For Quick Alerts
  ALLOW NOTIFICATIONS  
  For Daily Alerts

  ಕೈ-ಕೈ ಹಿಡಿದು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ನಯನತಾರ-ವಿಘ್ನೇಶ್

  |

  ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ ಅಣ್ಣಾತ್ತೆ ಸಿನಿಮಾ ಸೆಟ್‌ನಲ್ಲಿ ಏಂಟು ಜನರಿಗೆ ಕೊರೊನಾ ವೈರಸ್ ತಗುಲಿದ ನಂತರ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ತಲೈವಾ ಸಿನಿಮಾ ಶೂಟಿಂಗ್ ರದ್ದುಗೊಳ್ಳುತ್ತಿದ್ದಂತೆ ನಯನತಾರಾ ಮತ್ತು ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಕೈ ಕೈ ಹಿಡಿದು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  ಕಪ್ಪು ಬಣ್ಣದ ಟಿ ಶರ್ಟ್, ಬಿಳಿ ಬಣ್ಣ ಪ್ಯಾಂಟ್ ಧರಿಸಿರುವ ನಯನತಾರಾ ಮತ್ತು ಜೀನ್ಸ್ ಮತ್ತು ಟಿ ಶರ್ಟ್ ಧರಿಸಿರುವ ವಿಘ್ನೇಶ್ ಜೋಡಿ ಹೈದರಾಬಾದ್‌ನಲ್ಲಿ ಒಟ್ಟಿಗೆ ಹೆಜ್ಜೆ ಹಾಕುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ...

  ಅಣ್ಣಾತ್ತೆ ಸೆಟ್‌ನಿಂದ ಹಿಂತಿರುಗಿದ ನಯನತಾರಾ

  ಅಣ್ಣಾತ್ತೆ ಸೆಟ್‌ನಿಂದ ಹಿಂತಿರುಗಿದ ನಯನತಾರಾ

  ರಜನಿಕಾಂತ್ ನಟಿಸುತ್ತಿರುವ ಅಣ್ಣಾತ್ತೆ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಡಿಸೆಂಬರ್ 14 ರಿಂದ ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಯನತಾರಾ, ಇಂದು ಶೂಟಿಂಗ್ ರದ್ದುಗೊಂಡ ಹಿನ್ನೆಲೆ ಬಾಯ್‌ ಫ್ರೆಂಡ್ ಜೊತೆ ಚೆನ್ನೈಗೆ ಹಾರಿದ್ದಾರೆ.

  ನಯನತಾರಾ ಹುಟ್ಟುಹಬ್ಬಕ್ಕೆ ಬಾಯ್‌ಫ್ರೆಂಡ್ ವಿಘ್ನೇಶ್ ಬಂದಿಲ್ಲವೇಕೆ?ನಯನತಾರಾ ಹುಟ್ಟುಹಬ್ಬಕ್ಕೆ ಬಾಯ್‌ಫ್ರೆಂಡ್ ವಿಘ್ನೇಶ್ ಬಂದಿಲ್ಲವೇಕೆ?

  ಹೊಸ ಚಿತ್ರ ನಿರ್ದೇಶಿಸುತ್ತಿರುವ ವಿಘ್ನೇಶ್ ಶಿವನ್

  ಹೊಸ ಚಿತ್ರ ನಿರ್ದೇಶಿಸುತ್ತಿರುವ ವಿಘ್ನೇಶ್ ಶಿವನ್

  ಅಂದ್ಹಾಗೆ, ವಿಘ್ನೇಶ್ ಶಿವನ್ ಸಹ ಹೈದರಾಬಾದ್‌ನಲ್ಲಿ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದರು. ವಿಜಯ್ ಸೇತುಪತಿ, ಸಮಂತಾ ಹಾಗೂ ನಯನತಾರಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ವಾರವಷ್ಟೇ ಈ ಸಿನಿಮಾವೂ ಆರಂಭವಾಗಿತ್ತು. ನಯನತಾರಾ ಚೆನ್ನೈಗೆ ಹಿಂತಿರುಗಿದ ಕಾರಣ ವಿಘ್ನೇಶ್ ಶಿವನ್ ಸಹ ಗೆಳತಿ ಜೊತೆ ಹೋಗಿದ್ದಾರೆ.

  ನಯನತಾರಾಗೆ ನೆಗಿಟಿವ್

  ನಯನತಾರಾಗೆ ನೆಗಿಟಿವ್

  ಸದ್ಯದ ಮಾಹಿತಿ ಪ್ರಕಾರ ನಟಿ ನಯನತಾರಾಗೆ ಕೊರೊನಾ ವೈರಸ್ ಆಂಟಿಜನ್ ಪರೀಕ್ಷೆಯಲ್ಲಿ ನೆಗಿಟಿವ್ ಬಂದಿದೆ ಎಂದು ತಿಳಿದಿದೆ. ಮತ್ತೊಂದೆಡೆ ರಜನಿಕಾಂತ್ ಸಹ ಅಣ್ಣಾತ್ತೆ ಸಿನಿಮಾದ ಕೆಲಸಕ್ಕೆ ಬ್ರೇಕ್ ಹಾಕಿ ಚೆನ್ನೈಗೆ ಹಿಂತಿರುಗಿದ್ದಾರೆ. ಸೋಂಕಿಗೆ ಒಳಗಾಗಿರುವ ಏಂಟು ಜನರು ಯಾರು ಎಂದು ಸ್ಪಷ್ಟವಾಗಿಲ್ಲ.

  ಅಣ್ಣಾತ್ತೆ ಸೆಟ್‌ನಲ್ಲಿ 8 ಮಂದಿಗೆ ಕೊರೊನಾ, ತಲೈವಾಗೆ ಹೆಚ್ಚಿದ ಆತಂಕಅಣ್ಣಾತ್ತೆ ಸೆಟ್‌ನಲ್ಲಿ 8 ಮಂದಿಗೆ ಕೊರೊನಾ, ತಲೈವಾಗೆ ಹೆಚ್ಚಿದ ಆತಂಕ

  ಒಟ್ಟಿಗೆ ಕಾಣಿಸಿಕೊಂಡ ಶಿವಣ್ಣ, ಸುದೀಪ್, ಸಿಂಪಲ್ ಸುನಿ | Filmibeat Kannada
  ನಯನತಾರಾ ಸಿನಿಮಾಗಳು

  ನಯನತಾರಾ ಸಿನಿಮಾಗಳು

  ನಯನತಾರ ನಟಿಸಿದ್ದ ಮೂಕುತ್ತಿ ಅಮ್ಮನ್ ಸಿನಿಮಾ ಒಟಿಟಿಯಲ್ಲಿ ತೆರೆಕಂಡಿತ್ತು. ಮಲಯಾಳಂನಲ್ಲಿ ನಯನತಾರಾ ಅಭಿನಯಿಸಿರುವ ನಿಜಾಲ್ ಚಿತ್ರೀಕರಣ ಮುಗಿದಿದೆ. ವಿಘ್ನೇಶ್ ಶಿವನ್ ನಿರ್ಮಾಣದ ನೆಟ್ರಿಕಣ್ ಸಿನಿಮಾ ಶೂಟಿಂಗ್ ನಡೆದಿದೆ. ರಜನಿ ಜೊತೆ ಅಣ್ಣಾತ್ತೆ ಸಿನಿಮಾ ಮಾಡ್ತಿದ್ದಾರೆ. ಜೊತೆಗೆ ವಿಘ್ನೇಶ್ ನಿರ್ದೇಶನದ ಹೊಸ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.

  English summary
  Love birds Nayanthara and Vignesh Shivan hold hands at Hyderabad airport and they fly back to Chennai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X