ಇಳಯರಾಜ ಬದುಕಿನ ಹೆಜ್ಜೆ ಗುರುತು ; ದಂತಕಥೆ ಪಾತ್ರದಲ್ಲಿ ಧನುಷ್..!

ಭಾರತದ ಸಂಗೀತ ಕ್ಷೇತ್ರದ ದಂತಕಥೆ ಇಳಯರಾಜಾ ಅವರ ಬದುಕಿನ ಹೆಜ್ಜೆಗುರುತು, ಬೆಳ್ಳಿ ಪರದೆ ಮೇಲೆ ಅನಾವರಣವಾಗಲಿದೆ ಅನ್ನುವ ಸುದ್ದಿ ಇಂದು ನಿನ್ನೆಯದ್ದಲ್ಲ. ಅನೇಕ ದಿನಗಳಿಂದ ಈ ಸಮಾಚಾರ, ಬ್ರೇಕಿಂಗ್ ನ್ಯೂಸ್ ರೂಪದಲ್ಲಿ ಬಿತ್ತರವಾಗಿದೆ. ಆದರೆ ಆ ಸುದ್ದಿಯ ಮೇಲೆ ಅಧಿಕೃತ ಮುದ್ರೆ ಬಿದ್ದಿರಲಿಲ್ಲ ಅಷ್ಟೇ.

ಹೌದು, ಇಳಯರಾಜ ಜೀವನ ಚರಿತ್ರೆಯನ್ನ ಚಿತ್ರರೂಪಕವನ್ನಾಗಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಇಂದು ಚಿತ್ರದ ಫಸ್ಟ್ ಲುಕ್ ನ್ನೂ ಬಿಡುಗಡೆ ಮಾಡಲಾಗಿದೆ. ಇನ್ನೂ ಅಭಿಮಾನಿಗಳ ಒತ್ತಾಸೆಯಂತೆ ಧನುಷ್, ಇಳಯರಾಜ ಅವರ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಧನುಷ್ ಅವರ ಆಸೆಯೂ ಇದೇ ಆಗಿತ್ತು ಅನ್ನುವುದು ಬೇರೆ ವಿಷಯ. ಯಾಕೆಂದರೆ ಧನುಷ್, ಇಳಯರಾಜ ಅವರ ಅಪ್ಪಟ ಅಭಿಮಾನಿ. ಅನೇಕ ಸಲ ಅನೇಕ ವೇದಿಕೆಗಳಲ್ಲಿ ಧನುಷ್ ಈ ಮಾತನ್ನ ಹೇಳಿಕೊಂಡಿದ್ದು ಇದೆ.

Much Awaited Biopic Of Ilaiyaraaja Announced

ಧನುಷ್ ತಮ್ಮ ಆಸೆಯಂತೆ ಇಳಯರಾಜ ಪಾತ್ರಕ್ಕೆ ಬಣ್ಣಏನೋ ಹಚ್ಚುತ್ತಿದ್ದಾರೆ. ಆದರೆ ಇಳಯರಾಜ ಪಾತ್ರವನ್ನ ನಿರ್ವಹಿಸುವುದು ಸುಲಭದ ಮಾತಲ್ಲ. ಅದಕ್ಕೆ ಅದ್ರದ್ದೇ ಆದ ತಯಾರಿ ಬೇಕು. ಶ್ರಮ ಬೇಕು. ಧನುಷ್ ಅವರಿಗೂ ಈ ವಿಚಾರ ಚೆನ್ನಾಗಿಯೇ ಗೊತ್ತು. ಈ ಕಾರಣಕ್ಕೆ ಫಸ್ಟ್ ಲುಕ್ ಬಿಡುಗಡೆ ಸಮಾರಂಭದಲ್ಲಿ ಧನುಷ್ ನಾನು ಇಳಯರಾಜ ಅವರ ಅಭಿಮಾನಿ. ಅವರ ಸಂಗೀತ ಎಲ್ಲರಿಗೂ ಹೊಂದುತ್ತದೆ. ಅವರ ಸಂಗೀತ ನನ್ನ ನಟನೆಯ ಟೀಚರ್ ಎಂದಿದ್ದಾರೆ. ರಾತ್ರಿ ಇಳಯರಾಜ ಅವರ ಸಂಗೀತವನ್ನು ಜನರು ಕೇಳಿ ಶಾಂತವಾಗಿ ಮಲಗುತ್ತಾರೆ. ನಾನು ಕೂಡ ಅವರ ಹಾಡುಗಳನ್ನು ಕೇಳುತ್ತಲೇ ಇರುತ್ತೇನೆ ಎಂದಿರುವ ಧನುಷ್, ತಮ್ಮ ಮಾಜಿ ಮಾವ ರಜಿನಿಕಾಂತ್ ಅವರ ಬಯೋಪಿಕ್ ನಲ್ಲಿ ನಟಿಸುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಇನ್ನೂ ಇಳಯರಾಜ ಅವರ ಬಯೋಪಿಕ್​ನ ಮೊದಲ ಪೋಸ್ಟರ್ ಲಾಂಚ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಹಾಗೂ ವೆಟ್ರಿ ಮಾರನ್ ಭಾಗಿ ಆಗಿದ್ದರು. ಇನ್ನೂ ವಿಶೇಷ ಅಂದರೆ ತಮ್ಮ ಕಥೆಗೆ ತಾವೇ ಖುದ್ದು ಸಂಗೀತವನ್ನ ಇಳಯರಾಜ ನೀಡುತ್ತಿದ್ದಾರೆ

Much Awaited Biopic Of Ilaiyaraaja Announced

ಅಂದ್ಹಾಗೇ ಈ ಹಿಂದೆ ಆರ್. ಬಾಲ್ಕಿ ಈ ಚಿತ್ರವನ್ನನಿರ್ದೇಶನ ಮಾಡ್ತಾರೆ ಅನ್ನುವ ಸುದ್ದಿ ಹಿಂದೆ ಗುಲ್ಲಾಗಿತ್ತು. ಆದರೆ ಈಗ ಆ ಜಾಗಕ್ಕೆ ಕ್ಯಾಪ್ಟನ್ ಮಿಲ್ಲರ್ ನಿರ್ದೇಶಕ ಅರುಣ್ ಮಾದೇಶ್ವರನ್ ಬಂದಿದ್ದಾರೆ. ಚಿತ್ರಕ್ಕೆ ನೀರವ್ ಶಾ ಛಾಯಾಗ್ರಹಣ ಇದೆ. ಪಿಕೆ ಪ್ರೈಮ್ ಪ್ರೊಡಕ್ಷನ್ ಮತ್ತು ಮರ್ಕ್ಯೂರಿ ಮೂವಿ ಈ ಬಯೋಪಿಕ್​ನ ನಿರ್ಮಾಣ ಮಾಡುತ್ತಿದೆ.

ಇನ್ನೂ ಈ ಸಿನಿಮಾ ಕೇವಲ ತಮಿಳಿನಲ್ಲಿ ಅಷ್ಟೇ ಅಲ್ಲ, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ದೇಶಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಮಿಕ್ಕಂತೆ ಧನುಷ್ ಅವರನ್ನ ಹೊರತು ಪಡಿಸಿದರೆ, ಇಳಯರಾಜ ಅವರ ಜೀವನಾಧಾರಿತ ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ ಅನ್ನುವುದಕ್ಕೆ ಉತ್ತರ ಸದ್ಯಕ್ಕೆ ಇಲ್ಲ. ಇನ್ನೂ ಇಳಯರಾಜ ಬದುಕಿನಲ್ಲಿ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಪಾತ್ರ ತುಂಬಾನೇ ದೊಡ್ಡದು. ಈ ಕಾರಣಕ್ಕೆ ಈ ಪಾತ್ರದ ಸುತ್ತ ಮುತ್ತ ಈಗ ಕುತೂಹಲ ಗರಿಗೆದರಿದೆ. ಎಸ್.ಪಿ.ಬಿ ಅವರ ಪಾತ್ರ ಚಿತ್ರದಲ್ಲಿರುತ್ತಾ..? ಒಂದು ವೇಳೆ ಇದ್ದರೆ ಆ ಪಾತ್ರವನ್ನ ನಿರ್ವಹಿಸುವವರು ಯಾರು ಅನ್ನುವ ಪ್ರಶ್ನೆಯೂ ಅನೇಕರಿಗೆ ಕಾಡ್ತಿದೆ

More from Filmibeat

English summary
Biopic Of Music Maestro Ilaiyaraaja Has Been Announced. Dhanush To Headline The Film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X