ನಯನತಾರಾ, ವಿಗ್ನೇಶ್ ಮದುವೆ: ಅತಿಥಿಗಳಿಗೆ ಶರತ್ತು, ಡ್ರೆಸ್ ಕೋಡ್ ಫಿಕ್ಸ್?

ಹಲವು ದಿನಗಳಿಂದ ನಯನತಾರ ಮತ್ತು ವಿಗ್ನೇಶ್ ಜೋಡಿಯ ಮದುವೆ ಸುದ್ದಿ ಹರಿದಾಡುತ್ತಲೇ ಇದೆ. 2015ರಿಂದ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿರುವ ಈ ಜೋಡಿ ಈಗ ಮದುವೆ ಎಂಬ ಬಂಧನಕ್ಕೆ ಒಳಗಾಗಲೂ ಸಜ್ಜಾಗಿದೆ. ಸದ್ಯ ಸೌತ್‌ನಲ್ಲಿ ಇವರ ಮದುವೆ ಸುದ್ದು ಜೋರಾಗಿದೆ.

ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ, ನಿರ್ಮಾಪಕ ವಿಗ್ನೇಶ್ ಶಿವನ್ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಇವರು ಪ್ರೀತಿಯಲ್ಲಿ ಬಿದ್ದಿದ್ದ ವಿಚಾರ ಗುಟ್ಟಾಗಿ ಉಳಿದಿಲ್ಲ. ಸದ್ಯ ಮದುವೆ ತಯಾರಿ ಜೋರಾಗಿದ್ದು, ಒಂದೊಂದೇ ಸುದ್ದಿಗಳು ಹೊರ ಬರುತ್ತಿವೆ.

ನಯನತಾರಾ, ವಿಗ್ನೇಶ್ ಮದುವೆ ಯಾವಾಗ? ಎಲ್ಲಿ? ಎನ್ನುವ ಬಗ್ಗೆ ಒಂದಷ್ಟು ವಿಚಾರಗಳು ಈಗಾಗಲೇ ಹೊರ ಬಂದಿವೆ. ಇದರ ಜೊತೆಗೀಗ ಇವರ ಮದುವೆಯಲ್ಲಿ ಅತಿಥಿಗಳಿಗೆ ಒಂದಷ್ಟು ಶರತ್ತುಗಳನ್ನು ವಿಧಿಸಲಾಗಿದೆಯಂತೆ. ಆ ಶರತ್ತುಗಳೇನು ಮತ್ತು ಇವರ ಮದುವೆಯ ಡ್ರೆಸ್ ಕೋಡ್ ಏನು? ಎನ್ನುವುದನ್ನು ಮುಂದೆ ಓದಿ...

ನಯನತಾರಾ, ವಿಗ್ನೇಶ್‌ಗೆ ಮದುವೆ ಸಂಭ್ರಮ!

ನಯನತಾರಾ, ವಿಗ್ನೇಶ್‌ಗೆ ಮದುವೆ ಸಂಭ್ರಮ!

ನಯನತಾರಾ ಮತ್ತು ವಿಗ್ನೇಶ್ ಶಿವನ್ ಮದುವೆ ನಾಳೆ (ಜೂನ್ 9) ನೆರವೇರಲಿದೆ. ಮಹಾಬಲಿ ಪುರಂನಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ. ಇಷ್ಟು ದಿನ ಇವರ ಮದುವೆ ಬಗ್ಗೆ ಇದ್ದ ಎಲ್ಲಾ ಕುತೂಹಲಗಳಿಗೂ ಈಗ ತೆರೆ ಬಿದ್ದಿದ್ದು, ಜೂನ್ 9ರಿಂದ ಈ ಜೋಡಿ ಸತಿ ಪತಿಯಾಗಲಿದ್ದಾರೆ. ಈ ಅದ್ಧೂರಿ ಮದುವೆಗೆ ನಿಯಮಿತ ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿದೆ.

ಅತಿಥಿಗಳಿಗೆ ಹಲವು ಶರತ್ತು!

ಅತಿಥಿಗಳಿಗೆ ಹಲವು ಶರತ್ತು!

ದೊಡ್ಡ, ದೊಡ್ಡ ಸಿನಿಮಾ ತಾರೆಯರು ಮದುವೆ ಆದರೆ, ತಮ್ಮ ಮದುವೆಯನ್ನು ಆದಷ್ಟು ಸೀಮಿತವಾಗಿ ಮಾಡಿಕೊಳ್ಳಲು ಇಚ್ಛಿಸುತ್ತಾರೆ. ಮದುವೆ ಅದ್ಧೂರಿಯಾದರೂ, ಹೆಚ್ಚು ಜನರಿಗೆ ಆಹ್ವಾನ ಇರುವುದಿಲ್ಲ. ಮಾಧ್ಯಮಗಳ ಎಂಟ್ರಿಗೆ ನಿಷೇಧ ಹೇರಲಾಗುತ್ತದೆ. ಅಂತೆಯೇ ಈಗ ನಯನತಾರಾ ಮತ್ತು ವಿಗ್ನೇಶ್ ಮದುವೆಯಲ್ಲಿ ಮಾಧ್ಯಮಗಳನ್ನುನಿಷೇಧಿಸಲಾಗಿದೆ. ಹಾಗಾಗಿ ಇವರ ಮದುವೆಗೆ ಬರುವ ಅತಿಥಿಗಳು ಫೋಟೊ ತೆಗೆಯದಂತೆ ಶರತ್ತು ವಿಧಿಸಲಾಗಿದೆ.

ಮದುವೆಗೆ ಡ್ರೆಸ್ ಕೋಡ್ ನಿಗದಿ!

ಮದುವೆಗೆ ಡ್ರೆಸ್ ಕೋಡ್ ನಿಗದಿ!

ನಯನತಾರಾ, ವಿಗ್ನೇಶ್ ಮದುವೆಗೆ ಸಾಕಷ್ಟು ಯೋಜನೆಗಳನ್ನು ಒಳಗೊಂಡಿದೆ. ಮೊದಲೇ ಎಲ್ಲವನ್ನೂ ಪ್ಲ್ಯಾನ್ ಮಾಡಲಾಗಿದೆ. ಹಾಗಾಗಿ ಇವರ ಮದುವೆಗೆ ಡ್ರೆಸ್ ಕೋಡ್ ನಿಗಧಿ ಮಾಡಲಾಗಿದೆ. ಪೇಸ್ಟಲ್ ಡ್ರೆಸ್‌ ಕೋಡನ್ನು ವಿಧಿಸಲಾಗಿದೆ. ಮದುವೆಗೆ ಬರುವ ಅತಿಥಿಗಳು ಪೇಸ್ಟಲ್ ಡ್ರೆಸ್‌ಗಳನ್ನು ಧರಿಸಬೇಕು. ಇದು ವಧು, ವರನ ಮದುವೆ ಉಡುಪಿಗೆ ತಕ್ಕ ಹಾಗೆ ಪ್ಲ್ಯಾನ್ ಮಾಡಲಾಗಿದೆಯಂತೆ.

ಮದುವೆ ಪತ್ರಿಕೆ ವೈರಲ್!

ಮದುವೆ ಪತ್ರಿಕೆ ವೈರಲ್!

ನಯನತಾರ ಮತ್ತು ವಿಗ್ನೇಶ್ ಮದುವೆಯ ಆಮಂತ್ರಣ ಪತ್ರಿಗೆ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ರಿಯಲ್ಲಿ ನಮೂದಿಸಿರುವ ಪ್ರಕಾರ. ಜೂನ್ 9 ರಂದು, ರಾತ್ರಿ 8.10ಕ್ಕೆ, ಮಹಾಬಲಿ ಪುರಂನಲ್ಲಿ ನಯನತಾರ ಮತ್ತು ವಿಗ್ನೇಶ್ ಮದುವೆ ನೆರವೇರಲಿದೆ. ಇನ್ನು ಈ ಜೋಡಿ ವಧು, ವರನಾಗಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.

More from Filmibeat

English summary
Nayanthara And Vignesh Shivan Wedding: One Condition On Dress Code For Guest, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X