"ಗರ್ಭಿಣಿ ಅಂತ ಗೊತ್ತಿಲ್ದೆ ವರ್ಕೌಟ್‌ ಮಾಡಿ ಎಡವಟ್ಟಾಗಿತ್ತು, ಡಿಪ್ರೆಶನ್‌ಗೆ ಹೋಗಿದ್ದೆ"; ನಮಿತಾ

ತಮಿಳು ನಟಿ ನಮಿತಾ ಒಂದ್ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು. ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ ಚೆಲುವೆ ಆಗೊಮ್ಮೆ ಈಗೊಮ್ಮೆ ಕನ್ನಡ ಚಿತ್ರಕ್ಕೂ ಬಣ್ಣ ಹಚ್ಚಿದ್ದರು. 7 ವರ್ಷಗಳ ಹಿಂದೆ ನಮಿತಾ ವೀರೇಂದ್ರ ಚೌಧರಿ ಎಂಬುವವರ ಕೈ ಹಿಡಿದರು. ಸದ್ಯ ಅವಳಿ ಮಕ್ಕಳ ತಾಯಿ ಆಗಿದ್ದು ಮಕ್ಕಳ ಲಾಲನೆ ಪಾಲನೆ ಜೊತೆ ರಾಜಕೀಯರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಇತ್ತೀಚೆಗೆ ನಟಿ ನಮಿತಾ ಪತಿ ವೀರೇಂದ್ರ ಜೊತೆ ತಮಿಳು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಮದುವೆ, ಮಕ್ಕಳು, ಸಿನಿಮಾ, ಟ್ರೋಲ್ ಸೇರಿದಂತೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮೊದಲು ಮಗುವ ಅಬಾರ್ಷನ್ ಆಗಿದ್ದಾಗ ಡಿಪ್ರೆಶನ್‌ಗೆ ಹೋಗಿದ್ದೆ ಎಂದು ನಮಿತಾ ಹೇಳಿದ್ದಾರೆ. ಇನ್ನು ಗರ್ಭಿಣಿಯಾಗಿದ್ದ ದಿನಗಳು, ಹೆರಿಗೆ ಎಲ್ಲವನ್ನು ಮೆಲುಕು ಹಾಕಿದ್ದಾರೆ.

Namitha Talks about her past miscarriage and Pregnancy Problems

ನವಿತಾ- ವೀರೇಂದ್ರ ರೊಮ್ಯಾಂಟಿಕ್ ಸಂದರ್ಶನದ ವೀಡಿಯೋ ವೈರಲ್ ಆಗುತ್ತಿದೆ. ನಮಿತಾ ಮಾತನಾಡಿ "ಗರ್ಭ ಧರಿಸಿದ 3 ತಿಂಗಳಲ್ಲೇ ನನಗೆ ಅವಳಿ ಮಕ್ಕಳು ಆಗುತ್ತದೆ ಎನ್ನುವುದು ಗೊತ್ತಾಯಿತು. ನಮ್ಮ ಯಜಮಾನರು ಖಡಕ್ ಆಗಿ ಹೇಳಿದ್ದರು. ಹೆಚ್ಚು ಓಡಾಡಬಾರದು. ಎಚ್ಚರಿಕೆ ವಹಿಸಬೇಕು. ವೈದ್ಯರು ಹೇಳಿದ್ದರು. ನಮ್ಮ ಮನೆಯವರು ಬಹಳ ಹುಷಾರಾಗಿ ಇರಬೇಕು ಎಂದಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.

"7 ತಿಂಗಳವರೆಗೂ ಹೊಟ್ಟೆ ಕಾಣಿಸುತ್ತಿರಲಿಲ್ಲ. ಬಳಿಕ ದೊಡ್ಡದಾಗಿ ಕಾಣಿಸಲು ಶುರುವಾಯಿತು. ದಪ್ಪ ಇದ್ದಿದ್ದಕ್ಕೆ ಆ ರೀತಿ ಅನಿಸಿತು ಎನಿಸುತ್ತದೆ. ಅವಳಿ ಮಕ್ಕಳನ್ನು ಹೆರುವ ಮುನ್ನ ಕೂಡ ಒಮ್ಮೆ ಗರ್ಭ ಧರಿಸಿದ್ದೆ. ಗರ್ಭಪಾತವಾಗಿತ್ತು. 4 ತಿಂಗಳ ಗರ್ಭಿಣಿ ಆಗಿದ್ದೆ. ನನಗೆ ಮೊದಲ 2 ತಿಂಗಳು ಗೊತ್ತಿರಲಿಲ್ಲ. ಹೆವಿ ವರ್ಕೌಟ್ ಮಾಡುತ್ತಿದ್ದೆ. ಬಳಿಕ ನನಗೆ ಗರ್ಭಪಾತವಾಗಿದ್ದು. ಬಳಿಕ ನಾನು ಡಿಪ್ರೆಶನ್‌ಗೆ ಒಳಗಾಗಿದ್ದೆ"

"ಮಗುವಿಗಾಗಿ ಪ್ಲ್ಯಾನ್ ಮಾಡಿದ್ದೆವು. ಬಳಿಕ ಗರ್ಭ ಧರಿಸಿ ಈ ರೀತಿ ಆಯಿತು ಎಂದು ಬಹಳ ಚಿಂತಿಸಿದ್ದೆ. ಬಳಿಕ 2ನೇ ಬಾರಿ ಗರ್ಭಿಣಿ ಆಗಿದ್ದಾಗ ಬಹಳ ಖುಷಿಯಾಗಿ ಇದ್ದೆ. ಗಂಡಾಗಲಿ, ಹೆಣ್ಣಾಗಲಿ ಪರವಾಗಿಲ್ಲ ಎಂದುಕೊಂಡೆವು. ಒಂದು ಗಂಡು ಮತ್ತೊಂದು ಹೆಣ್ಣು ಮಗು ಹುಟ್ಟುಬಹುದು ಎಂದುಕೊಂಡಿದ್ದೆವು. ಆದರೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಹೆರಿಗೆ ಸಮಯದಲ್ಲೂ ವೈದ್ಯರ ಬಳಿ ಏನೇನೋ ಮಾತನಾಡುತ್ತಾ ನನ್ನ ಗಮನ ಬೇರೆ ಕಡೆ ತಿರುಗಿಸಿದೆ"

Namitha Talks about her past miscarriage and Pregnancy Problems

"ದಿಢೀರನೆ ಮಗು ಅತ್ತ ಸದ್ದು ಕೇಳಿ ಶಾಕ್ ಆಗಿಬಿಟ್ಟಿದ್ದೆ. ಮೊದಲು ಒಂದು ಗಂಡು ಮಗು ತೋರಿಸಿದರು. 2 ಮಗು ಎಲ್ಲಿ ಎಲ್ಲಿ ಎಂದು ಕೇಳಿದೆ. ಸ್ವಲ್ಪ ಕಾಯಿರಿ ಎಂದು ಹೇಳಿದರು. ಬಳಿಕ ಮತ್ತೊಂದು ಗಂಡು ಮಗು ಕೂಡ ತೆಗೆದುಕೊಟ್ಟರು. ಹೆಣ್ಣು ಮಗು ಎಲ್ಲಿ ಎಂದೆ. ವೈದ್ಯರು ಇಲ್ಲ, ಎರಡೂ ಗಂಡು ಮಗು ಎಂದರು. ಬಳಿಕ ಇಬ್ಬರೂ ಮಕ್ಕಳಿಗೆ ಹಾಲುಣಿಸುವುದು ಬಹಳ ಕಷ್ಟವಾಗಿತ್ತು. ಅದಕ್ಕೆ ಬಹಳ ಕಷ್ಟಪಡುವಂತಾಯಿತು" ಎಂದು ನಮಿತಾ ಹೇಳಿದ್ದಾರೆ.

ಮಕ್ಕಳು ಹುಟ್ಟುವ ಮುನ್ನವೇ ಹೆಸರುಗಳನ್ನು ನಿರ್ಧರಿಸಿದ್ದೆವು. ದೊಡ್ಡ ಮಗನ ಹೆಸರ ಕೃಷ್ಣ ಆದಿತ್ಯಾ, ಚಿಕ್ಕವನ ಹೆಸರು ಕಿಯಾನ್ ರಾಜ್. ಕಿಯಾನ್ ಅಂದ್ರು ಕೃಷ್ಣನ ಮತ್ತೊಂದು ಹೆಸರು ಎಂದು ದಂಪತಿ ಹೇಳಿದ್ದಾರೆ. ನಮಿತಾ ಕನ್ನಡದಲ್ಲಿ ಮೊದಲಿಗೆ 'ನೀಲಕಂಠ' ಚಿತ್ರದಲ್ಲಿ ನಟಿಸಿದ್ದರು. ಬಳಿಕ 'ಇಂದ್ರ' ಹಾಗೂ 'ಹೂ' ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು.

More from Filmibeat

English summary
Actress Namitha recalls her Pregnancy Days;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X