ಡಿವೋರ್ಸ್ ಪಡೆದ ಮೂರೇ ತಿಂಗಳಿಗೆ ಎರಡನೇ ಮದುವೆಗೆ ರೆಡಿಯಾದ ಸಂಗೀತ ನಿರ್ದೇಶಕ ಡಿ.ಇಮ್ಮಾನ್!

ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಸೇರಿದಂತೆ ಕನ್ನಡ -ತಮಿಳು- ತೆಲುಗು- ಮಲಯಾಳಂ ನಲ್ಲಿ ಸುಮಾರು 100ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಖ್ಯಾತ ತಮಿಳು ಚಲನಚಿತ್ರ ಸಂಗೀತ ನಿರ್ದೇಶಕರು ಡಿ.ಇಮ್ಮಾನ್. 2002 ರಲ್ಲಿ 'ತಮಿಳನ್' ಚಿತ್ರದ ಮೂಲಕ ಸಂಗೀತ ಸಂಯೋಜಕರಾಗಿ ಪದಾರ್ಪಣೆ ಮಾಡಿದ ಡಿ.ಇಮ್ಮಾನ್, 100 ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 'ವಿಶ್ವಾಸಂ' ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆ ಯೊಂದಿಗೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇಮ್ಯಾನುಯೆಲ್ ವಸಂತ್ ದಿನಕರನ್ ಅಕ್ಕಾ ಡಿ.ಇಮ್ಮಾನ್, ಶಿವ ನಿರ್ದೇಶನದಲ್ಲಿ ಅಜಿತ್ ಕುಮಾರ್ ನಯನತಾರ ಅಭಿನಯದ 'ವಿಶ್ವಾಸಂ' ಚಿತ್ರದ ಸಂಗೀತಕ್ಕಾಗಿ 2019 ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಯನ್ನು ಪಡೆದ 5ನೇ ತಮಿಳು ಸಂಗೀತ ನಿರ್ದೇಶಕರಾಗಿದ್ದಾರೆ.

Recommended Video

ಪುನೀತ್ ಚಿತ್ರಕ್ಕಾಗಿ ಮತ್ತೆ ಕನ್ನಡಕ್ಕೆ ಬಂದ ಕಾಲಿವುಡ್ ಸಂಗೀತ ನಿರ್ದೇಶಕ! | Filmibeat Kannada
ನಟಸಾರ್ವಭೌಮ ಚಿತ್ರಕ್ಕೂ ಸಂಗೀತ ನೀಡಿದ್ದಾರೆ

ನಟಸಾರ್ವಭೌಮ ಚಿತ್ರಕ್ಕೂ ಸಂಗೀತ ನೀಡಿದ್ದಾರೆ

ಡಿ.ಇಮ್ಮಾನ್ ಮೂಲತಃ ತಮಿಳು ಸಂಗೀತ ನಿರ್ದೇಶಕ ಮತ್ತು ಗಾಯಕ. ಅವರ ಬಹುತೇಕ ಸಂಗೀತ ನಿರ್ದೇಶನದ ಚಿತ್ರಗಳು ತಮಿಳು ಚಿತ್ರಗಳೇ ಆಗಿದೆ. ತಮಿಳು ಹೊರತಾಗಿ ಅವರು ತೆಲುಗು, ಹಿಂದಿ, ಮಲಯಾಳಂ ಚಿತ್ರಗಳು ಕೂಡ ಸಂಗೀತ ನೀಡಿದ್ದಾರೆ. ಇನ್ನು ನೀನಾಸಂ ಸತೀಶ್ ಅಭಿನಯದ 'ಅಂಜದ ಗಂಡು' ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೂ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ಡಿ.ಇಮ್ಮಾನ್ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-2' ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಿದ್ದಾರೆ.

ಎರಡು ಚಿತ್ರಗಳ ಜೊತೆಗೆ ಡಿ.ಇಮ್ಮಾನ್ ಸಂಗೀತ ನಿರ್ದೇಶಿಸಿರುವ ಮತ್ತೊಂದು ಕನ್ನಡ ಚಿತ್ರವೆಂದರೆ 'ನಟಸಾರ್ವಭೌಮ'. ಪವನ್ ಒಡೆಯರ್ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರದ ಹಾಡುಗಳು ಇಂದಿಗೂ ಅತ್ಯಂತ ಜನಪ್ರಿಯ ಗೀತೆಗಳಾಗಿವೆ. ಅದರಲ್ಲೂ 'ತಾಜಾ ಸಮಾಚಾರ...' ಅಂತೂ ಈಗಲೂ ಕೂಡ ಅದರ ತಾಜಾತನದಿಂದಲೇ ಜನ ಮನಸೂರೆಗೊಳ್ಳುತ್ತಿದೆ. ಒಟ್ಟಾರೆ ಇದುವರೆಗೆ ಡಿ.ಇಮ್ಮಾನ್ ಕನ್ನಡದಲ್ಲಿ 'ಅಂಜದಗಂಡು', 'ನಟಸಾರ್ವಭೌಮ', 'ಕೋಟಿಗೊಬ್ಬ-2'ಈ ಮೂರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ರಜನಿಕಾಂತ್ ಚಿತ್ರಕ್ಕೂ ಸಂಗೀತ ನೀಡಿ ಸೈ ಎನಿಸಿಕೊಂಡರು

ರಜನಿಕಾಂತ್ ಚಿತ್ರಕ್ಕೂ ಸಂಗೀತ ನೀಡಿ ಸೈ ಎನಿಸಿಕೊಂಡರು

ಪ್ರಸ್ತುತ ಇಮಾನ್ ಕೈಯಲ್ಲಿ ಆರಕ್ಕೂ ಹೆಚ್ಚು ಚಿತ್ರಗಳಿವೆ. ಇದೆಲ್ಲವೂ ದೊಡ್ಡಮಟ್ಟದ ಪ್ರಾಜೆಕ್ಟ್‌ಗಳಾಗಿವೆ. ಹಿಂದೆ ವಿಜಯ್ ಅಭಿನಯದ ತಮಿಳನ್, ಜಿಲ್ಲಾ, ಅಜಿತ್ ಕುಮಾರ್ ಅಭಿನಯದ ವಿಶ್ವಾಸಂ ಹೀಗೆ ಅನೇಕ ಚಿತ್ರಗಳಿಗೆ ಡಿ.ಇಮ್ಮಾನ್ ಸಂಗೀತ ನೀಡಿದ್ದಾರೆ. ರಜನಿಕಾಂತ್ ಅಭಿನಯದ 'ಅನ್ನತ್ತೆ'ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ.

ಅದು ಅಲ್ಲದೆ ತಮ್ಮ ಸಂಗೀತ ನಿರ್ದೇಶನದ ಆರಂಭದ ದಿನಗಳಲ್ಲಿ ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಒಂದಷ್ಟು ಸೀರಿಯಲ್ ಗಳಿಗೆ ಕೂಡ ಸಂಗೀತ ನೀಡುವ ಮೂಲಕ ಕಿರುತೆರೆಯಲ್ಲೂ ಕೂಡ ಕೆಲಸ ಮಾಡಿದ್ದಾರೆ. ಜಯಾ ಟಿವಿಯಲ್ಲಿ ಪ್ರಸಾರವಾಗುವ ಮೂವಿ 'ನಂಬರ್-1', 'ಜಾಕ್ ಪಾಟ್' ಶೋಗಳಿಗೆ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದಾರೆ.

2008ರಲ್ಲಿ ಮದುವೆ- ಈಗ ಎರಡು ಮಕ್ಕಳ ತಂದೆ

2008ರಲ್ಲಿ ಮದುವೆ- ಈಗ ಎರಡು ಮಕ್ಕಳ ತಂದೆ

ಮಾಸ್ ಮ್ಯೂಸಿಕ್ ಕಂಪೋಸ್ ಮಾಡಿ ಅಭಿಮಾನಿಗಳ ಮನ ಗೆದ್ದಿರುವ ಡಿ.ಇಮ್ಮಾನ್... ಹೀಗೆ ವೃತ್ತಿ ಬದುಕಿನಲ್ಲಿ ಎತ್ತರಕ್ಕೆ ಏರುತ್ತಿರುವ ಸಮಯದಲ್ಲೇ ಕೌಟುಂಬಿಕ ಸಮಸ್ಯೆ ಒಳಗೆ ಸಿಲುಕಿದ್ದಾರೆ. ಪ್ರಸ್ತುತ ಡಿ.ಇಮ್ಮಾನ್ ಕಾಲಿವುಡ್‌ನ ಟಾಪ್ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಇಮ್ಮಾನ್ 2003 ರಲ್ಲಿ ಬಿಡುಗಡೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ವಿಜಯ್ ಅವರ ರಲ್ಲಿ ಬಿಡುಗಡೆಯಾದ ,'ತಮೀಳನ್' ನೊಂದಿಗೆ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಅವರು ಏಪ್ರಿಲ್ 2008 ರಲ್ಲಿ ಕಂಪ್ಯೂಟರ್ ಇಂಜಿನಿಯರ್ ಮೋನಿಕಾ ಅವರನ್ನು ವಿವಾಹವಾದರು ಮತ್ತು ವೆರೋನಿಕಾ ಡೊರೊಥಿ ಇಮ್ಮಾನ್ ಮತ್ತು ಬ್ಲೆಸಿಕಾ ಕ್ಯಾಥಿ ಇಮ್ಮಾನ್ ಎಂಬ ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ. ಆದಾಗ್ಯೂ, ಕಳೆದ ವರ್ಷ ಡಿಸೆಂಬರ್‌ನಲ್ಲಿ ದಂಪತಿಗಳು ವಿಚ್ಛೇದನ ಪಡೆದಿದ್ದಾರೆ ಎಂದು ಡಿ.ಇಮ್ಮಾನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.

ಟ್ವೀಟ್ ಮೂಲಕ ವಿಚ್ಛೇದನದ ವಿಷಯ ಬಹಿರಂಗಪಡಿಸಿದ ಡಿ.ಇಮ್ಮಾನ್

ಟ್ವೀಟ್ ಮೂಲಕ ವಿಚ್ಛೇದನದ ವಿಷಯ ಬಹಿರಂಗಪಡಿಸಿದ ಡಿ.ಇಮ್ಮಾನ್

ತಮ್ಮ ಅಧಿಕೃತ ವಿಚ್ಛೇದನದ ಬಗ್ಗೆ ಡಿ.ಇಮ್ಮಾನ್ ಟ್ವೀಟ್ ಮಾಡಿದ್ದಾರೆ. 'ನನ್ನ ಎಲ್ಲಾ ಹಿತೈಷಿಗಳು ಮತ್ತು ಅವರ ಬೆಂಬಲಕ್ಕಾಗಿ, ಸಂಗೀತ ಉತ್ಸಾಹಿಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನಮ್ಮ ಜೀವನವು ವಿಭಿನ್ನ ಹಾದಿಯಲ್ಲಿ ಸಾಗಿದಂತೆ, ಮೋನಿಕಾ ರಿಚರ್ಡ್ ಮತ್ತು ನಾನು ನವೆಂಬರ್ 2020 ರಿಂದ ಪರಸ್ಪರ ಒಪ್ಪಿಗೆಯಿಂದ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದಿದ್ದೇವೆ ಮತ್ತು ನಾವು ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿರಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ್ದೇವೆ. ಈಗ ನಾವು ಅಧಿಕೃತವಾಗಿ ವಿಚ್ಛೇದನವನ್ನು ಪಡೆದುಕೊಳ್ಳುವ ಮೂಲಕ ಇಬ್ಬರೂ ಪ್ರತ್ಯೇಕವಾಗಿದ್ದೇವೆ' ಎಂದು ಅವರು ಒಂದು ವರ್ಷದಿಂದ ನಡೆದಿರುವ ವಿಚ್ಛೇದನದ ಪ್ರತಿಕ್ರಿಯೆ ಬಗ್ಗೆ ವಿವರಿಸಿದ್ದಾರೆ.

ಎರಡನೇ ಮದುವೆಗೆ ಸಿದ್ಧತೆಗಳು

ಎರಡನೇ ಮದುವೆಗೆ ಸಿದ್ಧತೆಗಳು

ಈಗಷ್ಟೇ ಅಧಿಕೃತವಾಗಿ ವಿಚ್ಛೇದನವನ್ನು ಪಡೆದಿರುವ ಡಿ.ಇಮ್ಮಾನ್ ಮತ್ತೊಂದು ಮದುವೆಗೆ ಈಗಾಗಲೇ ಮತ್ತೆ ಸಿದ್ದರಾಗಿದ್ದಾರೆ. ವಿಚ್ಛೇದನ ಘೋಷಣೆಯಾದ ಕೆಲವೇ ದಿನಗಳಲ್ಲಿ ಡಿ.ಇಮ್ಮಾನ್ ಮದುವೆಗೆ ರೆಡಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ... ಚೆನ್ನೈ ಮೂಲದ ಉಮಾ ಹಾಗೂ ಡಿ.ಇಮ್ಮಾನ್ ವಿವಾಹ ನಿಶ್ಚಯವಾಗಿದೆ. ಸದ್ಯದಲ್ಲೇ ಇದರ ಬಗ್ಗೆ ಅಧಿಕೃತ ಘೋಷಣೆ ಕೂಡ ಹೊರಬೀಳುವ ನಿರೀಕ್ಷೆ ಇದೆ. ಮೇನಲ್ಲಿ ಅವರಿಬ್ಬರೂ ಮದುವೆಯಾಗಲಿದ್ದಾರೆ ಅಂತ ಚೆನ್ನೈ ಮೂಲಗಳು ಹೇಳುತ್ತಿದೆ. ಈಗಾಗಲೇ ಇಬ್ಬರು ಕೂಡ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ ಅಂತ ಚೆನ್ನೈ ವರದಿಗಳು ಸಹ ದೃಢಪಡಿಸುತ್ತಿದೆ.

More from Filmibeat

English summary
Music director D Imman is planning to remarry. Just few months back he officially got divorce from first wife and now is getting for second marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X