4 ವರ್ಷಗಳಿಂದ ಕೋಮಾದಲ್ಲಿರುವ ಕಟ್ಟಪ್ಪ ಸತ್ಯರಾಜ್ ಮಡದಿ; ಪುತ್ರಿ ಭಾವುಕ ಪೋಸ್ಟ್

ಸ್ಟಾರ್ ನಟ-ನಟಿಯರ ರಿಯಲ್ ಲೈಫ್ ಬಹಳ ಕಲರ್‌ಫುಲ್ ಆಗಿ ಇರುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ತೆರೆಮೇಲೆ ಹೀರೊ ಆಗಿ ಅಬ್ಬರಿಸಿದರೂ ನಿಜ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸುತ್ತಿರುತ್ತಾರೆ. ತಮಗಿಂತ ತಮ್ಮ ಆಪ್ತರಿಗೆ ನೋವಾದರೆ ಆಗುವ ನೋವು ಹೆಚ್ಚು. ಅಂತಹ ನೋವನ್ನು ಕೆಲ ನಟ, ನಟಿಯರು ಎದುರಿಸುತ್ತಿದ್ದಾರೆ.

ತಮಿಳು ನಟ ಸತ್ಯರಾಜ್ ಚಿರಪರಿಚಿತ ಹೆಸರು. ಕೊನೆ ಪಕ್ಷ 'ಬಾಹುಬಲಿ' ಚಿತ್ರದ ಕಟ್ಟಪ್ಪ ಆಗಿ ಅವರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿದೆ. ಒಂದ್ಕಾಲದಲ್ಲಿ ವಿಲನ್ ಆಗಿ ಹೀರೋ ಆಗಿ ನಟಿಸಿದ ಸತ್ಯರಾಜ್ ಸದ್ಯ ಪೋಷಕ ಪಾತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ನಾಯಕ ಅಥವಾ ನಾಯಕಿಯ ತಂದೆಯಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಪುತ್ರ ಸಿಬಿ ಸತ್ಯರಾಜ್ ಸಹ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಶಸ್ಸು ಸಿಗಲಿಲ್ಲ.

My mother has been a coma patient for 4 years actor sathyaraj s daughter emotional post

ನಟ ಸತ್ಯರಾಜ್ ಪುತ್ರಿ ದಿವ್ಯಾ ನ್ಯೂಟ್ರಿಷನಿಸ್ಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆರೋಗ್ಯ, ಸೇವಿಸಬೇಕಾದ ಉತ್ತಮ ಆರೋಗ್ಯದ ಬಗ್ಗೆ ಉತ್ತಮ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಸದ್ಯ ತಮ್ಮ ತಾಯಿ ಮಹೇಶ್ವರಿ ಬಗ್ಗೆ ದಿವ್ಯಾ ಹಂಚಿಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ತಾಯಿಯ ಆರೋಗ್ಯ ಸಮಸ್ಯೆ ಬಗ್ಗೆ ಆಕೆ ಬರೆದುಕೊಂಡಿದ್ದಾರೆ.

ತಂದೆ ಸತ್ಯರಾಜ್ ಫೋಟೊ ಹಂಚಿಕೊಂಡು ದಿವ್ಯಾ "ಇದು ಎಲ್ಲಾ ಸಿಂಗಪ್ ಪ್ರೇರೆಂಟ್ಸ್ ಬಗ್ಗೆ ಮೆಚ್ಚುಗೆ ಸೂಚಿಸುವ ಪೋಸ್ಟ್ ಇದು. ನನ್ನ ತಾಯಿ 4 ವರ್ಷಗಳಿಂದ ಕೋಮಾದಲ್ಲಿದ್ದಾರೆ. ಆಕೆ ಮನೆಯಲ್ಲೇ ಹಾಸಿಗೆ ಹಿಡಿದಿದ್ದಾರೆ. ನಾವು ಆಕೆಗೆ PEG ಟ್ಯೂಬ್ ಮೂಲಕ ಆಹಾರವನ್ನು ನೀಡುತ್ತೇವೆ. ನಮ್ಮ ಮನಸ್ಸು ಛಿದ್ರವಾಗಿದೆ, ಆದರೆ ನಾವು ಭರವಸೆ ಮತ್ತು ಸಕಾರಾತ್ಮಕವಾಗಿ ಆಕೆಯ ವೈದ್ಯಕೀಯ ಪ್ರಗತಿಗಾಗಿ ಕಾಯುತ್ತೇವೆ. ನಾವು ಅಮ್ಮನನ್ನು ಮರಳಿ ಪಡೆಯುತ್ತೇವೆ ಎಂದು ಭಾವಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ತಾಯಿ ಹಾಸಿಗೆ ಹಿಡಿದಿರುವುದರಿಂದ ಅಪ್ಪ 4 ವರ್ಷಗಳಿಂದ ಸಿಂಗಲ್ ಪೇರೆಂಟ್ ಆಗಿದ್ದಾರೆ. ಅಪ್ಪನ ತಾಯಿ ಕೆಲವು ವರ್ಷಗಳ ಹಿಂದೆ ತೀರಿಹೋದರು. ಒಂದರ್ಥದಲ್ಲಿ ನಾನು ಕೂಡ ನನ್ನ ಅಪ್ಪನಿಗೆ ಒಬ್ಬ ಅಮ್ಮನಾಗಿದ್ದೇನೆ. ಅಪ್ಪ ಮತ್ತು ನಾನು ಒಂದು ಪವರ್‌ಫುಲ್ ಮಾಮ್ಸ್ ಕ್ಲಬ್ ಅನ್ನು ರಚಿಸಿದ್ದೇವೆ" ಎಂದು ದಿವ್ಯಾ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.

ಸಾಕಷ್ಟು ಜನರಿಗೆ ಸತ್ಯರಾಜ್ ಪತ್ನಿ ಮಲ್ಲೇಶ್ವರಿ 4 ವರ್ಷಗಳಿಂದ ಕೋಮಾದಲ್ಲಿ ಇರುವುದು ಗೊತ್ತಿರಲಿಲ್ಲ. ದಿಢೀರನೆ ದಿವ್ಯಾ ಈ ವಿಚಾರ ಹಂಚಿಕೊಂಡಿದ್ದು ನೋಡಿ ಶಾಕ್ ಆಗಿದ್ದಾರೆ. ಎಲ್ಲಾ ನೋವು ಮರೆತು ಸತ್ಯರಾಜ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ನಟನೆಯ 'ಕೂಲಿ' ಚಿತ್ರದ ಮುಖ್ಯ ಪಾತ್ರದಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಕೂಲಿ' ಚಿತ್ರದಲ್ಲಿ ಕನ್ನಡ ನಟ ಉಪೇಂದ್ರ ಸಹ ನಟಿಸುತ್ತಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಸತ್ಯರಾಜ್ ನಟಿಸಿದ್ದಾರೆ. 'ಶಬ್ಬಾಸ್ ವಿಕ್ರಂ' ಎನ್ನುವ ಕನ್ನಡ ಚಿತ್ರದಲ್ಲಿ ಕೂಡ ಸತ್ಯರಾಜ್ ಬಣ್ಣ ಹಚ್ಚಿದ್ದರು. ಇನ್ನು ಕೊನೆಯದಾಗಿ ತೆಲುಗಿನ 'ವಾಲ್ತೇರು ವೀರಯ್ಯ' ಚಿತ್ರದಲ್ಲಿ ಸತ್ಯರಾಜ್ ಕಾಣಿಸಿಕೊಂಡಿದ್ದರು.

ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಹುಟ್ಟಿದ ಸತ್ಯರಾಜ್ ಚಿಕ್ಕಂದಿನಿಂದಲೂ ಚಿತ್ರರಂಗಕ್ಕೆ ಹೋಗುವ ಕನಸು ಕಂಡವರು. ಆದರೆ ತಾಯಿಗೆ ಇದು ಇಷ್ಟವಿರಲಿಲ್ಲ. ಹಾಗಾಗಿ ಹೇಳದೇ ಕೇಳದೇ ಚೆನ್ನೈಗೆ ಬಂದು ಸಿನಿಮಾಗಳಲ್ಲಿ ಅವಕಾಶಗಳನ್ನು ಹುಡುಕುತ್ತಿದ್ದರು. ಕೆಲ ನಿರ್ಮಾಪಕ, ನಿರ್ದಶಕರು ಬೇಡ ಎಂದು ವಾಪಸ್ ಹೋಗುವಂತೆ ಹೇಳಿದರೂ ಸತ್ಯರಾಜ್ ಹಠ ಬಿಡಲಿಲ್ಲ. ಕೊನೆಗೆ ಒಂದು ನಾಟಕ ತಂಡ ಸೇರಿ ನಟಿಸಲು ಆರಂಭಿಸಿದ್ದರು.

'ಸಟ್ಟಂ ಎನ್‌ ಕೈಯಿಲ್' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಸತ್ಯರಾಜ್ ನಟಿಸಿದ್ದರು. ನಟನೆ ಜೊತೆ ಜೊತೆಗೆ ಪ್ರೊಡಕ್ಷನ್ ಮ್ಯಾನೇಜರ್ ಕೆಲಸ ಮಾಡುತ್ತಿದ್ದರು. 'ಸಾವಿ' ಎಂಬ ಚಿತ್ರದಲ್ಲಿ ಮೊದಲಿಗೆ ಹೀರೊ ಆಗಿ ಮಿಂಚಿದ್ದರು.

More from Filmibeat

English summary
Tamil Actor Kattappa Sathyaraj daughter divya reveals mother maheshwari health issues
Read more about: tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X