For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಅಭಿನಯದ ಕಲ್ಪನ ಈ ವಾರ ವಸ್ತುಂದಿ!

  By Shami
  |
  ಕಳೆದ ವಾರವಷ್ಟೇ ಹಾರರ್ ಮತ್ತು ಸಸ್ಪೆನ್ಸ್‍ವುಳ್ಳ ಚಾರುಲತಾ ತೆರೆ ಕಂಡಿತ್ತು. ಪ್ರಿಯಾಮಣಿ ಸಯಾಮಿಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇದೀಗ ಉಪೇಂದ್ರ ಕಲ್ಪನ ಆಗಿ ಬರುತ್ತಿದ್ದಾರೆ.

  ಇಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಿಲ್ಲ. ಎರಡು ಶೇಡ್ ವುಳ್ಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೂ ಮಂಗಳಮುಖಿಯಾಗಿ! ಹೌದು.

  ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಂಡಿದ್ದ ಕಾಂಚನ ಚಿತ್ರದ ರೀಮೇಕೇ ಕಲ್ಪನ'. ಅಲ್ಲಿ ಲಾರೆನ್ಸ್ ಮಾಡಿದ ಪಾತ್ರವನ್ನು ಇಲ್ಲಿ ಉಪ್ಪಿ ನಿರ್ವಹಿಸಿದ್ದಾರೆ. ಶರತ್ ಪಾತ್ರವನ್ನು ಸಾಯಿಕುಮಾರ್ ಮಾಡಿದ್ದಾರೆ.

  ದ್ವಿತೀಯಾರ್ಧದ ನಂತರ ಮಂಗಳಮುಖಿ ಪಾತ್ರ ಉಪ್ಪಿಯನ್ನು ಆವರಿಸಿಕೊಳ್ಳುತ್ತದೆ. ಮುಂದೆ...? ಥಿಯೇಟರ್‍ನಲ್ಲಿ ನೋಡಿದ್ರೇನೆ ಮಜಾ ಎನ್ನುತ್ತಾರೆ ಉಪ್ಪಿ. ಇನ್ನು ಉಪ್ಪಿ ಜೊತೆ ಕನ್ನಡದ ಹುಡುಗಿ ಲಕ್ಷ್ಮಿ ರೈ ಹೆಜ್ಜೆ ಹಾಕಿದ್ದಾರೆ.

  ಉಮಾಶ್ರೀ ಮತ್ತು ಶೃತಿ ಕೂಡ ಚತ್ರದಲ್ಲಿದ್ದಾರೆ. ಕಳೆದ ವಾರ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಉಪ್ಪಿ ಕೂಡ ಚಿತ್ರದ ಮೇಲೆ ಇನ್ನಿಲ್ಲದ ಭರವಸೆ ಇರಿಸಿಕೊಂಡಿದ್ದಾರೆ.

  ಖ್ಯಾತ ನಿರ್ದೇಶಕ ರಾಮನಾರಾಯಣ್ ಅವರ 125ನೇ ಚಿತ್ರದಲ್ಲಿ ಕಾಣಿಸಿಕೊಂಡಿರೋದು ನನ್ನ ಭಾಗ್ಯ. ಹಾರರ್ ಚಿತ್ರದಲ್ಲಿ ಕಾಮಿಡಿ ಇಡೋದು ಕಷ್ಟ. ಆದರೆ ಕಲ್ಪನ'ದಲ್ಲಿ ಎರಡೂ ಮಿಳಿತವಾಗಿದೆ ಎನ್ನುತ್ತಾರೆ ಉಪ್ಪಿ.

  ನನಗೆ ಮಿನುಗುತಾರೆ ಕಲ್ಪನ ಜೊತೆ ನಟಿಸಬೇಕೆಂಬ ಆಸೆಯಿತ್ತು. ಆದರೆ ಅದು ಈಡೇರಲಿಲ್ಲ. ಈಗ ಗಂಡು ಕಲ್ಪನ ಜೊತೆ ನಟಿಸಿದ್ದೇನೆ ಎಂದು ಹೇಳಿ ನಗುತ್ತಾರೆ ಶೃತಿ. ಎಲ್ಲರ ಕುತೂಹಲಕ್ಕೆ ಈ ವಾರ ತೆರೆ ಬೀಳಲಿದೆ.

  English summary
  Much awaited Upendra starrer Kalpana releasing this week. Lakshmi Rai, Umashree, Shruthi, Sai Kumar in the lead role and Ram Narayan is directting the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X