'ವಿವಾದ'ದ ನಂತರ ಅವಳಿ ಮಕ್ಕಳ ಜೊತೆ ಕಾಣಿಸಿಕೊಂಡ ಲೇಡಿ ಸೂಪರ್ ಸ್ಟಾರ್
ನಯನತಾರಾ ಸೌತ್ ಸಿನಿ ಇಂಡಸ್ಟ್ರಿಯ ಟಾಪ್ ಮತ್ತು ಬ್ಯುಸಿಯಸ್ಟ್ ನಟಿ . ಅಲ್ಲದೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಹೌದು. ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಸಪ್ತಪದಿ ತುಳಿದು, ನಮ್ಮ ಸಂಸಾರ ಆನಂದ ಸಾಗರವೆನ್ನುತ್ತಾ ಸಿನಿಮಾ ಎಂಬ ಸಮುದ್ರದಲ್ಲಿಯೂ ಏಕಕಾಲಕ್ಕೆ ಈಜುತ್ತಿರುವ ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ ವಿವಾದಗಳಿಂದ ಮುಕ್ತಿ ಪಡೆದು ಈಗ ತಮ್ಮ ಗಂಡ ಹಾಗೂ ಮಕ್ಕಳ ಜೊತೆ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದಾರೆ. ತಮ್ಮನ್ನ ಇಷ್ಟ ಪಡುವ ಹಾಗೂ ಆರಾಧಿಸುವ ಅಭಿಮಾನಿಗಳಿಗಾಗಿ ತಮ್ಮ ಫ್ಯಾಮಿಲಿ ಟೈಮ್ ನ ಅಮೂಲ್ಯ ಕ್ಷಣಗಳನ್ನ ಹಂಚಿಕೊಂಡಿದ್ದಾರೆ
ಇತ್ತೀಚಿಗಷ್ಟೇ ವಿವಾದಕ್ಕೀಡಾಗಿದ್ದ ಲೇಡಿ ಸೂಪರ್ ಸ್ಟಾರ್
ಅನ್ನಪೂರ್ಣಿ ಸಿನಿಮಾದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಹಿನ್ನೆಲೆಯಲ್ಲಿ, ನಯನತಾರಾ ವಿರುದ್ಧ ಆಕ್ರೋಶದ ಅಲೆ ಎದ್ದಿತ್ತು. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಾಯಕಿ, ನಮಾಜ್ ಮಾಡಿ, ನಾನ್‌ವೆಜ್ ಅಡುಗೆ ಮಾಡುವುದನ್ನು ಖಂಡಿಸಿದ್ದ ಅನೇಕರು, ಶ್ರೀರಾಮನು ಪ್ರಾಣಿ ಬೇಟೆಯಾಡಿ, ಅದರ ಮಾಂಸವನ್ನು ಸೇವನೆ ಮಾಡುತ್ತಿದ್ದನು ಎಂದು ಮುಸ್ಲಿಂ ಸಮುದಾಯದ ನಾಯಕ ನಾಯಕಿಗೆ ಹೇಳುವ ದೃಶ್ಯವನ್ನ ವಿರೋಧಿಸಿದ್ದರು ಚಿತ್ರ ಲವ್ ಜಿಹಾದ್ ನ ಪ್ರೋತ್ಸಾಹಿಸುವಂತಿದೆ ಎಂದು ಕೆಂಡ ಕಾರಿದ್ದರು. ಆ ನಂತರ ಚಿತ್ರವನ್ನ ಒಟಿಟಿಯಿಂದ ತೆಗೆದು ಹಾಕಲಾಗಿತ್ತು.

ಬಹಿರಂಗ ಪತ್ರ ಬರೆದು ಕ್ಷಮೆ ಕೇಳಿದ್ದ ನಯನತಾರಾ
ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ನಾನಾಗಲಿ, ನನ್ನ ತಂಡವಾಗಲಿ, ಯಾರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದಿದ್ದ ನಯನತಾರಾ, ದೇವರನ್ನು ಸಂಪೂರ್ಣವಾಗಿ ನಂಬುವ ಮತ್ತು ಆಗಾಗ್ಗೆ ದೇಶಾದ್ಯಂತ ಇರುವ ದೇವಾಲಯಗಳಿಗೆ ಭೇಟಿ ನೀಡುವವಳು ನಾನು. ಯಾರ ಭಾವನೆಗಳಿಗೆ ನೋವಾಗಿದೆಯೋ, ಅವರಿಗೆ ಪ್ರಾಮಾಣಿಕವಾಗಿ ಮತ್ತು ಹೃತ್ಪೂರ್ವಕವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದರು

ನಯನತಾರಾ - ವಿಘ್ನೇಶ್ ಮದುವೆಗೆ 02 ವರ್ಷ
ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಜೂನ್ 9-2022ರಂದು ಬೆಳಗ್ಗೆ 8:30ಕ್ಕೆ ಮಹಾಬಲಿಪುರಂನಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆಯಾಗಿದ್ದರು. ಮದುವೆಯಾದ 4 ತಿಂಗಳ ನಂತರ 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಪೋಷಕರಾದರು.
ನಾನುಂ ರೌಡಿ ದಾನ್' ಚಿತ್ರಕ್ಕೆ ವಿಘ್ನೇಶ್ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರ 2015ರಲ್ಲಿ ತೆರೆಗೆ ಬಂತು. ವಿಜಯ್ ಸೇತುಪತಿ ಹಾಗೂ ನಯನತಾರಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಸೆಟ್ನಲ್ಲಿ ನಯನತಾರಾ ಹಾಗೂ ವಿಘ್ನೇಶ್ ನಡುವೆ ಪ್ರೀತಿ ಮೊಳಕೆಯೊಡೆಯಿತು. ಅನೇಕ ಕಡೆಗಳಲ್ಲಿ ಇಬ್ಬರೂ ಸುತ್ತಾಟ ನಡೆಸಿದರು. ಆ ಬಳಿಕ ಪ್ರೀತಿ ವಿಚಾರವನ್ನು ಖಚಿತಪಡಿಸಿದ್ದರು


Click it and Unblock the Notifications











