For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ಲಸಿಕೆ ಪಡೆದ ನಟಿ ನಯನತಾರಾ ಮತ್ತು ಭಾವಿ ಪತಿ ವಿಘ್ನೇಶ್

  |

  ಕೊರೊನಾ ಎರಡನೇ ಅಲೆಯ ಭೀಕರ ಪರಿಸ್ಥಿತಿ ದೇಶವನ್ನೇ ಬೆಚ್ಚಿಬೀಳಿಸಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ವಿರುದ್ಧ ಹೋರಾಟಕ್ಕೆ ಸಿನಿಮಾ ಸೆಲೆಬ್ರಿಟಿಗಳು ಸಹ ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ.

  ದೇಣಿಗೆ ನೀಡುವ ಜೊತೆಗೆ ಸಂಕಷ್ಟದಲ್ಲಿರುವ ಸಾಕಷ್ಟು ಮಂದಿಯ ನೆರವಿಗೆ ಧಾವಿಸಿದ್ದಾರೆ. ಜೊತೆಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಅನೇಕ ಸಿನಿ ಕಲಾವಿದರು ಕೊರೊನಾ ಲಸಿಕೆ ಪಡೆದಿದ್ದಾರೆ. ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಕೂಡ ಕೋವಿಡ್-19 ಲಸಿಕೆ ಪಡೆದಿದ್ದಾರೆ.

  ಪ್ರಿಯತಮನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ನಯನತಾರಾಪ್ರಿಯತಮನ ಹುಟ್ಟುಹಬ್ಬಕ್ಕೆ ಲಕ್ಷಾಂತರ ಖರ್ಚು ಮಾಡಿದ ನಯನತಾರಾ

  ಮೊದಲ ಡೋಸ್ ಲಸಿಕೆ ಪಡೆದ ನಯನತಾರಾ ಮತ್ತು ವಿಘ್ನೇಶ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೆನ್ನೈನ ಕುಮಾರನ್ ಆಸ್ಪತ್ರೆಯಲ್ಲಿ ನಯನತಾರಾ ಮತ್ತು ವಿಘ್ನೇಶ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿಘ್ನೇಶ್ ಶಿವನ್ ಫಟೋ ಶೇರ್ ಮಾಡಿ 'ದಯವಿಟ್ಟು ಲಸಿಕೆ ಪಡೆಯಿಸಿ ಮತ್ತು ಸುರಕ್ಷಿತವಾಗಿರಿ' ಎಂದು ಬರೆದುಕೊಂಡಿದ್ದಾರೆ.

  ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ವದಂತಿ ಬಗ್ಗೆ ಗರಂ ಆಗಿದ್ದ ನಯನತಾರಾ ಮತ್ತು ವಿಘ್ನೇಶ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದರು. ಆರೋಗ್ಯವಾಗಿ, ಸಂತೋಷವಾಗಿರುವುದಾಗಿ ಹೇಳಿದ್ದರು.

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ನಯನತಾರಾ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ನಯನತಾರಾ ಹೈದರಾಬಾದ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಚಿತ್ರೀಕರಣ ಮುಗಿಸಿ ಚೆನ್ನೈಗೆ ವಾಪಸ್ ಆದ ಬಳಿಕ ರಜನಿಕಾಂತ್ ಕೂಡ ಕೊರೊನಾ ಲಸಿಕೆ ಪಡೆದಿದ್ದರು.

  ಕಾಲಿವುಡ್ ನ ಖ್ಯಾತ ಕಲಾವಿದರಾದ ರಾಧಿಕಾ, ಕಮಲ್ ಹಾಸನ್, ಸಿಮ್ರಾನ್, ಸುಧಾರಾಣಿ ಸೇರಿದಂತೆ ಅನೇಕರು ಲಸಿಕೆ ಹಾಕಿಸಿಕೊಂಡಿದ್ದಾರೆ.

  ಇದೀಗ ನಯನತಾರಾ ಮತ್ತು ವಿಘ್ನೇಶ್ ಕೂಡ ಲಸಿಕೆ ಪಡೆದಿದ್ದಾರೆ. ನಯನತಾರಾ ಬಾಯ್ ಫ್ರೆಂಡ್, ನಿರ್ದೇಶಕ ವಿಘ್ನೇಶ್ ಶಿವನ್ 'ಕಾತು ವಾಕುಲ ರೆಂಡು ಕಾದಲ್' ಚಿತ್ರದ ನಿರ್ದೇಶದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ವಿಜಯ್ ಸೇತುಪತಿ, ಸಮಂತಾ, ನಯನತಾರಾ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  Kirik Party ಅನುಭವವನ್ನು‌ ಮತ್ತೆ ಫೀಲ್‌ ಮಾಡೋಕೆ ಇಷ್ಟ ಇಲ್ಲ | Filmibeat Kannada
  English summary
  Actress Nayanthara and her boyfriend Vignesh Shivan get corona vaccine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X