ತಮ್ಮದೇ ನಿರ್ಮಾಣದ 'ಎಲ್‌ಜಿಎಮ್' ಚಿತ್ರದ ಟ್ರೈಲರ್, ಆಡಿಯೊ ಲಾಂಚ್ ಮಾಡಲಿದ್ದಾರೆ ಧೋನಿ

ಕ್ರಿಕೆಟ್‌ನಲ್ಲಿ ಭಾರತವನ್ನು ನಾಯಕನಾಗಿ ಯಶಸ್ಸಿನ ಉತ್ತುಂಗಕ್ಕೇರಿಸಿದ ಬೃಹತ್ ಸಾಧನೆಯನ್ನು ಮಾಡಿರುವ ಮಾಡರ್ನ್ ಡೇ ಲೆಜೆಂಡ್ ಎಂ ಎಸ್ ಧೋನಿ ಈಗ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ನಿರ್ಮಾಪಕನಾಗಿ ಚಿತ್ರವನ್ನು ನಿರ್ಮಿಸಿದ್ದಾರೆ.

ತಮ್ಮ ಚಿತ್ರ ನಿರ್ಮಾಣ ಸಂಸ್ಥೆಗೆ ಧೋನಿ ಎಂಟರ್‌ಟೈನ್‌ಮೆಂಟ್ಸ್ ಎಂದು ಹೆಸರನ್ನು ಇಟ್ಟಿರುವ ಕ್ಯಾಪ್ಟನ್ ಕೂಲ್ ಈ ಬ್ಯಾನರ್ ಅಡಿಯಲ್ಲಿ ತಮಿಳು ಚಿತ್ರವನ್ನು ಮೊದಲು ನಿರ್ಮಿಸುತ್ತಿದ್ದಾರೆ. ಹೌದು, 'ಎಲ್‌ಜಿಎಮ್' ( ಲೆಟ್ಸ್ ಗೆಡ್ ಮ್ಯಾರೀಡ್ ) ಎಂಬ ಯೂತ್ ಲವ್ ಸ್ಟೋರಿ ಚಿತ್ರಕ್ಕೆ ಧೋನಿ ಬಂಡವಾಳ ಹೂಡಿದ್ದಾರೆ.

dhoni-lgm-movie-trailer-launch

ಚಾಕೋಲೇಟ್ ಹೀರೊ ಹರೀಶ್ ಕಲ್ಯಾಣ್ ಹಾಗೂ ಲವ್ ಟುಡೇ ಖ್ಯಾತಿಯ ಇವಾನಾ ನಾಯಕ ಹಾಗೂ ನಾಯಕಿಯಾಗಿ ನಟಿಸುತ್ತಿರುವ ಎಲ್ ಜಿ ಎಮ್ ಚಿತ್ರಕ್ಕೆ ರಮೇಶ್ ತಮಿಳ್‌ಮಣಿ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರದಲ್ಲಿ ನಡಿಯಾ, ಯೋಗಿ ಬಾಬು, ಆರ್‌ಜೆ ಮಿರ್ಚಿ ವಿಜಯ್ ಸಹ ನಟಿಸಿದ್ದು, ನಿರ್ದೇಶಕ ರಮೇಶ್ ತಮಿಳ್‌ಮಣಿ ಸ್ವತಃ ಸಂಗೀತವನ್ನೂ ಸಹ ಸಂಯೋಜಿಸಿದ್ದಾರೆ. ಸದ್ಯ ಲೆಟ್ಸ್ ಗೆಟ್ ಮ್ಯಾರೀಡ್ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ.

ಇಂದು ( ಜುಲೈ 10 ) ಚೆನ್ನೈನಲ್ಲಿ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೊ ಲಾಂಚ್ ಕಾರ್ಯಕ್ರಮ ನಡೆಯಲಿದ್ದು, ಎಂಎಸ್ ಧೋನಿ ಹಾಗೂ ಚಿತ್ರಕ್ಕೆ ಬಂಡವಾಳ ಹೂಡಿರುವ ಸಾಕ್ಷಿ ಸಿಂಗ್ ಧೋನಿ ನಿನ್ನೆಯೇ ಚೆನ್ನೈಗೆ ಆಗಮಿಸಿದ್ದಾರೆ.

ಸ್ವತಃ ಧೋನಿ ದಂಪತಿಯೇ ತಮ್ಮ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು ಈ ಹಿಂದೆಯೇ ಎಲ್ ಜಿ ಎಮ್ ಚಿತ್ರತಂಡ ಸಣ್ಣದೊಂದು ಟ್ರೈಲರ್ ಅನ್ನು ಲಾಂಚ್ ಮಾಡಿತ್ತು. ಈ ಟ್ರೈಲರ್‌ನಲ್ಲಿ ನಾಯಕ ಹಾಗೂ ನಾಯಕಿ ಲವ್‌ನಲ್ಲಿ ಮಾಡಿಕೊಳ್ಳುವ ಯಡವಟ್ಟಿನಿಂದ ಏನೆಲ್ಲಾ ಅವಾಂತರಗಳು ನಡೆಯಲಿವೆ ಎಂಬ ಅಂಶದ ಗ್ಲಿಂಪ್ಸ್ ತೋರಿಸಲಾಗಿತ್ತು.

ಈ ಟ್ರೈಲರ್ ವೀಕ್ಷಿಸಿದ್ದ ಸಿನಿ ರಸಿಕರು ಚಿತ್ರ ಪಕ್ಕಾ ಭರ್ಜರಿ ಮನರಂಜನೆಯನ್ನು ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಇನ್ನು ಚಿತ್ರತಂಡ ಇನ್ನೂ ಸಹ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸದೇ ಇದ್ದು, ಇಂದು ಬಿಡುಗಡೆಯಾಗುವ ಟ್ರೈಲರ್‌ನಲ್ಲಿ ರಿಲೀಸ್ ಡೇಟ್ ರಿವೀಲ್ ಆಗುವ ಸಾಧ್ಯತೆ ಇದೆ.

More from Filmibeat

English summary
MS Dhoni and Sakshi Dhoni to launch their productional debut movie LGM trailer and audio. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X