For Quick Alerts
  ALLOW NOTIFICATIONS  
  For Daily Alerts

  ಬಾರ್ಸಿಲೋನಾದ ಬೀದಿಗಳಲ್ಲಿ ಬಾವುಟ ಹಿಡಿದು ನಿಂತ ವಿಕ್ಕಿ- ನಯನತಾರಾ

  |

  ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆ ಕಳೆಕಟ್ಟಿತ್ತು. 'ಹರ್ ಘರ್ ತಿರಂಗಾ' ಅಭಿಯಾನದ ಹಿನ್ನೆಲೆಯಲ್ಲಿ ಈ ಬಾರಿ ದೇಶದ ಬಗ್ಗೆ ಬಹಳ ಜೋರಾಗಿತ್ತು. ದೇಶದ ಅಸಂಖ್ಯಾತ ಮನೆಗಳ ಮೇಲೆ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಸೆಲೆಬ್ರೆಟಿಗಳು ಸಹ ಧ್ವಜ ಬೀಸಿ ಜನತೆಗೆ ಸ್ವಾತಂತ್ರ್ಯ ದಿನೋತ್ಸವದ ಶುಭ ಕೋರಿದ್ದಾರೆ.

  ಬಹುಭಾಷಾ ನಟಿ ನಯನತಾರ ಹಾಗೂ ವಿಘ್ನೇಶ್ ಶಿವನ್ ದಂಪತಿ ಸದ್ಯ ಬಾರ್ಸಿಲೋನಾಗೆ ಪ್ರವಾಸ ಹೋಗಿದ್ದಾರೆ. ಅಲ್ಲಿ ರೊಮ್ಯಾಂಟಿಕ್ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲೇ ದಂಪತಿ ತ್ರಿವರ್ಣ ಧ್ವಜ ಹಿಡಿದು ಸ್ವಾತಂತ್ರ್ಯ ದಿನೋತ್ಸವ ಆಚರಿಸಿದ್ದಾರೆ. ಅಲ್ಲಿನ ಬೀದಿ ಬೀದಿಗಳಲ್ಲಿ ರಾಷ್ಟ್ರ ಧ್ವಜ ಹಿಡಿದು ಸುತ್ತಾಡಿದ್ದಾರೆ. ಅದರ ಫೋಟೊ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ನಟಿ ಮೀನಾ ಪತಿಯ ಸಾವಿಗೆ ಕಾರಣ ಇದೇನೆ: ಇನ್ಯಾರಿಗೂ ಈ ರೀತಿ ಆಗಬಾರದು!ನಟಿ ಮೀನಾ ಪತಿಯ ಸಾವಿಗೆ ಕಾರಣ ಇದೇನೆ: ಇನ್ಯಾರಿಗೂ ಈ ರೀತಿ ಆಗಬಾರದು!

  ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್‌ ತಾರೆಯರೆಲ್ಲಾ ಸ್ವಾತಂತ್ರ್ಯ ದಿನಾಚರಣೆ ಸಡಗರದಲ್ಲಿ ಧ್ವಜ ಹಿಡಿದು ದೇಶಪ್ರೇಮ ಮೆರೆದಿದ್ದರು. ನಯನ್- ವಿಕ್ಕಿ ದಂಪತಿ ವಿದೇಶದಲ್ಲಿ ಸದ್ಯ ನಯನತಾರಾ ಪೋಸ್ಟ್‌ಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವರು ಇದೆಲ್ಲಾ ಪಬ್ಲಿಸಿಟಿ ಗಿಮಿಕ್ ಅಂತ ಟ್ರೋಲ್ ಮಾಡುತ್ತಿದ್ದಾರೆ. ಅಭಿಮಾನಿಗಳು ಮಾತ್ರ ನಯನತಾರ ಬೆಂಬಲಕ್ಕೆ ನಿಂತಿದ್ದಾರೆ.

  ಜೂನ್‌ನಲ್ಲಿ ನಯನ್ - ವಿಕ್ಕಿ ಕಲ್ಯಾಣ

  ಜೂನ್‌ನಲ್ಲಿ ನಯನ್ - ವಿಕ್ಕಿ ಕಲ್ಯಾಣ

  ಜೂನ್ 9ರಂದು ಮಹಾಬಲಿಪುರಂನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ನಟಿ ನಯನತಾರಾ ಕಲ್ಯಾಣೋತ್ಸವ ನೆರವೇರಿತ್ತು. ಹನಿಮೂನ್ ಸಹ ಮುಗಿಸಿ ಬಂದ ಜೋಡಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಈಗ ಮತ್ತೆ ಬಿಡುವು ಮಾಡಿಕೊಂಡು ಸ್ಪೇನ್‌ಗೆ ಪ್ರವಾಸ ಹೋಗಿದ್ದಾರೆ. ಐದಾರು ವರ್ಷಗಳ ವಿಘ್ನೇಶ್ ಹಾಗೂ ನಯನ್ ಮದುವೆ ಕೆಲ ದಿನಗಳ ಹಿಂದಷ್ಟೇ ಮದುವೆ ಮುದ್ರೆ ಬಿದ್ದಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ಕಿಂಗ್ ಖಾನ್ ಶಾರೂಖ್ ಖಾನ್ ಸೇರಿದಂತೆ ಸಾಕಷ್ಟು ಗಣ್ಯರು ಮದುವೆ ಸಮಾರಂಭಕ್ಕೆ ಹಾಜರಾಗಿ ನಟ ಜೋಡಿಗೆ ಶುಭ ಹಾರೈಸಿದ್ದರು.

  ಓಟಿಟಿಯಲ್ಲಿ ಅದ್ಧೂರಿ ಕಲ್ಯಾಣೋತ್ಸವ

  ಓಟಿಟಿಯಲ್ಲಿ ಅದ್ಧೂರಿ ಕಲ್ಯಾಣೋತ್ಸವ

  ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ವೈಭವ ಹೇಗಿತ್ತು ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. 'ನಯನತಾರಾ: ಬಿಯಾಂಡ್ ದಿ ಫೇರ್‌ಟೇಲ್‌' ಹೆಸರಿನಲ್ಲಿ ನೆಟ್‌ಫ್ಲಿಕ್ಸ್‌ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಸುಂದರ ಕ್ಷಣಗಳ ವಿಷ್ಯುವಲ್ಸ್‌ನ ಸ್ಟ್ರೀಮಿಂಗ್ ಮಾಡ್ತಿದೆ. ಅದರ ಸಣ್ಣ ಪ್ರೋಮೊ ಸಹ ರಿಲೀಸ್ ಆಗಿದ್ದು ಸಖತ್ ವೈರಲ್ ಆಗಿದೆ. ಗಂಡ ಹೆಂಡತಿ ಇಬ್ಬರು ಒಬ್ಬರ ಬಗ್ಗೆ ಮಾತನಾಡಿದ್ದಾರೆ. ಭಾರೀ ಮೊತ್ತ ತೆತ್ತು ನೆಟ್‌ಫ್ಲಿಕ್ಸ್ ಹಕ್ಕುಗಳನ್ನು ಖರೀದಿಸಿತ್ತು.

  4 ಭಾಷೆಗಳಲ್ಲಿ ನಟಿಸುತ್ತಿರುವ ನಯನತಾರಾ

  4 ಭಾಷೆಗಳಲ್ಲಿ ನಟಿಸುತ್ತಿರುವ ನಯನತಾರಾ

  ಮಲಯಾಳಂ, ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಶಾರುಖ್ ಖಾನ್ ನಟನಯ 'ಜವಾನ್', ಚಿರಂಜೀವಿ ನಟನೆಯ 'ಗಾಡ್ ಫಾದರ್' ಸೇರಿದಂತೆ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ನಯನ್ ಬಣ್ಣ ಹಚ್ಚಿದ್ದಾರೆ. 'ಕಾತು ವಾಕುಲೆ ರೆಂಡು ಕಾದಲ್' ಸಿನಿಮಾ ನಂತರ ವಿಘ್ನೇಶ್‌ ಶಿವನ್ ಹೊಸ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.

  ನಂಬರ್ 1 ಸ್ಥಾನದಲ್ಲಿ ನಯನ್

  ನಂಬರ್ 1 ಸ್ಥಾನದಲ್ಲಿ ನಯನ್

  ಓರ್ಮ್ಯಾಕ್ಸ್ ಸಮೀಕ್ಷೆಯ ಪ್ರಕಾರ ಜುಲೈ ತಿಂಗಳಿನಲ್ಲಿ ಹೆಚ್ಚು ಜನಪ್ರಿಯ ನಟಿ ಯಾರು ಅನ್ನುವ ಸಮೀಕ್ಷೆಯಲ್ಲಿ ನಯನತಾರಾ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಮದುವೆ ನಂತರ ಕೂಡ ನಯನ್ ಕ್ರೇಜ್ ಕಮ್ಮಿ ಆಗಿಲ್ಲ. ಅದೇ ರೀತಿ ಮದುವೆ ನಂತರ ಕೂಡ ಚೆನ್ನೈ ಚೆಲುವೆ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸಿದಿದ್ದಾರೆ. ಸದ್ಯಕ್ಕೆ ಚಿತ್ರರಂಗ ತೊರೆಯುವ ಮಾತೇಯಿಲ್ಲ. ನಯನ್ ಕ್ರೇಜ್ ಮೀರಿಸೋಕೆ ಸದ್ಯ ಬೇರೆ ನಟಿಯರಿಗೆ ಸಾಧ್ಯವಿಲ್ಲ.

  English summary
  Nayanthara Vignesh Shivan Celebrate Independence Day in Barcelona. Know More.
  Tuesday, August 16, 2022, 13:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X