂ ಗೆಳೆಯರಿಗೆ ನನ್ನ ತೀವ್ರ ಸಂತಾಪಗಳು, ನೀನು ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ'' ಎಂದಿದ್ದಾರೆ.

  ಇನ್ನು ಖ್ಯಾತ ನಟ ದುಲ್ಕರ್ ಸಲ್ಮಾನ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ''ಇದು ಹೃದಯ ಒಡೆದು ಹೋಗುವಂಥಹಾ ವಿಷಯ. ಇದು ನಿಜವಾಗದಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತಲೇ ಇದ್ದೇನೆ. ನಿಮ್ಮ ಕುಟುಂಬ ಅದೆಷ್ಟು ದುಃಖದಲ್ಲಿರುತ್ತದೆ ಎಂದು ನಾನು ಊಹಿಸಬಲ್ಲೆ. ನಾವಿಬ್ಬರೂ ಟ್ವಿಟ್ಟರ್‌ ಮೂಲಕವೇ ಹೆಚ್ಚು ಪರಿಚಿತರು, ಕೆಲವು ಭಾರಿಯಷ್ಟೆ ಒಟ್ಟಿಗೆ ಭೇಟಿಯಾಗಿದ್ದೆವು. ನೀನು ಸದಾ ನನ್ನ ಮೇಲೆ ಸಾಕಷ್ಟು ಪ್ರೀತಿ ಸುರಿಸಿದ್ದೆ. ಜೀವನ ಬಹಳ ಚಿಕ್ಕದ್ದು, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನಿನ್ನ ಪ್ರೋತ್ಸಾಹಕ್ಕೆ ಧನ್ಯವಾದಗಳು ಮತ್ತು ಯಾವಾಗಲೂ ಒಳ್ಳೆಯ ಸಿನಿಮಾದ ಪರವಾಗಿ ನೀನು ನಿಲ್ಲುತ್ತಿದ್ದೆ. ಈ ಟ್ವೀಟ್‌ಗಳನ್ನು ಸಹ ಸರಿಯಾಗಿ ನನಗೆ ಬರೆಯಲು ಸಾಧ್ಯವಾಗುತ್ತಿಲ್ಲ. ಈ ಸಾವು ನನ್ನನ್ನು ವೈಯಕ್ತಿಕವಾಗಿ ಕಾಡುತ್ತಿದೆ. ಕ್ಷಮಿಸಿ.'' ಎಂದಿದ್ದಾರೆ.

  ಇವರುಗಳು ಮಾತ್ರವೇ ಅಲ್ಲದೆ ಇನ್ನೂ ಹಲವಾರು ಮಂದಿ ಸೆಲೆಬ್ರಿಟಿಗಳು ಕೌಶಿಕ್ ಸಾವಿಗೆ ಕಂಬನಿ ಮಿಡಿದಿದ್ದಾರೆ.

  English summary
  Movie analyst, critic Kaushik LM passed away. Celebrities including Rashmika Mandanna, Rishab Shetty express condolence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X