ನಯನತಾರಾ ಅವರದ್ದು ಸಹಜ ಸೌಂದರ್ಯ ಅಲ್ಲವಾ ? ನನ್ನನ್ನೂ ಸುಡ್ತೀರಾ ಎಂದಿದ್ದೇಕೆ ಲೇಡಿ ಸೂಪರ್ ಸ್ಟಾರ್..?

ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದ ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ.

ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರ ಕೂಡ ಇದೇ ತರಹದ ಪ್ರಯೋಗವನ್ನು ಮಾಡುವ ಮೂಲಕ ತಮ್ಮ ಅಂದ ಚೆಂದ ಹೆಚ್ಚಿಸಿಕೊಂಡಿದ್ದಾರಾ ಅನ್ನುವ ಅನುಮಾನ ಅನೇಕರಲ್ಲಿದೆ. ನಯನತಾರಾ ಅವರ ಹಳೆಯ ಮತ್ತು ಇಂದಿನ ಭಾವ ಚಿತ್ರಗಳನ್ನು ಹೋಲಿಕೆ ಮಾಡಿ ಆಗಾಗ ಈ ಕುರಿತು ಚರ್ಚೆ ಕೂಡ ನಡೆಯುತ್ತಿರುತ್ತೆ. ನಯನತಾರಾ ಅವರ ಮುಖ ಬದಲಾದಂತೆ ಕಾಣುತ್ತೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿರುತ್ತೆ. ಇದೆಲ್ಲದಕ್ಕೂ ಈಗ ನಯನತಾರಾ ಖುದ್ದು ಮೌನ ಮುರಿದು ಉತ್ತರ ನೀಡಿದ್ದಾರೆ. ಪ್ಲಾಸ್ಟಿಕ್ ಸರ್ಜರಿಯ ಕುರಿತು ಮಾತನಾಡಿದ್ದಾರೆ.

Nayanthara addresses rumours of cosmetic surgery on her face here s her reply

ಹೌದು, ಹಾಟರ್‌ಫ್ಲೈ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಯನತಾರಾ ನಾನು ಪ್ರತಿಯೊಂದು ಕಾರ್ಯಕ್ರಮಕ್ಕೆ ಹೋಗುವ ಮುನ್ನ ನಾನು ನನ್ನ ಐಬ್ರೋ ಶೇಪ್ ಮಾಡಿಸುತ್ತೇನೆ, ನನ್ನ ಮುಖ ಬದಲಾದಂತೆ ಕಾಣಲು ಇದೇ ಕಾರಣ ಎನ್ನುವುದು ನನ್ನ ಭಾವನೆ ಎಂದಿದ್ದಾರೆ. ಐಬ್ರೋ ಶೇಪ್ ಮಾಡಿಸುವುದರಿಂದ ನನ್ನ ಮುಖದಲ್ಲಿನ ಬದಲಾವಣೆಯನ್ನು ನೋಡಿ ಅನೇಕರು ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಅಂದುಕೊಂಡಿದ್ದಾರೆ.

ಆದರೆ ವಾಸ್ತವದಲ್ಲಿ ಇದು ಸತ್ಯಕ್ಕೆ ದೂರವಾದದು ಎಂದಿರುವ ನಯನತಾರಾ ನಾನು ಡಯಟ್ ಮಾಡುತ್ತೇನೆ ಈ ಕಾರಣಕ್ಕೆ ನನ್ನ ದೇಹದ ತೂಕದಲ್ಲಿ ಆಗಾಗ ಏರಿಳಿತವಾಗುತ್ತಿರುತ್ತೆ ಎಂದಿದ್ದಾರೆ. ಇದರಿಂದ ನನ್ನ ಕೆನ್ನೆ ಕೆಲ ಒಮ್ಮೆ ಒಳಗೆ ಹೋದಂತೆ ಕಾಣುತ್ತೆ ಇನ್ನೂ ಕೆಲವೊಮ್ಮೆ ಕೆನ್ನೆ ಊಡಿಕೊಂಡಂತೆ ಕಾಣಿಸುತ್ತೆ ಎಂದಿದ್ದಾರೆ. ಬೇಕಿದ್ದರೆ ನೀವು ನನ್ನನ್ನು ಮುಟ್ಟಿ ನೋಡಬಹುದು, ಸಮಾಧಾನ ಆಗದಿದ್ದರೆ ಸುಟ್ಟು ನೋಡಬಹುದು ಆಗ ನಿಮಗೆ ಯಾವ ಪ್ಲಾಸ್ಟಿಕ್ ಇಲ್ಲ ಎನ್ನುವುದು ಮನದಟ್ಟಾಗಬಹುದು ಎಂದು ಕೂಡ ನಯನತಾರಾ ಹೇಳಿದ್ದಾರೆ.

ಅಂದ್ಹಾಗೇ ನಯನತಾರಾ ತೆಳ್ಳಗೆ ಬೆಳ್ಳಗೆ ಕಾಣಲು ಲಿಪೊಸಕ್ಷನ್ ಸರ್ಜರಿ ಮಾಡಿಸಿದ್ದಾರೆ ಎನ್ನುವ ಮಾತು ತುಂಬಾ ಹಿಂದೆಯಿಂದ ಕೇಳಿ ಬರುತ್ತಿದೆ. ಆದರೆ, ಇಲ್ಲಿಯವರೆಗೆ ನಯನತಾರಾ ಈ ವಿಚಾರದ ಕುರಿತು ಮಾತನಾಡಿರಲಿಲ್ಲ. ಆದರೆ ಈಗ ಇದೇ ಮೊದಲ ಬಾರಿ ನಯನತಾರಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವರಿಗೆ ಉತ್ತರವನ್ನು ನೀಡಿದ್ದಾರೆ. ನನ್ನದು ಸಹಜ ಸೌಂದರ್ಯ ಎಂಬರ್ಥದಲ್ಲಿ ಮಾತುಗಳನ್ನಾಡಿದ್ದಾರೆ

ಉಳಿದಂತೆ ಸದ್ಯಕ್ಕೆ ನಯನತಾರಾ ಟೆಸ್ಟ್ ಮತ್ತು ಮನ್ನನ್‌ಗಟ್ಟಿ ಸಿನ್ಸ್ 1960 ಚಿತ್ರಗಳ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಎರಡು ಚಿತ್ರಗಳನ್ನು ಹೊರತು ಪಡಿಸಿದರೆ ಥನಿ ಒರುವನ್ 2 ಚಿತ್ರದ ಚಿತ್ರೀಕರಣವನ್ನು ಮಾಡುತ್ತಿರುವ ನಯನತಾರಾ ಮೂಕುತಿ ಅಮ್ಮನ್ 2 ಚಿತ್ರವನ್ನು ಕೂಡ ಒಪ್ಪಿಕೊಂಡಿದ್ದಾರೆ. ಇನ್ನೂ ನಿವಿನ್ ಪೌಲಿ ಜೊತೆ ಡಿಯರ್ ಸ್ಟೂಡೆಂಟ್ಸ್ ಎಂಬ ಮಲಯಾಳಂ ಚಿತ್ರದಲ್ಲಿ ಕೂಡ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ.

ಈ ಎಲ್ಲ ಚಿತ್ರಗಳನ್ನು ಹೊರತು ಪಡಿಸಿದರೆ ನಯನತಾರಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಹತ್ವಕಾಂಕ್ಷೆಯ ಚಿತ್ರ ಟಾನಿಕ್‌ನಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗಿದ್ದಾರೆ. ಇನ್ನೂ ಚಿತ್ರದಲ್ಲಿ ನಯನತಾರಾ ಅವರು ಯಶ್ ಸಹೋದರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆಯಾದರೂ ಈ ವಿಚಾರದ ಬಗ್ಗೆ ಗುಟ್ಟು ನಯನತಾರಾ ಆಗಲಿ ಯಶ್ ಆಗಲಿ ಬಿಟ್ಟು ಕೊಟ್ಟಿಲ್ಲ. ಇಬ್ಬರ ನಡುವೆ ಸಾಕಷ್ಟು ಸನ್ನಿವೇಶಗಳಿರಲಿವೆ ಎನ್ನುವ ಮಾತು ಮಾತ್ರ ಸದ್ಯಕ್ಕೆ ಕೇಳಿ ಬರುತ್ತಿದೆ. ಟಾಕ್ಸಿಕ್ ಚಿತ್ರಕ್ಕೂ ಮುನ್ನ ನಯನತಾರಾ ಕನ್ನಡದಲ್ಲಿ ಉಪೇಂದ್ರ ನಿರ್ದೇಶಿಸಿ ಅಭಿನಯಿಸಿದ್ದ ಸೂಪರ್ ಚಿತ್ರದಲ್ಲಿ ನಟಿಸಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X