For Quick Alerts
  ALLOW NOTIFICATIONS  
  For Daily Alerts

  ಅಧಿಕೃತವಾಗಿ ಮದುವೆಯಾದ ನಯನತಾರಾ: ವಿವಾಹಕ್ಕೆ ಬಂದ ವಿಜಯ್ ವಿಡಿಯೋ ವೈರಲ್!

  |

  ಕಾಲಿವುಡ್‌ನ ಸೂಪರ್‌ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇಂದು (9 ಜೂನ್) ಅಧಿಕೃತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಶೆರಾಟನ್ ಪಾರ್ಕ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ವಿವಾಹ ಜರುಗಿದೆ.

  ದಕ್ಷಿಣದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ವಿವಾಹಕ್ಕೆ ಸಿನಿಮಾ ಕ್ಷೇತ್ರದ ಗಣ್ಯರು ಭಾಗವಹಿಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್, ಶಾರುಖ್ ಖಾನ್, ಕಾರ್ತಿ, ಶರತ್ ಕುಮಾರ್, ಬೋನಿ ಕಪೂರ್ ಸೇರಿದಂತೆ ಹಲವು ಗಣ್ಯರು ಹಾಜರಿ ಹಾಕಿದ್ದಾರೆ.

  ನಯನತಾರಾ-ವಿಘ್ನೇಶ್ ಮದುವೆ ದಿನಾಂಕ ನಿಗದಿ, ಸ್ಥಳ ಬದಲಾವಣೆನಯನತಾರಾ-ವಿಘ್ನೇಶ್ ಮದುವೆ ದಿನಾಂಕ ನಿಗದಿ, ಸ್ಥಳ ಬದಲಾವಣೆ

  ಇದೇ ವೇಳೆ ನಯನತಾರಾ ವಿವಾಹ ಸಮಾರಂಭಕ್ಕೆ ದಳಪತಿ ವಿಜಯ್ ಕೂಡ ಆಗಮಿಸಿದ್ದಾರೆ. ಕಾಲಿವುಡ್‌ನ ಸೂಪರ್ ಜೋಡಿಯ ಮದುವೆಯ ಒಂದೇ ಒಂದು ಫೋಟೊ ಕೂಡ ಇದೂವರೆಗೂ ಲೀಕ್ ಆಗಿರಲಿಲ್ಲ. ಅದ್ಹೇಗೋ ನಟ ದಳಪತಿ ವಿಜಯ್ ಭಾಗವಹಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ.

  ನಯನತಾರಾಗೆ ಢುಂ ಢುಂ ಢುಂ

  ನಯನತಾರಾಗೆ ಢುಂ ಢುಂ ಢುಂ

  ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಅಂತಲೇ ಜನಪ್ರಿಯರಾಗಿರುವ ನಯನತಾರಾ ಮದುವೆ ಬಗ್ಗೆ ಹಲವು ದಿನಗಳಿಂದ ಚರ್ಚೆಯಲ್ಲಿತ್ತು. ಅದೆಷ್ಟೋ ಭಾರಿ ನಯನತಾರಾ ಮದುವೆ ಆಗೇ ಬಿಟ್ಟಿದೆ ಅನ್ನುವಷ್ಟು ಚರ್ಚೆಗಳು ನಡೆದಿದ್ದೂ ಇದೆ. ಕೊನೆಗೂ ನಯನ್ ಹಾಗೂ ವಿಘ್ನೇಶ್ ಶಿವನ್ ಮದುವೆ ಇಂದು ( ಜೂನ್ 9) ಅದ್ಧೂರಿಯಾಗಿ ನಡೆದಿದೆ. ಭಾರೀ ಭದ್ರತೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಗಣ್ಯಾತೀಗಣ್ಯರು ಭಾಗವಹಿಸಿದ್ದಾರೆ.

  ನಯನತಾರಾ- ವಿವಾಹಕ್ಕೆ ಆಗಮಿಸುವ ಅತಿಥಿ ಪಟ್ಟಿನಯನತಾರಾ- ವಿವಾಹಕ್ಕೆ ಆಗಮಿಸುವ ಅತಿಥಿ ಪಟ್ಟಿ

  ಗಣ್ಯಾತೀಗಣ್ಯರು ಮದುವೆಯಲ್ಲಿ ಭಾಗಿ

  ಗಣ್ಯಾತೀಗಣ್ಯರು ಮದುವೆಯಲ್ಲಿ ಭಾಗಿ

  ನಯನತಾರಾ ಮದುವೆ ಹೈಲೈಟ್ ಅಂದರೆ ಶಾರುಖ್ ಖಾನ್ ಹಾಗೂ ರಜನಿಕಾಂತ್. ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಹಲವು ಸಿನಿಮಾಗಳಲ್ಲಿ ನಯನತಾರಾ ನಟಿಸಿದ್ದರು. ಈ ಕಾರಣಕ್ಕೆ ರಜನಿ ಆಗಮವನ್ನು ನಿರೀಕ್ಷೆ ಮಾಡಲಾಗಿತ್ತು. ಇದೇ ವೇಳೆ ಬಾಲಿವುಡ್‌ಗೂ ಕಾಲಿಟ್ಟಿರುವ ನಯನತಾರಾ, ಮೊದಲ ಸಿನಿಮಾದಲ್ಲಿಯೇ ಶಾರುಖ್ ಖಾನ್ ಜೊತೆ ಅಭಿನಯಿಸುತ್ತಿದ್ದಾರೆ. ಹೀಗಾಗಿ ಶಾರುಖ್ ಖಾನ್ ಕೂಡ ಬರುತ್ತಾರೆ ಎಂದು ಹೇಳಲಾಗಿತ್ತು. ಅಂತಯೇ ಶಾರುಖ್ ಖಾನ್ 'ಜವಾನ್' ಚಿತ್ರದ ನಿರ್ದೇಶಕ ಅಟ್ಲಿ ಜೊತೆ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಕಾರ್ತಿ, ವಿಜಯ್ ಸೇತುಪತಿ, ಶರತ್ ಕುಮಾರ್ ಸೇರಿದಂತೆ ಹಲವು ಮಂದಿ ಆಗಮಿಸಿದ್ದಾರೆ.

  ನೀಲಿ ಶರ್ಟ್‌ನಲ್ಲಿ ಮಿಂಚಿದ ವಿಜಯ್

  ನೀಲಿ ಶರ್ಟ್‌ನಲ್ಲಿ ಮಿಂಚಿದ ವಿಜಯ್

  ಭಾರೀ ಭದ್ರತೆಯಲ್ಲಿ ನಯನತಾರಾ ಹಾಗೂ ವಿಘ್ನೇಶ್ ವಿವಾಹವಾಗಿದ್ದರೂ, ದಳಪತಿ ವಿಜಯ್ ಬಂದು ಹೋಗಿರುವ ವಿಡಿಯೋ ವೈರಲ್ ಆಗಿದೆ. ಲೇಡಿ ಸೂಪರ್‌ಸ್ಟಾರ್ ಮದುವೆಯಲ್ಲಿ ವಿಜಯ್ ನೀಲಿ ಬಣ್ಣದ ಶರ್ಟ್‌ ಧರಿಸಿ ಮದುವೆಗೆ ಆಗಮಿಸಿದ್ದಾರೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ವಿಜಯ್-ನಯನ್ ಸಿನಿಮಾ ಹಿಟ್

  ವಿಜಯ್-ನಯನ್ ಸಿನಿಮಾ ಹಿಟ್

  ದಕ್ಷಿಣ್ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ದಳಪತಿ ವಿಜಯ್ ಕಾಂಬಿನೇಷನ್ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ವಿಜಯ್ ನಟಿಸಿದ್ದ 'ಶಿವಕಾಶಿ' ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಪ್ರಭುದೇವ ನಿರ್ದೇಶನದ 'ವಿಲ್ಲು' ಸಿನಿಮಾದಲ್ಲಿಯೂ ಇಬ್ಬರೂ ಜೊತೆಯಾಗಿ ನಟಿಸಿದ್ದರು. ವಿಜಯ್ ಜೊತೆ ಕೊನೆಯದಾಗಿ ಅಟ್ಲಿ ನಿರ್ದೇಶಿಸಿದ 'ಬಿಗಿಲ್' ಚಿತ್ರದಲ್ಲಿ ಅಭಿನಯಿಸಿದ್ದರು.

  ಮಧು-ವರಿಗೆ ಶುಭಾಶಯಗಳು

  ಮಧು-ವರಿಗೆ ಶುಭಾಶಯಗಳು

  ದಳಪತಿ ವಿಜಯ್ 66ನೇ ಸಿನಿಮಾದಲ್ಲಿ ಹೈದರಾಬಾದ್‌ನಲ್ಲಿ ಬ್ಯುಸಿಯಾಗಿದ್ದರು. ಹೀಗಿದ್ದರೂ, ನಯನತಾರಾ ಮದುವೆಗೆ ಹಾಜರಾಗಿದ್ದಾರೆ. ನವ ಜೋಡಿಗೆ ಶುಭಾಶಯಗಳನ್ನು ಹೇಳಿ, ನಿರ್ಗಮಿಸಿದ್ದಾರೆ. ಮದುವೆ ಮುಗಿಸಿದ ಬಳಿಕ ವಿಜಯ್ ಮತ್ತೆ ಹೈದರಾಬಾದ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಇಡೀ ಕಾಲಿವುಡ್‌ ಶುಭಾಶಯವನ್ನು ಕೋರಿದೆ.

  English summary
  Nayanthara And Vignesh Shivan Are Officially Married. Shah Rukh Khan, Rajnikanth, Karthi, Vijay Sethupathi Many More Celebrities Attended. Here Is The Marriage Highlights.
  Friday, June 10, 2022, 17:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X