ನಯನತಾರಾಗೆ ಅವಳಿ ಮಕ್ಕಳು.. ನಯನ್ ಸೊಂಟದ ಮೇಲಿನ ಮಚ್ಚೆ ನೋಡಿ ಅಂದೇ ಜ್ಯೂ. ಎನ್‌ಟಿಆರ್ ಭವಿಷ್ಯ?

ಮದುವೆ ಆದ 4 ತಿಂಗಳಿಗೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ಅವಳಿ ಮಕ್ಕಳಿಗೆ ಪೋಷಕರಾದ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸಾರೋಗಸಿ(ಬಾಡಿಗೆ ತಾಯ್ತನ) ಪದ್ದತಿಯಿಂದ ದಂಪತಿ ಮಕ್ಕಳನ್ನು ಪಡೆದಿರುವುದಾಗಿ ಹೇಳಲಾಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲೀಗ ಇದೇ ಹಾಟ್ ಟಾಪಿಕ್ ಆಗಿದೆ. ಅಭಿಮಾನಿಗಳು ಕಾಲಿವುಡ್ ಹಾಟ್ ಕಪಲ್‌ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಮತ್ತೊಂದ್ಕಡೆ ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗ್ತಿದ್ದಾರೆ.

ಜೂನ್ 9ಕ್ಕೆ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಹಸೆಮಣೆ ಏರಿದ್ದರು. ಇದೀಗ ಅವಳಿ ಮಕ್ಕಳಿಗೆ ಅಪ್ಪ, ಅಮ್ಮ ಆಗಿದ್ದೀವಿ ಎಂದು ಘೋಷಿಸಿರುವುದು ಕೆಲವರಿಗೆ ಅಚ್ಚರಿ ತಂದಿದೆ. ಮತ್ತೆ ಕೆಲವರು ಸಾರೋಗಸಿ ಪದ್ಧತಿಯಲ್ಲಿ ಇದು ಸಾಧ್ಯ ಬಿಡಿ ಎನ್ನುತ್ತಿದ್ದಾರೆ. ಆದರೆ ಇದೇ ಕಾರಣಕ್ಕೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನಯನತಾರಾ ನಟನೆಯ ಸಿನಿಮಾಗಳಲ್ಲಿ ಮಕ್ಕಳ ಬಗೆಗಿನ ಚರ್ಚೆಯ ಸನ್ನಿವೇಶದ ವಿಡಿಯೋಗಳನ್ನು ಕಟ್ ಮಾಡಿ ಪ್ರಸ್ತುತ ಸನ್ನಿವೇಶಕ್ಕೆ ಹೋಲಿಸಿ ಮೀಮ್ಸ್ ಕ್ರಿಯೇಟ್ ಮಾಡಿ ತೇಲಿ ಬಿಡುತ್ತಿದ್ದಾರೆ. ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

ಅವಳಿ ಮಕ್ಕಳ ಕಾಲುಗಳಿಗೆ ಮುತ್ತಿಕ್ಕುವ ಫೋಟೊ ಸಮೇತ ನಾವಿಬ್ಬರು ತಂದೆ- ತಾಯಿ ಆಗಿದ್ದೀವಿ ಎನ್ನುವ ವಿಚಾರವನ್ನು ನಯನ್ ಹಾಗೂ ವಿಕ್ಕಿ ಘೋಷಿಸಿದ್ದರು. ಆದರೆ ಹೇಗೆ ಮಕ್ಕಳು ಪಡೆದ್ರು ಎನ್ನುವುದನ್ನು ಮಾತ್ರ ರಿವೀಲ್ ಮಾಡಿಲ್ಲ. ಆದರೆ ಸಾರೋಗಸಿ ಪದ್ಧತಿಯಿಂದಲೇ ಮುದ್ದಾದ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

 ರಣ್‌ಲಿಯಾ- 4ಜಿ, ನಯನ್ - ವಿಕ್ಕಿ 5ಜಿ

ರಣ್‌ಲಿಯಾ- 4ಜಿ, ನಯನ್ - ವಿಕ್ಕಿ 5ಜಿ

ಮದುವೆ ಆದ 4 ತಿಂಗಳಿಗೆ ಪೋಷಕರಾದ ವಿಚಾರವನ್ನು ನಯನ್, ವಿಕ್ಕಿ ಘೋಸಿಸುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ದಂಪತಿ 2ಜಿ ಸ್ಪೀಡ್, ರಣ್‌ಬೀರ್- ಆಲಿಯಾ ಭಟ್ 4ಜಿ ಸ್ಪೀಡ್, ನಯನ್- ವಿಘ್ನೇಶ್ 5ಜಿ ಎಂದು ಕೆಲವರು ವ್ಯಂಗ್ಯ ಮಾಡ್ತಿದ್ದಾರೆ.

 ಅಂದೇ ಜ್ಯೂ. ಎನ್‌ಟಿಆರ್ ಭವಿಷ್ಯ ?

ಅಂದೇ ಜ್ಯೂ. ಎನ್‌ಟಿಆರ್ ಭವಿಷ್ಯ ?

ಕೆಲ ವರ್ಷಗಳ ಹಿಂದೆ ಜ್ಯೂ. ಎನ್‌ಟಿಆರ್ ಹಾಗೂ ನಯನತಾರಾ 'ಅದುರ್ಸ್' ಎನ್ನುವ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ತಾರಕ್ ಅರ್ಚಕನ ವೇಷದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು. ಚಿತ್ರದ ಸನ್ನಿವೇಶವೊಂದರಲ್ಲಿ ನಾಯಕಿ ನಯನ್ ಸೊಂಟ ನೋಡಿ "ನಿಮ್ಮ ಸೊಂಟದಲ್ಲಿ ಮಚ್ಚೆ ಇದೆ, ನಿಮಗೆ ಅವಳಿ ಮಕ್ಕಳು ಹುಟ್ಟುತ್ತಾರೆ, ಹೀಗಂತ ಮಚ್ಚೆ ಶಾಸ್ತ್ರ ಹೇಳುತ್ತೆ" ಎನ್ನುವ ಕಾಮಿಡಿ ಸೀನ್ ಇದೆ. ಸದ್ಯ ಈ ವಿಡಿಯೋ ಕಟ್ ಮಾಡಿ, ಅಂದು ತಾರಕ್ ಹೇಳಿದ್ದು ನಿಜವಾಯ್ತು ಎಂದು ಟ್ರೋಲ್ ಮಾಡ್ತಿದ್ದಾರೆ.

 'ಇರು ಮುಗನ್' ಸಿನಿಮಾ ಕ್ಲೈಮ್ಯಾಕ್ಸ್

'ಇರು ಮುಗನ್' ಸಿನಿಮಾ ಕ್ಲೈಮ್ಯಾಕ್ಸ್

ನಯನತಾರಾ ಹಾಗೂ ಚಿಯಾನ್ ವಿಕ್ರಂ ನಟನೆಯ 'ಇರುಮುಗನ್' ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲೂ ಇಂಥದ್ದೇ ಒಂದು ಸೀನ್ ಇದೆ. ವಿಕ್ರಂ, ನಯನತಾರಾ ಬಳಿ ಬೇಗ ಮಕ್ಕಳು ಬೇಕು ಎನ್ನುವುದು, ಎಷ್ಟು ಬೇಗ, 3 ವರ್ಷನಾ ಅದಕ್ಕಿಂತ ಬೇಗ, ಅಂದ್ರೆ 10 ತಿಂಗಳಲ್ಲಾ? ಅಂದರೆ ಅದಕ್ಕಿಂತ ಬೇಗ ಕೇವಲ 24 ಗಂಟೆಗಳಲ್ಲಿ ಎಂದು ವಿಕ್ರಂ ಹೇಳುವ ಸನ್ನಿವೇಶ ಇದೆ. ವಿಕ್ರಂ ಮುಖಕ್ಕೆ ವಿಘ್ನೇಶ್ ಶಿವನ್ ಮುಖವನ್ನು ಅಂಟಿಸಿ ಕೆಲವರು ವಿಡಿಯೋ ವೈರಲ್ ಮಾಡಿದ್ದಾರೆ.

 ಮದುವೆಗೂ ಮೊದಲೇ ಪ್ಲ್ಯಾನ್ ಮಾಡಿದ್ದ ಜೋಡಿ

ಮದುವೆಗೂ ಮೊದಲೇ ಪ್ಲ್ಯಾನ್ ಮಾಡಿದ್ದ ಜೋಡಿ

ಮದುವೆ ಮೊದಲೇ ಅಂದರೆ ಮಾರ್ಚ್‌ನಲ್ಲಿಯೇ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ಬಾಡಿಗೆ ತಾಯಿಯ ಸಹಾಯದಿಂದ ಮಗು ಪಡೆಯುವ ಪ್ಲ್ಯಾನ್ ಮಾಡಿಕೊಂಡಿದ್ದರು. ಆಗ ಇಂತಾದೊಂದು ಸುದ್ದಿ ಕೇಳಿಬಂದಾಗ ಬರೀ ಗಾಸಿಪ್ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಅದೇ ಸುದ್ದಿ ನಿಜವಾಗಿದೆ. ಇತ್ತೀಚೆಗೆ ಮೂವರು ಮಕ್ಕಳೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದ ವಿಘ್ನೇಶ್ "ನಾವು ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದೇವೆ. ಭವಿಷ್ಯಕ್ಕಾಗಿ ಅಭ್ಯಾಸ ಮಾಡಬೇಕಲ್ಲವೇ?" ಎಂದು ಬರೆದುಕೊಂಡಿದ್ದರು. ಆಗಲೇ ಕೆಲವರಿಗೆ ಅನುಮಾನ ಮೂಡಿತ್ತು.

More from Filmibeat

English summary
Nayanthara And Vignesh Shivan Are Getting Trolled After Becoming Parents. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X