ರಸ್ತೆ ಬದಿಯಲ್ಲಿ ನಯನತಾರಾ ಐಸ್ ಕ್ರೀಮ್ ಪಾರ್ಟಿ ; ಆ ಕಡೆ ತಿರುಗಿ ನೋಡಲಿಲ್ಲ ಲೇಡಿ ಸೂಪರ್ ಸ್ಟಾರ್..!

ಸೆಲೆಬ್ರಿಟಿಗಳು ಏನೇ ಮಾಡಲಿ, ಅದು ಬಹುತೇಕರಿಗೆ ತುಂಬಾನೇ ಸ್ಪೆಷಲ್ ಅನಸುತ್ತೆ. ಹೀಗಾಗಿಯೇ ವಿಡಿಯೋ.. ಫೋಟೋ.. ಕಣ್ ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ವೈರಲ್ ಆಗ್ತಾವೆ. ಚರ್ಚೆಗೀಡಾಗುತ್ತಾವೆ. ಇದಕ್ಕೆ ನಯನತಾರಾ ಅವರ ಹೊಚ್ಚ ಹೊಸ ವಿಡಿಯೋ ಸಾಕ್ಷಿ.

ಹೌದು, ಯಾವ ಕ್ಷಣದಲ್ಲಾದರೂ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಅವರ ವಿಚ್ಚೇದನದ ಸುದ್ದಿ ಬ್ಲ್ಯಾಸ್ಟ್ ಆಗಬಹುದು ಎಂದು, ಕಳೆದ ಒಂದು ತಿಂಗಳಿನಿಂದ ಈ ಜೋಡಿಯ ಮೇಲೆ ಅನೇಕರು ಕಣ್ಣಿಟ್ಟು ಕುಳಿತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ತಮ್ಮ ಬದುಕಿನ ಪ್ರತಿಯೊಂದು ಕ್ಷಣವನ್ನೂ ಖುಷಿಯಿಂದ ಕಳೆಯುತ್ತಿದ್ದಾರೆ. ಇಂತಹದ್ದೇ ಖುಷಿಯ ಕ್ಷಣ ಕ್ಯಾಮರಾದಲ್ಲಿ ಸದ್ಯಕ್ಕೆ ಸೆರೆಯಾಗಿದೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಅಭಿಮಾನಿಗಳ ಕಣ್ಮನ ತಣಿಸುತ್ತಿದೆ.

Nayantara ice cream party with friends on the roadside

ಮಧ್ಯರಾತ್ರಿಯಲ್ಲಿ ನಯನತಾರಾ ಬದುಕನ್ನ ಇಲ್ಲಿ ಸಂಭ್ರಮಿಸುತ್ತಿದ್ದಾರೆ. ಫುಟ್ ಪಾತ್ ಮೇಲೆ ನಿಂತು ಐಸ್ ಕ್ರೀಮ್ ತಿಂದಿದ್ದಾರೆ. ಇನ್ನೂ ಅಲ್ಲಿಯೇ ಮಾರೂದ್ದದಲ್ಲಿ ತನಿಷ್ಕ್ ಆಭರಣದ ಸ್ಟೋರ್ ಇದೆ. ಆ ಸ್ಟೋರ್ ಮೇಲೆ ತನಿಷ್ಕ್ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿರುವ ನಯನತಾರಾ ಅವರ ಬೃಹತ್ ಫೋಟೋ ದೀಪದ ಬೆಳಕಿನಲ್ಲಿ ಮಿನುಗುತ್ತಿದೆ. ಆದರೂ ತಮ್ಮದೇ ಫೋಟೋವನ್ನ ನೋಡಲು ನಯನತಾರಾಗೆ ಅದ್ಯಾಕೋ ಸಂಕೋಚ. ಹೀಗಾಗಿಯೇ ಆ ಕಡೆ ತಿರುಗಿಯೂ ನೋಡದೆ ನಯನತಾರಾ ತಮ್ಮ ಈ ಐಸ್ ಕ್ರೀಮ್ ಪಾರ್ಟಿಯನ್ನ ಎಂಜಾಯ್ ಮಾಡಿದ್ದಾರೆ

ಇನ್ನೂ.. ನಯನತಾರಾ ಖುದ್ದು ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲಿಯೇ ಆಕ್ಟಿವ್ ಆಗಿರುವ ನಯನತಾರಾ ಅವರ ಅಭಿಮಾನಿಗಳು ಕಮೆಂಟ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ತಮ್ಮ ಅಚ್ಚು ಮೆಚ್ಚಿನ ನಾಯಕಿಯ ಸರಳತೆಗೆ ತಮ್ಮ ತಮ್ಮ ಮನೆಯಿಂದನೇ ಸಾಷ್ಟಾಂಗ ನಮಸ್ಕಾರವನ್ನೂ ಹಾಕುತ್ತಿದ್ದಾರೆ. ಇನ್ನೂ ಕೆಲವರು ವಿಡಿಯೋ ನೋಡಿ ಮನೆಯಾಚೆ ಬಂದು ಐಸ್ ಕ್ರೀಮ್ ಪಾರ್ಲರ್ ಗಳ ಬಳಿ ತೆರಳಿ ನಯನತಾರಾ ಅವರನ್ನ ಹುಡುಕಾಡಿದ್ದಾರೆ.

Nayantara ice cream party with friends on the roadside

ಅಂದ್ಹಾಗೇ ನಯನತಾರಾ ಇಲ್ಲಿ ತಮ್ಮ ಪಾಡಿಗೆ ತಾವು ಐಸ್ ಕ್ರೀಮ್ ತಿಂದಿದ್ದಾರೆ. ಯಾವುದೇ ಗದ್ದಲ ಗೌಜುಗಳಿಲ್ಲ. ಸೆಲ್ಫೀಗಾಗಿ ಜನ ಮುಗಿ ಬಿದ್ದಿಲ್ಲ. ಪ್ರಶಾಂತ ವಾತಾವರಣದಲ್ಲಿ ಕಾಲ ಕಳೆದು ಬಂದಿದ್ದಾರೆ. ಆದರೆ.. ಇದೇ ನಯನತಾರಾ ಮುಂಬೈನಲ್ಲಿ ಇದ್ದಿದ್ದರೆ, ಈ ತರ ನೆಮ್ಮದಿಯಾಗಿ ಐಸ್ ಕ್ರೀಮ್ ತಿನ್ನಲು ಸಾಧ್ಯವೇ ಆಗುತ್ತಿರಲಿಲ್ಲ. ಯಾಕೆಂದರೆ ಅಲ್ಲಿ ಕಾಲಿಟ್ಟಲೆಲ್ಲ ಕ್ಯಾಮರಾ ಕಣ್ಣು ಹಿಂಬಾಲಿಸುತ್ತಿರುತ್ತೆ. ಹೀಗಾಗಿಯೇ ಅನೇಕರು ನಯನತಾರಾ ಅವರ ಈ ವಿಡಿಯೋವನ್ನ ನೆಪವಾಗಿಸಿಕೊಂಡು, ಸೆಲೆಬ್ರಿಟಿಗಳಿಗೆ ಖಾಸಗಿ ಬದುಕು ಎಷ್ಟು ಮುಖ್ಯ ಅನ್ನುವುದನ್ನ ಚರ್ಚೆ ಮಾಡುತ್ತಿದ್ದಾರೆ. ಎಷ್ಟೇ ದೊಡ್ಡ ಸೆಲೆಬ್ರಿಟಿಯಾದರೂ ಅವರಲ್ಲಿಯೂ ಆಸೆ-ಆಕಾಂಕ್ಷೆಗಳಿರುತ್ತವೆ ಅವರ ಪಾಡಿಗೆ ಅವರನ್ನ ನೆಮ್ಮದಿಯಾಗಿ ಬದುಕಲು ಬಿಡಿ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ

ಉಳಿದಂತೆ ನಯನತಾರಾ ಅವರ ಜೊತೆ ಇರುವ ಇಬ್ಬರು ವ್ಯಕ್ತಿಗಳು ಯಾರು ಅನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂಶೋಧನೆ ನಡೆಯುತ್ತಿದೆ. ವಿಘ್ನೇಶ್ ಶಿವನ್ ಎಲ್ಲಿ ಅನ್ನುವ ಪ್ರಶ್ನೆ ಅನೇಕರಿಗೆ ಕಾಡುತ್ತಿದೆ. 295.2K ವ್ಯೂವ್ಸ್ ನ್ನ ವಿಡಿಯೋ ಪಡೆದಿದೆ.

More from Filmibeat

English summary
Lady Super Star Nayantara Enjoyed Ice Cream At Mid Night With Friends On Street. Video Of Jawan Actress Is Now Going Viral,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X