For Quick Alerts
  ALLOW NOTIFICATIONS  
  For Daily Alerts

  ಬಯೋಪಿಕ್ ಮಾಡಲು ಕಾರಣ ಬಿಚ್ಚಿಟ್ಟ ಶ್ರೀಲಂಕಾ ಕ್ರಿಕೆಟಿಗ, ವಿವಾದದ ಬಗ್ಗೆ ಮುರಳೀಧರನ್ ಸ್ಪಷ್ಟನೆ

  |

  2009ರಲ್ಲಿ ಶ್ರೀಲಂಕಾದಲ್ಲಿ ನಡೆದ ಹಿಂಸಾತ್ಮಕ ಕೃತ್ಯದಲ್ಲಿ ನೂರಾರು ತಮಿಳರ ಹತ್ಯೆಯಾಗಿತ್ತು. ಈ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮುತ್ತಯ್ಯ ಮುರಳೀಧರನ್ ತಮಿಳರ ಹತ್ಯೆಯನ್ನು ಸಂಭ್ರಮಿಸಿದ್ದರು ಎಂದು ವರದಿಗಳು ಆಗಿದ್ದವು. ತಮಿಳು ಹತ್ಯೆ ಸಂಭ್ರಮಿಸುವ ಹಾಗೂ ತಮಿಳರ ಭಾವನೆಗಳಿಗೆ ಧಕ್ಕೆ ತರುವ ವ್ಯಕ್ತಿಯ ಕುರಿತು ಸಿನಿಮಾ ಮಾಡಬಾರದು ಎಂಬ ಕಾರಣಕ್ಕಾಗಿ ವಿಜಯ್ ಸೇತುಪತಿ ಮಾಡಲಿರುವ '800' ಬಯೋಪಿಕ್ ಚಿತ್ರಕ್ಕೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗಿದೆ.

  ಇದೀಗ, 2009ರಲ್ಲಿ ನೀಡಿದ್ದ ಹೇಳಿಕೆ ಹಾಗೂ ಬಯೋಪಿಕ್ ಸಿನಿಮಾ ಮಾಡಲು ಏಕೆ ಮುಂದಾಗಿದ್ದಾರೆ ಎನ್ನುವುದಕ್ಕೆ ಸ್ವತಃ ಶ್ರೀಲಂಕಾ ಕ್ರಿಕಟಿಗ ಮುತ್ತಯ್ಯ ಮುರಳೀಧರನ್ ಸ್ಪಷ್ಟನೆ ನೀಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಅಷ್ಟಕ್ಕೂ, ಬಯೋಪಿಕ್ ಕುರಿತು ದಿಗ್ಗಜ ಸ್ಪಿನ್ನರ್ ಹೇಳಿದ್ದೇನು? ಮುಂದೆ ಓದಿ....

  ವಿಜಯ್ ಸೇತುಪತಿ ಬೆಂಬಲಕ್ಕೆ ನಿಂತ ರಾಧಿಕಾ: ಅವರು ಕೇಳಿದ್ರಲ್ಲಿ ಲಾಜಿಕ್ ಇದೆ!

  ನನ್ನ ಹೇಳಿಕೆ ತಿರುಚಲಾಗಿದೆ

  ನನ್ನ ಹೇಳಿಕೆ ತಿರುಚಲಾಗಿದೆ

  ''2009ರಲ್ಲಿ ನಡೆದ ಹಿಂಸೆಯಲ್ಲಿ ಎರಡೂ ಕಡೆಯೂ ಪ್ರಾಣಹಾನಿ ಆಗಿರುತ್ತದೆ. ಎರಡು ಕಡೆ ಸಾವು ಸಂಭವಿಸಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ಕೊನೆಗೂ ಯುದ್ಧ ಅಂತ್ಯವಾಯ್ತು ಎನ್ನುವ ಅರ್ಥದಲ್ಲಿ ನನ್ನ ಜೀವನದಲ್ಲಿ ಅತ್ಯಂತ ಸಂತೋಷದಾಯಕ ದಿನ ಎಂದು ನಾನು ಹೇಳಿದ್ದೆ. ಆದರೆ, 'ತಮಿಳರು ಕೊಲ್ಲಲ್ಪಟ್ಟ ದಿನ ನನ್ನ ಜೀವನದಲ್ಲಿ ಅತ್ಯಂತ ಸಂತೋಷದಾಯಕ ದಿನವಾಗಿದೆ' ಎಂಬ ಅರ್ಥದಲ್ಲಿ ಹೇಳಿಕೆ ತಿರುಚಲಾಗುತ್ತಿದೆ. ಮುಗ್ಧರನ್ನು ಕೊಲ್ಲುವುದನ್ನು ನಾನು ಎಂದಿಗೂ ಬೆಂಬಲಿಸಲಿಲ್ಲ'' ಎಂದು ಮುತ್ತಯ್ಯ ಮುರಳೀಧರನ್ ಸ್ಪಷ್ಟನೆ ನೀಡಿರುವುದಾಗಿ ವರದಿಯಾಗಿದೆ.

  ಬಯೋಪಿಕ್‌ಗೆ ಒಪ್ಪಲು ಕಾರಣವೇನು?

  ಬಯೋಪಿಕ್‌ಗೆ ಒಪ್ಪಲು ಕಾರಣವೇನು?

  ಬಯೋಪಿಕ್ ಚಿತ್ರವನ್ನು ಏಕೆ ಒಪ್ಪಿಕೊಂಡರು ಎಂಬುದಕ್ಕೆ ವಿವರಣೆ ನೀಡಿರುವ ಮಾಜಿ ಕ್ರಿಕೆಟಿಗ, ''ಈ ಬಯೋಪಿಕ್ ತನ್ನ ಹೆತ್ತವರಿಗೆ ಮತ್ತು ನನ್ನ ಏಳಿಗೆಗಾಗಿ ಸಹಾಯ ಮಾಡಿದವರಿಗೆ ಮಾನ್ಯತೆ ತರುತ್ತದೆ ಎಂಬ ಕಾರಣಕ್ಕೆ ಮಾಡಲು ಮುಂದಾಗಿದ್ದೇನೆ'' ಎಂದು ತಿಳಿಸಿದ್ದಾರೆ.

  ಯುದ್ಧದ ನೋವು ನನಗೆ ತಿಳಿದಿದೆ

  ಯುದ್ಧದ ನೋವು ನನಗೆ ತಿಳಿದಿದೆ

  "ಯುದ್ಧದ ನೋವು ನನಗೆ ತಿಳಿದಿದೆ. ನಾನು 30 ವರ್ಷಗಳಿಗೂ ಹೆಚ್ಚು ಕಾಲ ಯುದ್ಧದ ಮಧ್ಯೆ ಶ್ರೀಲಂಕಾದಲ್ಲಿ ಬೆಳೆದಿದ್ದೇನೆ. ನಾನು ಏಳು ವರ್ಷದವನಿದ್ದಾಗ ನನ್ನ ತಂದೆಯನ್ನು ಹ್ಯಾಕ್ ಮಾಡಿದ್ದರು. ಅನೇಕ ಬಾರಿ ನಾವು ಬೀದಿಗಳಲ್ಲಿದ್ದೆವು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ನನ್ನ ಮನೆಯಲ್ಲಿ ಚಿರುಗೆ ಒಂದು ದೇಗುಲ ಮಾಡಿ ಅಲ್ಲಿ ಅವನ ಫೋಟೋ ಇಟ್ಟಿದೀನಿ | Pannaga Bharana | Chiranjeevi Sarja
  ಮುತ್ತಯ್ಯ ದ್ರೋಹ ಬಗೆದಿದ್ದಾರೆ

  ಮುತ್ತಯ್ಯ ದ್ರೋಹ ಬಗೆದಿದ್ದಾರೆ

  ತಮಿಳು ಇಂಡಸ್ಟ್ರಿಯಲ್ಲಿ ಈ ಚಿತ್ರಕ್ಕೆ ಹೆಚ್ಚು ವಿರೋಧ ಎದರಾಗಿದೆ. ರಾಜಕೀಯವಾಗಿ ಹೇಳಿಕೆಗಳು ಬರುತ್ತಿದೆ. ಈ ಕುರಿತು ಹಿರಿಯ ನಿರ್ದೇಶಕ ಭಾರತಿರಾಜನ್ ಸಹ ಪ್ರತಿಕ್ರಯಿಸಿದ್ದು, ''ಮುತ್ತಯ್ಯ ನಮಗೆ ದ್ರೋಹ ಬಗೆದಿದ್ದಾರೆ'' ಎಂದಿದ್ದಾರೆ. ''"ಲಂಕಾ ತಮಿಳರು ಸಾಯುತ್ತಿರುವಾಗ ಮುತ್ತಯ್ಯ ಪಿಟೀಲು ನುಡಿಸಿದರು. ತಮ್ಮ ಜನರು ಸಾಯುವಾಗ ಕ್ರೀಡಾಪಟುವಾಗಿ ಸಾಧಿಸುವುದರಿಂದ ಏನು ಪ್ರಯೋಜನ? ನಮಗೆ ಸಂಬಂಧಪಟ್ಟಂತೆ, ಮುತ್ತಯ್ಯ ನಂಬಿಕೆಗೆ ದ್ರೋಹ ಬಗೆದಿದ್ದಾರೆ" ಎಂದು ಭಾರತಿರಾಜ ಬಯೋಪಿಕ್ ಖಂಡಿಸಿದ್ದಾರೆ.

  English summary
  'Never Supported Killing Of Innocents', Sri Lankan cricketer Muttiah Muralitharan has Clarified about his Biopic controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X