ಕಮಲ್ ಜೊತೆ ನಟಿಸಿದ್ದ ನಟಿಯ ನಗ್ನ ಫೋಟೊಶೂಟ್ ಮಾಡಿಸಿದ್ದ ನಿರ್ದೇಶಕ: ಈ ವಿವಾದಾತ್ಮಕ ಡೈರೆಕ್ಟರ್ ಯಾರು?

By ಫಿಲ್ಮಿಬೀಟ್ ಡೆಸ್ಕ್

ತಮಿಳಿನ ಜನಪ್ರಿಯ ನಿರ್ದೇಶಕ ಮಿಸ್ಕಿನ್ ತಮ್ಮ ಸಿನಿಮಾಗಳಿಗಿಂತ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಲ್ಲೊಂದು ಹೇಳಿಕೆ ಕೊಟ್ಟು ದಿಢೀರನೇ ವಿವಾದವನ್ನು ಮೈಮೇಲೆ ಎಳೆದುಕೊಂಡು ಬಿಡುತ್ತಾರೆ. ಇತ್ತೀಚೆಗೆ 'ಬಾಟಲ್ ರಾಧಾ' ಚಿತ್ರದ ಟ್ರೇಲರ್ ರಿಲೀಸ್ ವೇಳೆನೂ ಇಂತಹದ್ದೇ ವಿವಾದವನ್ನು ಸೃಷ್ಟಿಸಿದ್ದರು.

'ಬಾಟಲ್ ರಾಧಾ' ಈವೆಂಟ್‌ನಲ್ಲಿ ಮಿಸ್ಕಿನ್ " ಅತೀ ದು:ಖದಲ್ಲಿ ಇರುವವರು ಮದ್ಯವ್ಯಸನಿಗಳಾಗುತ್ತಾರೆ. ನಾನೂ ವೀಪರಿತ ಕುಡಿಯುತ್ತೇನೆ. ಯಾಕಂದ್ರೆ ನಾನು ನಾನೇ. ಆದರೆ, ನನಗೆ ಕುಡಿತಕ್ಕಿಂತ ಸಿನಿಮಾ ಹಾಗೂ ಅಕಿರಾ ಕುರುಸೋವಾನ ಮೇಲೆ ಹೆಚ್ಚು ವ್ಯಾಮೋಹವಿದೆ. ಕುಡಿತಕ್ಕಿಂತ ನನಗೆ ಸಿನಿಮಾದಲ್ಲಿ ಹೆಚ್ಚು ಕಿಕ್ ಸಿಗುತ್ತೆ" ಎಂದು ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆಗೆ ವೀಪರೀತ ಟೀಕೆಗೆ ಗುರಿಯಾಗಿದ್ದರು.

Mysskin controversial statement on not use Andrea Jeremiah private photoshoot in Pisasu 2

ಹಾಗಂತ ಮಿಸ್ಕಿನ್ ಹೀಗೆ ವಿವಾದವನ್ನು ಸೃಷ್ಟಿಸಿದ್ದು ಒಂದೆರಡಲ್ಲ. ಈ ಹಿಂದೆ ಕೂಡ ಇಂತಹದ್ದೇ ಹಲವು ವಿವಾದಗಳನ್ನು ಸೃಷ್ಟಿಸಿದ್ದರು. ಅದರಲ್ಲಿ ಪ್ರಮುಖವಾಗಿ ಕಮಲ್ ಹಾಸನ್, ಕಾರ್ತಿ ಅಂತಹ ದಿಗ್ಗಜರೊಂದಿಗೆ ನಟಿಸಿದ ಆಂಡ್ರಿಯಾ ಜೆರೆಮಿಯಾ ಅವರ ಬೆತ್ತಲೆ ಫೋಟೊಗಳ ಬಗ್ಗೆನೂ ಹೇಳಿಕೆ ಕೊಟ್ಟು ವಿವಾದವನ್ನು ಸೃಷ್ಟಿಸಿದ್ದರು. ಆ ವಿವಾದವೀಗ ಮತ್ತೆ ಕಾಲಿವುಡ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅದಕ್ಕೆ ಕಾರಣ ಮಿಸ್ಕಿನ್ ನಿರ್ದೇಶಿಸಿದ 'ಪಿಸಾಸು 2' ಸಿನಿಮಾ.

'ಪಿಸಾಸು 2' ಸಿನಿಮಾ 2022ರಿಂದ ಸುದ್ದಿಯಲ್ಲಿದೆ. ಆದರೆ ಈ ಸಿನಿಮಾಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇತ್ತೀಚೆಗೆ ವರದಿಯಾಗಿರುವ ಪ್ರಕಾರ ಈ ಸಿನಿಮಾ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಹಿಂದೆ 'ಚಿತ್ತಿರಂ ಪೆಸುದಡಿ', 'ಅಂಜಾತೆ', 'ನಂದಲಾಲ', 'ಪಿಸಾಸು' ಅಂತಹ ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅದರಲ್ಲೂ 'ಪಿಸಾಸು' ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಆ ಹಿನ್ನೆಲೆಯಲ್ಲೇ 'ಪಿಸಾಸು 2' ಸಿನಿಮಾದ ಶೂಟಿಂಗ್ ಆರಂಭಿಸಿದ್ದರು. ಅದರಲ್ಲಿ ನಟಿ ಆಂಡ್ರಿಯಾ ಜೆರೆಮಿಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Mysskin controversial statement on not use Andrea Jeremiah private photoshoot in Pisasu 2

'ಪಿಸಾಸು 2' ಸಿನಿಮಾ ಶೂಟಿಂಗ್ ವೇಳೆ ನಟಿ ಆಂಡ್ರಿಯಾ ಜೆರೆಮಿಯಾ ಬೆತ್ತಲೆ ಫೋಟೊಶೂಟ್ ಮಾಡುವುದಕ್ಕೆ ಮುಂದಾಗಿದ್ದೆ ಎಂದು ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. "ಪಿಸಾಸು 2 ಸಿನಿಮಾದಲ್ಲಿ ಆಂಡ್ರಿಯಾ ಅವರಿಂದ ಬೆತ್ತಲೆಯಾಗಿ ನಟನೆ ಮಾಡಿಸುವುದಕ್ಕೆ ನಿರ್ಧರಿಸಿದ್ದೆ. ಹೀಗಾಗಿ ನನ್ನ ಸಹಾಯಕ ನಿರ್ದೇಶಕಿ ಈಶ್ವರಿಯನ್ನು ಫೋಟೋಶೂಟ್ ಮಾಡುವುದಕ್ಕೂ ಕಳುಹಿಸಿದ್ದೆ. ಫೋಟೋಶೂಟ್ ಮಾಡುವಾಗ ನಾನು ಹೊರಗಿದ್ದು, ಒಂದು ಸಿಗರೇಟ್ ಎಳೆದು ಅಲ್ಲಿಂದ ನನ್ನ ಆಫೀಸ್‌ಗೆ ಬಂದೆ. ಬಳಿಕ ಆಂಡ್ರಿಯಾಗೆ ಫೋನ್ ಮಾಡಿ ನಿನ್ನನ್ನು ನಗ್ನವಾಗಿ ಫೋಟೋಶೂಟ್ ಮಾಡಬೇಕು ಅಂತ ಹೇಳಿದೆ. ಆದರೆ, ಆ ಫೋಟೊಗಳನ್ನು ಸಿನಿಮಾದ ಪೋಸ್ಟರ್‌ನಲ್ಲಿ ಹಾಕಿದರೆ ಆ ನಗ್ನತೆಯ ಸೌಂದರ್ಯದ ಸೊಬಗನ್ನು ಅರ್ಥಪೂರ್ಣವಾಗಿ ನೋಡುವುದಿಲ್ಲ. ಆ ಫೋಟೊವನ್ನು ಅಸಹ್ಯವಾಗಿ ನೋಡುತ್ತಿದ್ದರು. ಈ ಕಾರಣಕ್ಕೆ ನಾನು ಆ ಫೋಟೊಗಳನ್ನು ಪೋಸ್ಟರ್‌ಗಳಿಗೆ ಹಾಕುವುದೇ ಬೇಡ ಎಂದು ನಿರ್ಧರಿಸಿದ್ದೇನೆ" ಎಂದು ಮಿಸ್ಕಿನ್ ಹೇಳಿದ್ದರು.

ಆ ವೇಳೆ ನಟಿಯ ಬೆತ್ತಲೆ ಫೋಟೊಶೂಟ್ ಮಾಡಿಸಿದ್ದೆ ಎಂದಿದ್ದೂ ವಿವಾದವನ್ನು ಹುಟ್ಟಾಕಿತ್ತು. ಇದರ ಜೊತೆಗೆ ಇಳೆಯರಾಜ ಹಾಡುಗಳನ್ನು ಇಟ್ಟುಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇತ್ತೀಚೆಗೆ ನಡೆದ 'ಬಾಟಲ್ ರಾಧಾ' ಇವೆಂಟ್‌ನಲ್ಲಿ ನನ್ನನ್ನು ಹೆಚ್ಚು ಮದ್ಯವ್ಯಸನಿಯಾಗಿ ಮಾಡಿದ್ದು ಇಳೆಯರಾಜ ಸಂಗೀತ. ಅವರ ಸಂಗೀತ ನಿರ್ದೇಶನ ಮಾಡಿದ ಹಾಡುಗಳಿಂದಲೇ ನಮ್ಮಂತಹ ಮದ್ಯ ವ್ಯಸನಿಗಳು ಹೆಚ್ಚಾಗಿಬಿಟ್ಟಿದ್ದಾರೆ" ಎಂದು ಹೇಳಿಕೆ ಕೊಟ್ಟಿದ್ದರು. ಇದನ್ನು ಹಲವರು ವಿರೋಧಿಸಿದ್ದರು.

ಇತ್ತೀಚೆಗೆ ನಡೆದಿದ್ದ ಮತ್ತೊಂದು ಸಿನಿಮಾ 'ಬ್ಯಾಡ್ ಗರ್ಲ್' ಇವೆಂಟ್‌ನಲ್ಲಿ ಮಿಸ್ಕಿನ್ ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳಿದ್ದಾರೆಂದು ವರದಿಯಾಗಿದೆ. ಮಿಸ್ಕಿನ್ ಸದ್ಯ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ಪಿಸಾಸು 2' ಇನ್ನೇನು ಬಿಡುಗಡೆಯಾಗಬೇಕಿದೆ. ಇದರ ಜೊತೆಗೆ ವಿಜಯ್ ಸೇತುಪತಿ ನಟಿಸುತ್ತಿರುವ 'ಟ್ರೈನ್' ಸಿನಿಮಾಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Tamil film director Mysskin controversial statement on not use Andrea Jeremiah private photo in Pisasu 2;
Read more about: kollywood controversy tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X