Just In
Don't Miss!
- Finance
ಮಾರುತಿ ಸುಜುಕಿಯಿಂದ ಆನ್ ಲೈನ್ ಹಣಕಾಸು ಸಾಲ ಯೋಜನೆಗೆ ಚಾಲನೆ
- News
ಭಾರತದಲ್ಲಿ 15,590 ಕೊರೊನಾ ಸೋಂಕಿತರು ಪತ್ತೆ
- Automobiles
ಎಸ್ಯುವಿ ಕಾರುಗಳ ಮಾರಾಟದಲ್ಲಿ ಮಹೀಂದ್ರಾ ಹಿಂದಿಕ್ಕಿದ ಕಿಯಾ ಮೋಟಾರ್ಸ್
- Sports
ಭಾರತ vs ಆಸ್ಟ್ರೇಲಿಯಾ: ಮತ್ತೆ ಕಾಡಿದ ಗಾಯ, ಅಂಗಳದಿಂದ ಹೊರನಡೆದ ನವ್ದೀಪ್ ಸೈನಿ
- Lifestyle
ಶುಕ್ರವಾರದ ರಾಶಿಫಲ: ಧನು ರಾಶಿಯ ವಿದ್ಯಾರ್ಥಿಗಳಿಗೆ ಮುಖ್ಯವಾದ ದಿನ
- Education
BEL Recruitment 2021: ಐಟಿಐ ಅಪ್ರೆಂಟಿಶಿಪ್ ತರಬೇತಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರೀಕರಣ ವೇಳೆ ಬಾವಿಗೆ ಬಿದ್ದ ನಟಿ ನಮಿತಾ; ಅಲ್ಲಿ ನಡೆದಿದ್ದೇನು?
'ರಾಜ ನಿನ್ನಾಣೆ..ರಾಜ ನಿನ್ನಾಣೆ..' ಎನ್ನುತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಮಸ್ತ್ ಹೆಜ್ಜೆ ಹಾಕುವ ಮೂಲಕ ಒಂದು ಕಾಲದಲ್ಲಿ ಕನ್ನಡ ಚಿತ್ರಾಭಿಮಾನಗಳ ನಿದ್ದೆಗೆಡಿಸಿದ್ದ ನಟಿ ನಮಿತಾ ಇದೀಗ ಮತ್ತೆ ಸದ್ದು ಮಾಡುತ್ತಿದ್ದಾರೆ.
ಬಣ್ಣದ ಲೋಕದಿಂದ ಸ್ವಲ್ಪ ಸಮಯ ಬ್ರೇಕ್ ಪಡೆದಿದ್ದ ನಟಿ ನಮಿತಾ ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಸದ್ಯ ನಮಿತಾ ಬೌ ಬೌ ಸಿನಿಮಾದ ಚಿತ್ರೀಕರಣದಲ್ಲಿ ನಿರತಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುವ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ತಿರುವನಂತಪುರಂನಲ್ಲಿ ಭರದಿಂದ ನಡೆಯುತ್ತಿದೆ.
ನಮಿತಾ ಅಶ್ಲೀಲ ವಿಡಿಯೋ ಮತ್ತು ಆನ್ಲೈನ್ ಬೆದರಿಕೆ: ಏನಿದು ವಿವಾದ?
ಚಿತ್ರೀಕರಣ ಸಮಯದಲ್ಲಿ ನಟಿ ನಮಿತಾ ಬಾವಿಗೆ ಬಿದ್ದಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರೀಕರಣ ವೇಳೆ ನಮಿತಾ ಆಯತಪ್ಪಿ ಬಾವಿಗೆ ಬಿದ್ದಿರುವುದನ್ನು ನೋಡಿ ಸ್ಥಳದಲ್ಲಿದ್ದ ಜನರು ಗಾಬರಿಯಾಗಿದ್ದಾರೆ. ಆದರೆ ನಿಜವಾಗಿಯೂ ಅಲ್ಲಿ ನಡೆದಿದ್ದೇನು?
ನಮಿತಾ ಬಾವಿಗೆ ಬಿದ್ದಿರುವುದು ನಿಜ. ಆದರೆ ಇದು ಸಿನಿಮಾದಲ್ಲಿ ಬರುವ ಒಂದು ದೃಶ್ಯವಷ್ಟೆ. ತನ್ನ ಮೊಬೈಲ್ ಬಾವಿಗೆ ಬಿತ್ತು ಎಂದು ತೆಗೆದುಕೊಳ್ಳಲು ಹೋಗಿ ನಮಿತಾ ಬಾವಿಗೆ ಜಿಗಿಯುತ್ತಾರೆ. ಇದನ್ನು ನೋಡಿ ಅಲ್ಲಿ ನೆರೆದಿದ್ದವರು ನಮಿತಾ ನಿಜಕ್ಕೂ ಬಾವಿಗೆ ಬಿದ್ದಿದ್ದಾರೆ ಎಂದು ತಪ್ಪಾಗಿ ತಿಳಿದುಕೊಂಡು, ವೈರಲ್ ಮಾಡಿದ್ದಾರೆ.
ಈ ದೃಶ್ಯ ಸ್ಥಳದಲ್ಲಿ ಸಾಕಷ್ಟು ಸಂಚಲನ ವುಂಟುಮಾಡಿತ್ತು ಎಂದು ನಿರ್ದೇಶಕ ಆರ್ ಎಲ್ ರವಿ ಹೇಳಿದ್ದಾರೆ. ಜನರೆಲ್ಲಾ ನಿಜಕ್ಕೂ ನಮಿತಾ ಬಾವಿಗೆ ಬಿದ್ದಿದ್ದಾರೆ ಎಂದು ಗಾಬರಿ ಆಗಿದ್ದಾರೆ ಎಂದರೆ ನಮಿತಾ ಎಷ್ಟು ನೈಜವಾಗಿ ನಟಿಸಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ ಎಂದು ನಿರ್ದೇಶಕರು ಬಹಿರಂಗ ಪಡಿಸಿದ್ದಾರೆ.
ಬೌ ಬೌ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಚಿತ್ರದಲ್ಲಿ ನಾಯಿಯೇ ಪ್ರಮುಖ ಪಾತ್ರವಹಿಸಿದೆ. ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ತಯಾರಾಗುತ್ತಿದೆ. ಜೊತೆಗೆ ಹಲವು ಭಾಷೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.
ನಿಮಿತಾ ಕೊನೆಯದಾಗಿ ಪೊಟ್ಟು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 2019ರಲ್ಲಿ ಸಿನಿಮಾ ರಿಲೀಸ್ ಆಗಿದೆ. ಇದೀಗ ಬೌ ಬೌ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಸಿನಿಮಾಗಳ ಜೊತೆಗೆ ನಮಿತಾ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದರು. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲೂ ಮಿಂಚಿದ್ದಾರೆ.