For Quick Alerts
  ALLOW NOTIFICATIONS  
  For Daily Alerts

  'ದಳಪತಿ 65' ಸಿನಿಮಾಗೆ ವಿಲನ್ ಆದ ಬಾಲಿವುಡ್ ನ ಖ್ಯಾತ ನಟ

  |

  ಕಾಲಿವುಡ್ ನ ದಳಪತಿ ವಿಜಯ್ ಸದ್ಯ ಮಾಸ್ಟರ್ ಸಿನಿಮಾದ ಯಶಸ್ಸಿನ ಸಂತಸದಲ್ಲಿದ್ದಾರೆ. ಮಾಸ್ಟರ್ ಬಳಿಕ ವಿಜಯ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಆದರೆ ವಿಜಯ್ 65ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಾರೆ ಎಂದು ಅನೌನ್ಸ್ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆಯಲಾಗಿದೆ.

  ದಳಪತಿ 65 ಎಂದು ಕರೆಯುವ ವಿಜಯ್ ಮುಂದಿನ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಈಗಾಗಲೇ ಈ ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಇದೀಗ ಮತ್ತೊಂದು ವಿಚಾರ ವೈರಲ್ ಆಗಿದೆ. ನಟ ವಿಜಯ್ ಸಿನಿಮಾದಲ್ಲಿ ಬಾಲಿವುಡ್ ನ ಖ್ಯಾತ ನಟ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

  ಪ್ರಿಯಾಂಕಾ ಚೋಪ್ರಾ ಆತ್ಮಚರಿತ್ರೆಯಲ್ಲಿ ವಿಜಯ್ ಚಾಪ್ಟರ್; ಮೊದಲ ಸಹ ನಟನ ಬಗ್ಗೆ ಹೇಳಿದ್ದೇನು?

  ಹೌದು, ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ವಿಜಯ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ನವಾಜುದ್ದೀನ್, ವಿಜಯ್ ಎದುರು ವಿಲನ್ ಆಗಿ ಅಬ್ಬರಿಸಲಿದ್ದಾರೆ. ಮೂಲಗಳ ಪ್ರಕಾರ, ದಳಪತಿ 65 ಸಿನಿಮಾದಲ್ಲಿ ವಿಲನ್ ಪಾತ್ರ ತುಂಬಾ ಪವರ್ ಫುಲ್ ಆಗಿದೆಯಂತೆ. ಹಾಗಾಗಿ ಈ ಪಾತ್ರ ನವಾಜುದ್ದೀನ್ ಮಾಡಿದರೆ ಸೂಕ್ತ ಎನ್ನುವುದು ಚಿತ್ರತಂಡದ ನಿರ್ಧಾರ. ಇದರಿಂದ ಸಿನಿಮಾತಂಡ ಅವರನ್ನು ತಮಿಳಿಗೆ ಕರೆತರುವ ಪ್ಲಾನ್ ಮಾಡಿದೆ ಎನ್ನಲಾಗಿದೆ.

  ಈಗಾಗಲೇ ಸಿನಿಮಾತಂಡ ನವಾಜುದ್ದೀನ್ ಜೊತೆ ಮಾತುಕತೆ ನಡೆಸಿದ್ದು, ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ವಿಜಯ್ ಎದುರು ನವಾಜುದ್ದೀನ್ ನಟಿಸುವುದು ಕನ್ಫರ್ಮ್. ಇಬ್ಬರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

  ಇಂಡಸ್ಟ್ರಿ ಹಿಟ್ ಲೆಕ್ಕಾನೆ ಇಲ್ಲ ಬಿಡಿ | Shivarajkumar

  ನವಾಜುದ್ದೀನ್ ಸಿದ್ದಿಕಿ ಸದ್ಯ ಬಾಲಿವುಡ್ ನ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆಯೂ ಡೇಟ್ ಹೊಂದಾಣಿಕೆ ಮಾಡಿಕೊಂಡು ವಿಜಯ್ ಎದುರು ತೊಡೆತಟ್ಟಿ ನಿಲ್ಲಲಿದ್ದಾರಾ ಎಂದು ಕಾದು ನೋಡಬೇಕು. ಅಂದಹಾಗೆ ವಿಜಯ್ ಸಿನಿಮಾ ಜೂನ್ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಚಿತ್ರಕ್ಕೆ ಸನ್ ಪಿಕ್ಟರ್ಸ್ ಬಂಡವಾಳ ಹೂಡುತ್ತಿದೆ. ವಿಜಯ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  English summary
  Bollywood Actor Nawazuddin Siddiqui likely to play villain role in Vijay's 65 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X