Pathu Thala Teaser : ಭೈರತಿ ರಣಗಲ್ ಆಗಿ ಸಿಂಬು: 'ಮಫ್ತಿ' ತಮಿಳು ರೀಮೆಕ್ 'ಪತ್ತು ತಲ' ಟೀಸರ್ ರಿಲೀಸ್

ಕನ್ನಡದ ಸೂಪರ್ ಹಿಟ್ 'ಮಫ್ತಿ' ಚಿತ್ರವನ್ನು ತಮಿಳಿನಲ್ಲಿ ರೀಮೆಕ್ ಮಾಡ್ತಿರೋದು ಗೊತ್ತೇಯಿದೆ. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗುತ್ತಾ ಬರ್ತಿದೆ. ಇದೀಗ ರಿಲೀಸ್ ಡೇಟ್ ಸಮೇತ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. ಕನ್ನಡದಲ್ಲಿ ಶಿವಣ್ಣ, ಶ್ರೀಮುರಳಿ ಮಾಡಿದ್ದ ಪಾತ್ರಗಳನ್ನು ತಮಿಳಿನಲ್ಲಿ ಸಿಂಬು ಹಾಗೂ ಗೌತಮ್ ಕಾರ್ತಿಕ್ ಮಾಡ್ತಿದ್ದಾರೆ.

'ಪತ್ತು ತಲ' ಹೆಸರಿನಲ್ಲಿ 'ಮಫ್ತಿ' ಚಿತ್ರವನ್ನು ತಮಿಳಿನಲ್ಲಿ ಕಟ್ಟಿಕೊಡಲಾಗುತ್ತಿದೆ. ಒಬೆಲಿ ಎನ್‌. ಕೃಷ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ತಮಿಳಿಗೆ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಂಡು ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಕನ್ನಡದಲ್ಲಿ
'ಭೈರತಿ ರಣಗಲ್' ಪಾತ್ರ ಯಾವ ರೇಂಜಿಗೆ ಸೌಂಡ್ ಮಾಡಿತ್ತು ಅನ್ನೋದು ಗೊತ್ತೇಯಿದೆ. ಸಿಂಬು ಉದ್ದನೆಯ ಗಡ್ಡ ಬಿಟ್ಟು ರಗಡ್ ಲುಕ್‌ನಲ್ಲಿ ಆ ಪಾತ್ರವನ್ನು ಮಾಡ್ತಿದ್ದಾರೆ. ಮಾಫಿಯಾ ಡಾನ್ ಎಜಿಆರ್ ಆಗಿ ಅಬ್ಬರಿಸೋಕೆ ಬರ್ತಿದ್ದಾರೆ.

mufti-tamil-remake-silambarasan-starrer-pathu-thala-tamil-movie-teaser-released

ಕನ್ನಡದಲ್ಲಿ ದೇವರಾಜ್ ಮಾಡಿದ್ದ ಪಾತ್ರವನ್ನು ತಮಿಳಿನಲ್ಲಿ ಗೌತಮ್ ವಾಸುದೇವನ್ ಮೆನನ್ ಮಾಡಿದ್ದಾರೆ. ಎ. ಆರ್ ರೆಹಮಾನ್ ಮ್ಯೂಸಿಕ್, ಫಾರೂಕ್ ಬಾಷಾ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಟೀಸರ್ ಮೊದಲ ನೋಟದಲ್ಲಿ ಸಿಂಬು ಅಭಿಮಾನಿಗಳ ಮನಗೆದ್ದಿದೆ. ಆದರೆ ಕೆಲವರು ಶಿವಣ್ಣನ ಭೈರತಿ ರಣಗಲ್ ಪಾತ್ರಕ್ಕೆ ಹೋಲಿಸಿ ಅಷ್ಟಕ್ಕಷ್ಟೆ ಎನ್ನುತ್ತಿದ್ದಾರೆ. ಮಾರ್ಚ್ 30ಕ್ಕೆ 'ಪತ್ತು ತಲ' ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಿದ್ದಾರೆ.

mufti-tamil-remake-silambarasan-starrer-pathu-thala-tamil-movie-teaser-released

ಸತ್ಯಪ್ರಿಯಾ ಭವಾನಿ ಶಂಕರ್ ಚಿತ್ರದಲ್ಲಿ ಎಜಿಆರ್ ಸಹೋದರಿ ಪಾತ್ರವನ್ನು ಮಾಡ್ತಿದ್ದಾರೆ. ಕನ್ನಡದಲ್ಲಿ ಛಾಯಾ ಸಿಂಗ್ ಆ ಪಾತ್ರ ಮಾಡಿದ್ದರು. ನರ್ತನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಮಫ್ತಿ' 2017ರಲ್ಲಿ ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಶಿವಣ್ಣನ ಭೈರತಿ ರಣಗಲ್ ಪಾತ್ರ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಭೈರತಿ ರಣಗಲ್ ಹಿಂದಿನ ಕಥೆ ಹೇಳುವ ಪ್ರಯತ್ನ ನಡೀತಿದ್ದು ಸಿನಿಮಾ ಪ್ರೀಕ್ವೆಲ್ ಅನೌನ್ಸ್ ಆಗಿದೆ.

ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ 'ಭೈರತಿ ರಣಗಲ್‌' ಸಿನಿಮಾ ನಿರ್ಮಾಣ ಆಗ್ತಿದೆ. ಶೀಘ್ರದಲ್ಲೇ ಶೂಟಿಂಗ್ ಶುರು ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ನರ್ತನ್ ಬಹಳ ದಿನಗಳಿಂದ ಕಥೆ ಬರೆದಿಟ್ಟುಕೊಂಡು ಸಿನಿಮಾ ಮಾಡಲು ಕಾಯುತ್ತಿದ್ದಾರೆ. 'ಮಫ್ತಿ' ಸಿನಿಮಾ ಒಂದು ಭಾಷೆಯಲ್ಲಿ ರಿಲೀಸ್ ಆಗಿತ್ತು. ಆದರೆ ಪ್ರೀಕ್ವೆಲ್ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ.

More from Filmibeat

English summary
Mufti Tamil Remake: Silambarasan Starrer Pathu Thala Tamil Movie Teaser Released. The film is scheduled to be released theatrically on 30 March 2023. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X