ಮತ್ತೆ ಬಂದ 'ನೀಲಕಂಠ'ನ ರಾಣಿ ನಮಿತಾ: ಸ್ಟಾರ್ ನಟನ ಜೊತೆ ಹೊಸ ಚಿತ್ರ
Recommended Video
ಬಹುಭಾಷೆ ನಟಿ ನಮಿತಾ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಮಾಡೋದು ಬಹಳ ಕಮ್ಮಿ ಆಗಿದೆ. ವರ್ಷಕ್ಕೆ ಐದರಿಂದ ಆರು ಚಿತ್ರಗಳಲ್ಲಿ ನಟಿಸುತ್ತಿದ್ದ ನಮಿತಾ ಪಡ್ಡೆ ಹುಡುಗರ ಫೇವರೆಟ್ ಆಗಿದ್ದ ಸಮಯವೊಂದಿತ್ತು.
ಮದುವೆ ಆದ್ಮೇಲೆ ನಮಿತಾ ಸಿನಿಮಾ ಸಂಖ್ಯೆ ಕಮ್ಮಿ ಆಗಿದೆ. ಆದರೆ ನಮಿತಾ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಈಗಲೂ ನಮಿತಾ ಚಿತ್ರಗಳಿಗೆ ಕಾಯುತ್ತಿರುವ ಅಭಿಮಾನಿಗಳಿದ್ದಾರೆ. ಅಂದ್ಹಾಗೆ, ನಮಿತಾ ಹೊಸ ಸಿನಿಮಾ ಮಾಡ್ತಿದ್ದಾರೆ. ಯಾವುದು ಆ ಚಿತ್ರ? ಮುಂದೆ ಓದಿ....

ಟಿ ರಾಜೇಂದರ್ ಚಿತ್ರದಲ್ಲಿ ನಮಿತಾ!
ತಮಿಳು ಸ್ಟಾರ್ ನಟ ಟಿ ರಾಜೇಂದರ್ ತುಂಬಾ ವರ್ಷದ ನಂತರ ನಿರ್ದೇಶನಕ್ಕೆ ಮರುಳುತ್ತಿದ್ದಾರೆ. ಸುಮಾರು 13 ವರ್ಷದ ಬಳಿಕ ಆಕ್ಷನ್ ಕಟ್ ಹೇಳಲು ಸಜ್ಜಾಗಿರುವ ಟಿ ರಾಜೇಂದರ್ ಅವರ ಹೊಸ ಚಿತ್ರದಲ್ಲಿ ನಮಿತಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಟಿ ರಾಜೇಂದರ್ ಅವರ ಮಗನೇ ಸಿಂಬು.

'ಸೂಪರ್ ಮಾಡೆಲ್' ಆದ ನಮಿತಾ
ಇದೊಂದು ರೋಮ್ಯಾಂಟಿಕ್ ಚಿತ್ರವಾಗಿದ್ದು, ಈ ಸಿನಿಮಾದಲ್ಲಿ ಸೂಪರ್ ಮಾಡೆಲ್ ಆಗಿ ನಮಿತಾ ನಟಿಸುತ್ತಿದ್ದಾರೆ. ಟಿ ರಾಜೇಂದರ್ ಅವರೇ ನಾಯಕರಾಗಿದ್ದು, ಅವರಿಗೆ ಜೋಡಿಯಾಗಿ ಬಣ್ಣ ಹಚ್ಚುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಸಿಂಬು ಸಿನಿ ಆರ್ಟ್ಸ್ ನಿರ್ಮಾಣ!
ಅಂದ್ಹಾಗೆ, ಈ ಚಿತ್ರವನ್ನು ಸ್ವತಃ ಟಿ ರಾಜೇಂದರ್ ಅವರ ನಿರ್ಮಾಣ ಸಂಸ್ಥೆಯೇ ನಿರ್ಮಿಸುತ್ತಿದೆ. ಸಿಂಬು ಸಿನಿ ಆರ್ಟ್ಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಮಾಡಲಿದ್ದಾರಂತೆ.

ಟಿ ರಾಜೇಂದರ್ ಕೊನೆಯ ನಿರ್ದೇಶನದ ಚಿತ್ರ
ಅಂದ್ಹಾಗೆ, ಟಿ ರಾಜೇಂದರ್ ಅವರು ಕೊನೆಯದಾಗಿ ನಿರ್ದೇಶನ ಮಾಡಿದ್ದ ಚಿತ್ರ ವೀರಾಸ್ವಾಮಿ. 2007ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಈ ಚಿತ್ರದ ಬಳಿಕ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟಿರಲಿಲ್ಲ. ಇದೀಗ, 13 ವರ್ಷದ ನಂತರ ಮತ್ತೆ ನಿರ್ದೇಶನಕ್ಕೆ ಮರುಳಲು ಸಜ್ಜಾಗಿದ್ದಾರೆ.

ಗೆಳೆಯನ ಜೊತೆ ವಿವಾಹವಾಗಿದ್ದ ನಮಿತಾ
ನವೆಂಬರ್ 24 ರಂದು ಗೆಳೆಯ ವೀರೇಂದ್ರ ಜೊತೆ ನಮಿತಾ ಹಸೆಮಣೆ ಏರಿದ್ದರು. ಮದುವೆ ಬಳಿಕ ಪೋಟು ಎಂಬ ಚಿತ್ರದಲ್ಲಿ ನಮಿತಾ ನಟಿಸಿದ್ದರು. ಅದಾದ ನಂತರ ಯಾವ ಸಿನಿಮಾನೂ ಬಿಡುಗಡೆಯಾಗಿಲ್ಲ. ಇದೀಗ, ಟಿ ರಾಜೇಂದರ್ ಚಿತ್ರಕ್ಕೆ ಆಯ್ಕೆಯಾಗಿರುವ ಸುದ್ದಿ ಸದ್ದು ಮಾಡ್ತಿದೆ. ಕನ್ನಡದಲ್ಲಿ ನಮಿತಾ ನೀಲಕಂಠ, ಹೂ, ಇಂದ್ರ, ಬೆಂಕಿ ಬಿರುಗಾಳಿ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











