ನಟಿ ನಯನತಾರಾ ತಂದೆ ಆಸ್ಪತ್ರೆಗೆ ದಾಖಲು

ಪ್ರಭುದೇವರ ಬಿಟ್ಟಮೇಲೂ ನಯನತಾರಾ ಜೀವನ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಈ ಬಾರಿ ಲವ್ವು-ಗಿವ್ವು ಎಂದು ಅವರೇ ಮಾಡಿಕೊಂಡ ಯಡಬಟ್ಟೇನಲ್ಲ. ನಯನತಾರಾ ತಂದೆಯ ಆರೋಗ್ಯಸ್ಥಿತಿ ಚಿಂತಾಜನಕವಾಗಿದೆ. ಹಾಗಾಗಿ ಅವರೀಗ ತಂದೆಯ ಚಿಕಿತ್ಸೆಗಾಗಿ ಆಸ್ಪತ್ರೆವಾಸಿ ಆಗಬೇಕಾಗಿದೆ. ಸದ್ಯಕ್ಕೆ ಶೂಟಿಂಗ್ ಬ್ರೇಕ್ ತೆಗೆದುಕೊಂಡಿರುವ ನಯನಾ ತಂದೆಯೊಂದಿಗೆ ಆಸ್ಪತ್ರೆಯಲ್ಲಿದ್ದಾರೆ.

ನಯನತಾರಾ ತಂದೆ ಕುರಿಯನ್ ಕೋಡಿಯಟ್ಟು (Kurian Kodiattu) ಅನಾರೋಗ್ಯ ಪೀಡಿತರಾಗಿದ್ದಾರೆ. ಅವರಿಗೆ ಸಿಕ್ಕಾಪಟ್ಟೆ ಟೆಸ್ಟ್ ಗಳು, ಚಿಕಿತ್ಸೆ ಮಾಡಿಸಬೇಕಾಗಿರುವುದು ಈಗತಾನೇ ಮತ್ತೆ ವೃತ್ತಿಜೀವನಕ್ಕೆ ಮರಳಿದ್ದ ನಯನತಾರಾ ಪಾಲಿಗೆ ನುಂಗಲಾರದ ತುತ್ತಾಗಿದೆ. ಆದರೆ ಅನಾರೋಗ್ಯವೇನು ಹೇಳಿಕೇಳಿ ಬರುವುದೇ? ಅಸಹಾಯಕತೆಯಲ್ಲೂ ಧೈರ್ಯತಾಳಿರುವ ಈ ನಟಿ, ಅಪ್ಪನ ಆರೋಗ್ಯ ಸುಧಾರಣೆಗೆ ಟೊಂಕಕಟ್ಟಿ ನಿಂತಿದ್ದಾರೆ.

ಪಾಪ, ಪ್ರಭುದೇವರ ನಂಬಿ ಹಳ್ಳಕ್ಕೆ ಬಿದ್ದ ಮೇಲೆ ಯಾಕೋ ನಯನತಾರಾ ನಸೀಬು ನೆಟ್ಟಗಾಗುತ್ತಿಲ್ಲ. ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಆಫರ್ ಗಳು ನಯನಾ ಪಾಲಿಗೆ ಬರುತ್ತಲೇ ಇವೆ. ಆದರೆ ಯಾವುದನ್ನೂ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಸ್ವತಃ ಆಕೆಯೇ ಇಲ್ಲ. ಸದ್ಯಕ್ಕೆ ಕೃಷ್ಣಂ ವಂದೇ ಜಗದ್ಗುರುಂ ಚಿತ್ರೀಕರಣದಲ್ಲಿ ಬಜಿಯಾಗಿದ್ದರು ನಯನತಾರಾ. ನಂತರ ಭೂಪತಿ ಪಾಂಡ್ಯನ್ ರ ಹೆಸರಿಡದ ಚಿತ್ರ ಹಾಗೂ ಅಜಿತ್ ಕುಮಾರ್ ಚಿತ್ರಗಳು ನಯನಾ ಕೈಯಲ್ಲಿವೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Nayantara, who recently broke up with Prabhu Deva, seems to be going through a tough phase of her life. The actress father is not doing good.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X