ಒಂದು ರಾತ್ರಿ ಪಾರ್ಟಿಗೆ ₹35 ಲಕ್ಷ ರೂಪಾಯಿ ಪಡೆದ ಮುಗಿಲ್‌ಪೇಟೆ ನಟಿ, ಬೆಚ್ಚಿ ಬಿದ್ದ ಬಣ್ಣದ ಲೋಕ..!
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಚಿತ್ರರಂಗದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಇದಕ್ಕೆ ಕೈಗನ್ನಡಿ ಎಂಬಂತೆ ಅನೇಕರು ಸಾಮಾಜಿಕ ಪ್ರಜ್ಞೆ.. ಮನುಜ ಸೂಕ್ಷ್ಮತೆ.. ಮತ್ತು ಸಂವೇದನೆ ಮರೆತು ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ.
ಇನ್ನೂ ಕೆಲವರು ದುಡ್ಡು ಸಿಗುತ್ತೆ ಎಂದು ಯಾರದ್ದೋ ಮದುವೆಗೆ ಅತಿಥಿಗಳಾಗಿ ಹೋಗುತ್ತಾರೆ. ಕೂರುವುದಕ್ಕೆ, ನಿಲ್ಲುವುದಕ್ಕೆ ಹಣ ಪಡೆಯುತ್ತಾರೆ. ಕೇಳಿದಷ್ಟು ದುಡ್ಡು ನೀಡಿದರೆ ಸಾಕು, ಹೇಳಿದ ಸಮಯಕ್ಕೆ ಸರಿಯಾಗಿ ಬಂದು ಸಭೆ-ಸಮಾರಂಭದಲ್ಲಿ ಡ್ಯಾನ್ಸ್ ಕೂಡ ಮಾಡಿ ಹೋಗುತ್ತಾರೆ. ಹಿಂದೆ ಮುಂದೆ ಯೋಚನೆ ಮಾಡದೇ ದುಡ್ಡು ತೆಗೆದುಕೊಳ್ತಾರೆ. ಅದರಲ್ಲಿಯೂ ಬಾಲಿವುಡ್‌ನಲ್ಲಿ ಈ ಸಂಪ್ರದಾಯ ತುಸು ಹೆಚ್ಚೇ ಇದೆ. ಆದರೆ ಈಗೀಗ ಈ ಸಂಪ್ರದಾಯ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೂಡ ಶುರುವಾಗಿದೆ. ಇದಕ್ಕೆ ಕಯಾದು ಲೋಹರ್ ಕೇಸ್ ಸದ್ಯದ ಉದಾಹರಣೆ.

ಹೌದು, ಕಯಾದು ಲೋಹರ್ .. ಕನ್ನಡದಿಂದ ವೃತ್ತಿ ಜೀವನ ಶುರು ಮಾಡಿದ ಚೆಲುವೆ. ಮುಗಿಲ್ ಪೇಟೆ ಚಿತ್ರದಲ್ಲಿ ಮನೋರಂಜನ್ ರವಿಚಂದನ್‌ಗೆ ನಾಯಕಿಯಾಗಿದ್ದವರು ಇವರು. ಆ ನಂತರ ಮಲಯಾಳಂ, ತೆಲುಗು ಮತ್ತು ಮರಾಠಿ ಚಿತ್ರರಂಗದಲ್ಲಿ ಅಭಿನಯಿಸಿದ ಕಯಾದು ಲೋಹರ್ ಅದೃಷ್ಟ ಡ್ರ್ಯಾಗನ್ ಚಿತ್ರದ ಮೂಲಕ ಖುಲಾಯಿಸಿತ್ತು. ಡ್ರ್ಯಾಗನ್ ಚಿತ್ರದ ಮೂಲಕ ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಫೇಮಸ್ ಆದ ಕಯಾದು ಲೋಹರ್ ಕೈಯಲ್ಲಿ ಸದ್ಯ ಹಲವು ಅವಕಾಶಗಳಿವೆ.
ಇಂಥಾ ಕಯಾದು ಲೋಹರ್ ಸದ್ಯ ಪಾರ್ಟಿಯೊಂದರಲ್ಲಿ ಭಾಗವಹಿಸಲು ಒಂದಲ್ಲ ಎರಡಲ್ಲ ಬರೋಬ್ಬರಿ 35 ಲಕ್ಷ ಹಣ ಪಡೆದಿದ್ದಾರೆ. ಈ ಮೂಲಕ ಇಡಿ (ಜಾರಿ ನಿರ್ದೇಶನಾಲಯ)ದ ಕೇಸೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಹೌದು, ಅಸಲಿಗೆ ತಮಿಳುನಾಡಿನಲ್ಲಿ ಮದ್ಯದ ವ್ಯವಹಾರ ನೋಡಿಕೊಳ್ಳುವ ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ (TASMAC) ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ (ED) ತನಿಖೆಯನ್ನು ನಡೆಸುತ್ತಿದೆ.
ಈ ತನಿಖೆಯಲ್ಲಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬರ ಬಳಿ ಅವರ ಪಾರ್ಟಿಯಲ್ಲಿ ಹಾಜರಾಗಲು ಕಯಾದು ಲೋಹರ್ 35 ಲಕ್ಷ ಹಣ ಪಡೆದಿದ್ದರು ಎಂದು ವರದಿಯಾಗಿದೆ.
ಮಿಡ್‌ಡೇ ವರದಿಯ ಪ್ರಕಾರ ಟಾಸ್ಮಾಕ್‌ನ ಈ ಹಗರಣದಲ್ಲಿ ಕಯಾದು ಲೋಹರ್ ಅವರ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ. ಹಗರಣಕ್ಕೆ ಸಂಬಂಧಿಸಿದ ಇಡಿ ದಾಳಿಯ ವೇಳೆ ಸಿಕ್ಕಿಬಿದ್ದಿರುವ ವ್ಯಕ್ತಿಗಳು ಕಯಾದು ಲೋಹರ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ. ಕಯಾದು ರಾತ್ರಿ ಪಾರ್ಟಿಗೆ ಹಾಜರಾಗಲು 35 ಲಕ್ಷ ರೂಪಾಯಿ ಹಣ ಪಡೆದಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಕಯಾದು ಲೋಹರ ಅವರ ಈ ಕತ್ತಲೆ ಪಾರ್ಟಿಯ ಕಥೆ ಕೇಳಿ ಇವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ. ಇಡಿ ಅಧಿಕಾರಿಗಳು ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಿದ ನಂತರ ಕಯಾದು ಲೋಹರ್ ಹಣದ ವಿಚಾರದ ಸತ್ಯಾಸತ್ಯತೆ ಗೊತ್ತಾಗಲಿದೆ.
ಇನ್ನು ಇಡಿ ಅಧಿಕಾರಿಗಳು ಟಾಸ್ಮಾಕ್ ವಿರುದ್ಧ ಸಲ್ಲಿಸಲಾಗುವ ಚಾರ್ಜ್‌ಶೀಟ್‌ನಲ್ಲಿ ಕಯಾದು ಹೆಸರನ್ನು ಉಲ್ಲೇಖಿಸುವ ಸಾಧ್ಯತೆ ಕೂಡ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇನ್ನು ಕಯಾದು ಲೋಹರ್ ಚಿತ್ರರಂಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ನಟಿ. ಇಲ್ಲಿಯವರೆಗೆ ಆರು ಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಹೀಗಿರುವಾಗ ಇದೀಗ ಟಾಸ್ಮಾಕ್ ಹಗರಣದಲ್ಲಿ ಕಯಾದು ಲೋಹರ್ ಹೆಸರು ತಳುಕು ಹಾಕಿಕೊಂಡಿದ್ದು ಕಯಾದು ಭವಿಷ್ಯಕ್ಕೆ ಈ ಹಗರಣ ಮುಂಬರುವ ದಿನಗಳಲ್ಲಿ ಮುಳ್ಳಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











