ನಯನತಾರ, ವಿಗ್ನೇಶ್ ಮದುವೆ: ಎಲ್ಲಿ, ಯಾವಾಗ? ಅತಿಥಿಗಳ ಪಟ್ಟಿ ಇಲ್ಲಿದೆ!
ಸೌತ್ ಸಿನಿಮಾರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ, ನಿರ್ಮಾಪಕ ವಿಗ್ನೇಶ್ ಶಿವನ್ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇವರು ಪ್ರೀತಿಯಲ್ಲಿ ಇರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಈ ಜೋಡಿ ಸದಾ ತಮ್ಮ ಪ್ರೀತಿಯನ್ನು 2016ರಲ್ಲಿ ಖಚಿತ ಪಡಿಸಿದೆ. ಜೊತೆ ಜೊತೆಯಾಗಿ ಕಾಣಿಸಿಕೊಂಡಿದೆ. ಈ ಇಬ್ಬರು ಸದ್ಯ ಸೌತ್‌ನ ನೆಚ್ಚಿನ ಜೋಡಿ ಎನಿಸಿಕೊಂಡಿದ್ದಾರೆ.
ಹಲವು ದಿನಗಳಿಂದ ಈ ಜೋಡಿಯ ಮದುವೆ ಸುದ್ದಿಯನ್ನು ಕೇಳಲು ಅಭಿಮಾನಿಗಳು ಕಾಯುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಆಗಾಗ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿತ್ತು. ಆದರೆ ಮದುವೆ ಬಗ್ಗೆ ಅಧಿಕೃತವಾಗಿ ಇಷ್ಟು ದಿನ ಎಲ್ಲೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಆದರೆ ಈಗ ಮದುವೆ ಸುದ್ದಿ ಬಹಿರಂಗವಾಗಿದ್ದು, ಇವರ ಮದುವೆಗೆ ಕ್ಷಣಗಣನೆ ಶುರುವಾಗಿದೆ.
ಹೌದು, ನಟಿ ನಯನತಾರ ಮತ್ತು ವಿಗ್ನೇಶ್ ಮದುವೆ ಆಗುವುದು ಪಕ್ಕಾ ಆಗಿದೆ. ಈ ಜೋಡಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಇವರ ಮದುವೆ ಎಲ್ಲಿ? ಹೇಗೆ ನಡೆಯಲಿದೆ ಮತ್ತು ಯಾವೆಲ್ಲಾ ಅತಿಥಿಗಳು ಭಾಗಿ ಆಗಲಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ.

ಜೂನ್ 09 ನಯನತಾರ, ವಿಗ್ನೇಶ್ ಮದುವೆ!
ನಯನತಾರಾ ಮತ್ತು ವಿಗ್ನೇಶ್ ಶಿವನ್ ಮದುವೆ ಹೊಸ ದಿನಾಂಕದ ನಿಗದಿ ಆಗಿದೆ. ಅದು ಹೆಚ್ಚು ದಿನ ದೂರ ಇಲ್ಲ. ನಾಳೆ (ಜೂನ್ 9) ಈ ಜೋಡಿಯ ಮದುವೆ ನೆರವೇರಲಿದೆ. ಈ ಹಿಂದೆ ಹರಿದಾಡಿದ್ದ ಹಲವು ದಿನಾಂಕಗಳು ಕೇವಲ ಗಾಳಿ ಸುದ್ಧಿಯಾಗಿ ಮಾತ್ರ ಉಳಿದು ಕೊಂಡಿದೆ. ಜೂನ್ 9, 2022 ಈ ಜೋಡಿ ಮದುವೆ ಆಗಲಿದೆ. ಈಗಾಗಲೇ ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಮಹಾಬಲಿ ಪುರಂನಲ್ಲಿ ನಯನತಾರ ಮದುವೆ!
ಇನ್ನು ನಯನತಾರ ಮತ್ತು ವಿಗ್ನೇಶ್ ಎಲ್ಲಿ ಮದುವೆ ಆಗುತ್ತಾರೆ ಎನ್ನುವ ಗೊಂದಲವಿತ್ತು. ಇದೇ ವಿಚಾರವಾಗಿ ಹಲವು ದಿನಗಳಿಂದ, ಹಲವು ಸ್ಥಳಗಳ ಹೆಸರು ಕೇಳಿ ಬಂದಿತ್ತು. ಜೊತೆಗೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿವಾಹವಾಗಲು ಈ ಜೋಡಿ ನಿರ್ಧರಿಸಿದೆ ಎನ್ನಲಾಗುತ್ತಿತ್ತು. ಆದರೆ ಈಗ ಮತ್ತೆ ಮದುವೆ ವೆನ್ಯೂ ಬದಲಾಗಿದ್ದು, ಮಹಾಬಲಿಪುರಂನಲ್ಲಿ ನಯನತಾರ ಮತ್ತು ವಿಗ್ನೇಶ್ ಸಪ್ತಪದಿ ತುಳಿಯಲಿದ್ದಾರೆ.

ನಯನತಾರ ಮದುವೆಯಲ್ಲಿ ಗಣ್ಯಾತಿಗಣ್ಯರು!
ನಯನತಾರ ಮತ್ತು ವಿಗ್ನೇಶ್ ಇಬ್ಬರೂ ಕೂಡ ಸಿನಿಮಾರಂಗದಲ್ಲಿ ದೊಡ್ಡ ಹೆಸರು ಮಾಡಿದವರೆ, ಹಾಗಾಗಿ ಇವರ ಮದುವೆಯಲ್ಲಿ ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾಗಿ ಆಗಲಿದ್ದಾರೆ. ಸದ್ಯದ ಮಾಹಿತಿಯಂತೆ ನಟ ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ಸೂರ್ಯ, ಅಜಿತ್, ಕಾರ್ತಿ, ವಿಜಯ್ ಸೇತುಪತಿ, ಸಮಂತಾ ಭಾಗಿ ಆಗಲಿದ್ದಾರೆ. ಇನ್ನು ಹಲವು ಗಣ್ಯರಿಗೆ ಮದುವೆ ಆಹ್ವಾನ ತಲುಪಿದೆ.

ಒಟಿಟಿಯಲ್ಲಿ ನಯನತಾರ ಮದುವೆ ವಿಡಿಯೋ?
ಸಿನಿಮಾ ತಾರೆಯರ ಮದುವೆ ಎಂದಮೇಲೆ ಹೆಚ್ಚಿನ ಬೇಡಿಕೆ ಇರತ್ತದೆ. ಇವರ ಮದುವೆ ಫೋಟೊ ಮತ್ತು ವಿಡಿಯೋವನ್ನು ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಆದರೆ ವಿಗ್ನೇಶ್, ನಯನತಾರ ಮದುವೆ ಮಾತ್ರ ಒಟಿಟಿಗೆ ಸೇಲ್ ಆಗಿದೆ. ನೆಕ್‌ಫ್ಲಿಕ್ಸ್‌ನಲ್ಲಿ ಇವರ ಮದುವೆ ಪ್ರಸಾರ ಆಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಇನ್ನು ಇವರ ಮದುವೆಗೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಜೂನ್ 11ರಂದು ಈ ಜೋಡಿ ತಮ್ಮ ಮದುವೆ ಫೋಟೊವನ್ನು ಹಂಚಿಕೊಳ್ಳಲಿದೆ. ಅಲ್ಲಿಯ ತನಕ ಅಭಿಮಾನಿಗಳು ಕಾಯಲೇಬೇಕು.


Click it and Unblock the Notifications











