For Quick Alerts
  ALLOW NOTIFICATIONS  
  For Daily Alerts

  ಈ ಸುದ್ದಿ ಹರಡಿಸಿದ ನೀವೆಲ್ಲ ಜೋಕರ್ಸ್ ಎಂದ ನಯನತಾರಾ!

  By Avani Malnad
  |

  ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇಬ್ಬರೂ ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆಯಾಗಲಿದ್ದಾರೆ ಎಂಬ ವದಂತಿಯೂ ಇದೆ. ಇಬ್ಬರೂ ತಮ್ಮ ಪ್ರೀತಿಯ ವಿಚಾರವನ್ನೇನೂ ಮುಚ್ಚಿಟ್ಟವರಲ್ಲ. ಆದರೆ ವಿಷಯ ಅದಲ್ಲ. ನಯನತಾರ ಮತ್ತು ಅವರ ಗೆಳೆಯ ವಿಘ್ನೇಶ್ ಶಿವನ್ ಇಬ್ಬರಿಗೂ ಕೊರೊನಾ ವೈರಸ್ ಬಂದಿದೆ ಎಂಬ ವರದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸುಶಾಂತ್ ತನ್ನ ಹೊಟ್ಟೆಯಲ್ಲಿ ಮತ್ತೊಮ್ಮೆ ಹುಟ್ಟಿ ಬರ್ತಾನೆ ಎಂದ ಬಾಲಿವುಡ್ ನಟಿ | Raakhi Sawanth | Sushanth Singh

  ಚೆನ್ನೈನಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಈ ನಡುವೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇಬ್ಬರಿಗೂ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ ಎಂಬ ಸುದ್ದಿ ಅವರ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆಯೇ ಮೀಮ್ಗಳು ಹರಿದಾಡುತ್ತಿದ್ದವು. ಈ ಸುದ್ದಿಗಳನ್ನು ಕಂಡು ನಯನತಾರಾ ಅವರಿಗೆ ನಗು ಬಂದಿದೆಯಂತೆ. ನಾನು ಆರಾಮಾಗಿ ಇದ್ದೇನೆ ಎಂದು ಅವರು ಅಭಿಮಾನಿಗಳಿಗೆ ಸಮಾಧಾನದ ಸಂಗತಿ ತಿಳಿಸಿದ್ದಾರೆ. ಮುಂದೆ ಓದಿ...

  ನಟಿ ನಯನತಾರಾ ಮತ್ತು ಬಾಯ್‌ಫ್ರೆಂಡ್‌ಗೆ ಕೊರೊನಾ?ನಟಿ ನಯನತಾರಾ ಮತ್ತು ಬಾಯ್‌ಫ್ರೆಂಡ್‌ಗೆ ಕೊರೊನಾ?

  ನಾವು ಬದುಕಿದ್ದೇವೆ

  ನಾವು ಬದುಕಿದ್ದೇವೆ

  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ನಯನತಾರಾ ತಮಾಷೆಯಾಗಿ ಸ್ವೀಕರಿಸಿದ್ದಾರೆ. 'ಹಾಯ್, ನಾವು ಬದುಕಿದ್ದೇವೆ, ಆರೋಗ್ಯವಂತರಾಗಿದ್ದೇವೆ ಮತ್ತು ಖುಷಿಯಾಗಿದ್ದೇವೆ' ಎಂದು ನಯನತಾರಾ ತಿಳಿಸಿದ್ದಾರೆ.

  ನಾವು ಆರೋಗ್ಯದಿಂದ ಇದ್ದೇವೆ

  ನಾವು ಆರೋಗ್ಯದಿಂದ ಇದ್ದೇವೆ

  ಇನ್‌ಸ್ಟಾಗ್ರಾಂನಲ್ಲಿ ಮಕ್ಕಳಿಬ್ಬರು ಮ್ಯೂಸಿಕ್‌ಗೆ ಖುಷಿಯಿಂದ ಕುಣಿದಾಡುವ ವಿಡಿಯೋ ಹಾಕಿರುವ ನಯನತಾರಾ, ತಾವು ಸಂತೋಷದಿಂದ ಇದ್ದೇವೆ ಎಂಬ ಮಾಹಿತಿ ನೀಡಿದ್ದಾರೆ. ಅವರ ಅಧಿಕೃತ ವಕ್ತಾರ ಕೂಡ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

  ನಟಿ ನಯನತಾರಾ ಮದುವೆ ಬಗ್ಗೆ ಬಂತು ಹೊಸ ಸುದ್ದಿನಟಿ ನಯನತಾರಾ ಮದುವೆ ಬಗ್ಗೆ ಬಂತು ಹೊಸ ಸುದ್ದಿ

  ದೇವರು ಶಕ್ತಿ ನೀಡಿದ್ದಾನೆ

  ದೇವರು ಶಕ್ತಿ ನೀಡಿದ್ದಾನೆ

  'ನೀವೆಲ್ಲ ಜೋಕರ್‌ಗಳನ್ನು ಹಾಗೂ ನಿಮ್ಮ ಬಾಲಿಶ ಜೋಕ್‌ಗಳ ಕಲ್ಪನೆಗಳನ್ನು ನೋಡಲು ದೇವರು ನಮಗೆ ಸಾಕಷ್ಟು ಬಲ ಹಾಗೂ ಸಂತೋಷ ನೀಡಿದ್ದಾನೆ' ಎಂದು ನಯನತಾರಾ, ಈ ರೀತಿ ಸುದ್ದಿ ಹರಿಬಿಟ್ಟವರನ್ನು ವ್ಯಂಗ್ಯವಾಡಿದ್ದಾರೆ.

  ನೀವೆಲ್ಲ ನಮ್ಮ ಹಿತೈಷಿಗಳು!

  ನೀವೆಲ್ಲ ನಮ್ಮ ಹಿತೈಷಿಗಳು!

  'ನಾವು ಈ ಸುದ್ದಿಯನ್ನು ಹೀಗೆ ನೋಡುತ್ತಿದ್ದೇವೆ. ಕೊರೊನಾ ಮತ್ತು ಎಲ್ಲ ಪತ್ರಿಕೆ ಹಾಗೂ ಸಾಮಾಜಿಕ ಮಾಧ್ಯಮದ ಸ್ವೀಟ್ ಹಾರ್ಟ್‌ಗಳ ಕಲ್ಪನೆ. ನಮ್ಮ ಹಿತೈಷಿಗಳು. ನಾವು ಸಂತಸದಿಂದ ಇದ್ದೇವೆ' ಎಂದು ವಿಘ್ನೇಶ್ ಶಿವನ್ ಕೂಡ ನಯನತಾರಾ ಹಾಕಿರುವ ವಿಡಿಯೋವನ್ನೇ ಪೋಸ್ಟ್ ಮಾಡಿದ್ದಾರೆ. ನಂತರ ಇಬ್ಬರೂ ರೊಮ್ಯಾಂಟಿಕ್ ಫೋಟೊವೊಂದನ್ನು ಶೇರ್ ಮಾಡಿದ್ದಾರೆ.

  ಇವಳೇ ನನ್ನ ಮುಂದಿನ ಮಕ್ಕಳ ತಾಯಿ: ಖ್ಯಾತ ನಟಿಯ ಫೋಟೊ ಹಾಕಿದ ನಿರ್ದೇಶಕ!ಇವಳೇ ನನ್ನ ಮುಂದಿನ ಮಕ್ಕಳ ತಾಯಿ: ಖ್ಯಾತ ನಟಿಯ ಫೋಟೊ ಹಾಕಿದ ನಿರ್ದೇಶಕ!

  English summary
  Nayanthara and Vignesh Sivan made clarification for coronavirus rumours and called social media and press as jokers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X