ಜಿಂಕೆ ಮರಿ ನಂದಿತಾ ಹೇಗಾಗ್ಬಿಟ್ರು ನೋಡಿ; ಟೈಟ್ ಡ್ರೆಸ್‌ನಲ್ಲಿ ಸಪೂರ ಮೈಮಾಟ ಪ್ರದರ್ಶನ

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶ್ವೇತಾ ಸದ್ಯ ಚೆನ್ನೈನಲ್ಲಿ ಸೆಟ್ಲ್ ಆಗಿದ್ದಾರೆ. 'ನಂದ ಲವ್ ನಂದಿತಾ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ ಚೆಲುವೆ ಬಳಿಕ ತಮಿಳು ಚಿತ್ರರಂಗ ಪ್ರವೇಶಿಸಿದ್ದರು. ಅಲ್ಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್ ಕಡೆ ಮುಖ ಮಾಡಲಿಲ್ಲ.

ತಮಿಳಿನ ಜೊತೆಗೆ ತೆಲುಗು ಸಿನಿಮಾಗಳಲ್ಲಿ ನಟಿಸಿದ ಶ್ವೇತಾ ಆರಕ್ಕೇರದೇ ಮೂರಕ್ಕಿಳಿಯದೇ ಉಳಿದುಬಿಟ್ಟರು. ಸದ್ಯ ಆಕೆಯ ಕೈಯಲ್ಲಿ ದೊಡ್ಡ ಸಿನಿಮಾಗಳಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಬೋಲ್ಡ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಮತ್ತೊಮ್ಮೆ ಹಾಟ್ ಫೋಟೊಗಳಿಂಗ ಗಮನ ಸೆಳೆದಿದ್ದಾರೆ. ಟೈಟ್ ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಪಡ್ಡೆಹುಡುಗರ ಹುಬ್ಬೇರಿಸಿದ್ದಾರೆ.

Nanda Loves Nanditha fame actress Swetha Stuns In hot Tight Dress

ಜಿಮ್‌ನಲ್ಲಿ ವರ್ಕ್‌ಔಟ್ ಮಾಡಿ ಫಿಟ್‌ನೆಸ್ ಕಾಯ್ದುಕೊಂಡಿರುವ ಚೆಲುವೆ ಮಾದಕ ಮೈಮಾಟವನ್ನು ಕ್ಯಾಮರಾ ಮುಂದೆ ತೆರೆದಿಟ್ಟಿದ್ದಾರೆ. ಟೈಟ್ ಪ್ಯಾಂಟ್, ಕ್ರಾಪ್‌ ಟಾಪ್ ಮೇಲೊಂದು ಜಾಕೆಟ್ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಆ ಫೋಟೊಗಳನ್ನು ಹಂಚಿಕೊಂಡು ಸಂಡೇ ಮೋಟಿವೇಷನ್ ಎಂದು ಬರೆದುಕೊಂಡಿದ್ದಾರೆ. ತೆಲುಗಿನ 'ಮಂಗಳವಾರಂ' ಚಿತ್ರದಲ್ಲಿ ಕೊನೆಯದಾಗಿ ಶ್ವೇತಾ ನಟಿಸಿದ್ದರು.

ಸದ್ಯ 'ರಣಂ' ಹಾಗೂ 'ರಾರಾ ಪೆನಿಮಿಟಿ' ಎನ್ನುವ ಎರಡು ಸಿನಿಮಾಗಳಲ್ಲಿ ಸದ್ಯ ಶ್ವೇತಾ ನಟಿಸುತ್ತಿದ್ದಾರೆ. ಇನ್ನು ಕನ್ನಡ ಸಿನಿರಸಿಕರಿಗೆ ಶ್ವೇತಾ, ಜಿಂಕೆ ಮರಿ ಶ್ವೇತಾ ಅಂತ್ಲೇ ಚಿರಪರಿಚಿತ. ಉದಯ ಮ್ಯೂಸಿಕ್ ವಾಹಿನಿಯಲ್ಲಿ ನಿರೂಪಕಿಯಾಗಿ ಮಿಂಚಿದ್ದ ಶ್ವೇತಾ 'ನಂದ ಲವ್ಸ್ ನಂದಿತಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಲೂಸ್ ಮಾದ ಯೋಗಿ ಹೀರೊ ಆಗಿ ನಟಿಸಿದ ಚೊಚ್ಚಲ ಸಿನಿಮಾ ಇದು. ಶ್ವೇತಾಗೂ ಅದು ಮೊದಲ ಸಿನಿಮಾ ಆಗಿತ್ತು.

'ನಂದ ಲವ್ಸ್ ನಂದಿತಾ' ಬಳಿಕ ನಂದಿತಾ ಶ್ವೇತಾ ಅಂತ ತಮ್ಮ ಹೆಸರು ಬದಲಿಸಿಕೊಂಡಿದ್ದರು. ಇನ್ನು ಆ ಚಿತ್ರದಲ್ಲಿ 'ಜಿಂಕೆ ಮರೀನಾ ನೀ ಜಿಂಕೆಮರಿನಾ' ಎನ್ನುವ ಹಾಡು ಸೂಪರ್ ಹಿಟ್ ಆಗಿತ್ತು. ಯೋಗಿ ಹಾಗೂ ಶ್ವೇತಾ ಇಬ್ಬರೂ ಬಿಂದಾಸ್ ಆಗಿ ಕುಣಿದಿದ್ದರು. ಹಾಗಾಗಿ ಅಭಿಮಾನಿಗಳು ಜಿಂಕೆ ಮರಿ ಶ್ವೇತಾ ಅಂತ್ಲೇ ಕರೆಯಲು ಆರಂಭಿಸಿದ್ದರು.

Nanda Loves Nanditha fame actress Swetha Stuns In hot Tight Dress

ಕ್ರೈಸ್ಟ್ ಕಾಲೇಜ್‌ನಲ್ಲಿ ಓದಿ ಬೆಳೆದ ಶ್ವೇತಾಗೆ ಚಿತ್ರರಂಗಕ್ಕೆ ಬರೋದು ಕಷ್ಟವಾಗಲಿಲ್ಲ. ಉದಯ ಮ್ಯೂಸಿಕ್‌ನಲ್ಲಿ ನಿರೂಪಕಿಯಾಗಿ ಗಮನ ಸೆಳೆಯುತ್ತಿದ್ದಂತೆ ನಿರ್ದೇಶಕ ಬಿ. ಎನ್ ವಿಜಯ್ ಕುಮಾರ್ 'ನಂದ ಲವ್ಸ್ ನಂದಿತಾ' ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. 4 ವರ್ಷಗಳ ಬಳಿಕ ತಮಿಳಿನ 'ಅಟಕತ್ತಿ' ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಪಾ. ರಂಜಿತ್ ನಿರ್ದೇಶನದ ಚಿತ್ರದಲ್ಲಿ ಒಳ್ಳೆ ಪಾತ್ರ ಸಿಕ್ಕಿತ್ತು.

'ಮುಂದಾಸು ಪಟ್ಟಿ', 'ಅಂಜಲಾ', 'ಕಲಕಲಪು-2', 'ಅಸುರವದಂ', 'ದೇವಿ-2', 'ಕಲ್ಕಿ', 'ಅಕ್ಷರಾ', ರತ್ತಾಂ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಶ್ವೇತಾ ನಟಿಸಿದ್ದಾರೆ. ಡಬ್ಬಿಂಗ್ ಕಲಾವಿದೆಯಾಗಿಯೂ ಕೆಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. 'ದಬಾಂಗ್-3' ಸಿನಿಮಾ ದಕ್ಷಿಣದ ಭಾಷೆ ಸಿನಿಮಾಗಳಿಗೆ ಡಬ್ ಆಗಿತ್ತು. ಕನ್ನಡ, ತೆಲುಗು, ತಮಿಳು ವರ್ಷನ್‌ಗಳಲ್ಲಿ ನಾಯಕಿ ಸೋನಾಕ್ಷಿ ಸಿನ್ಹಾ ಪಾತ್ರಕ್ಕೆ ಶ್ವೇತಾ ಡಬ್ ಮಾಡಿದ್ದರು.

ಸೈಮಾ, ಫಿಲ್ಮ್‌ಫೇರ್ ಸೌತ್ ಸೇರಿದಂತೆ ಒಂದಷ್ಟು ಪ್ರಶಸ್ತಿಗಳು ಶ್ವೇತಾಗೆ ಸಿಕ್ಕಿದೆ. ನಟಿಯಾಗಿ ಮಾತ್ರವಲ್ಲದೇ ಡ್ಯಾನ್ಸರ್, ಮಾಡೆಲ್ ಆಗಿಯೂ ಆಕೆ ಗುರ್ತಿಸಿಕೊಂಡಿದ್ದಾರೆ. 'ನಂದ ಲವ್ಸ್ ನಂದಿತಾ' ಬಳಿಕ ಕನ್ನಡದ ಯಾವುದೇ ಚಿತ್ರದಲ್ಲಿ ಆಕೆ ನಟಿಸಲಿಲ್ಲ.

More from Filmibeat

English summary
Nandita Swetha became bold wearing tight dress;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X