For Quick Alerts
  ALLOW NOTIFICATIONS  
  For Daily Alerts

  ಹಿಂದೂ ಧರ್ಮಕ್ಕೆ ಮತಾಂತರ: ಸರೋಗಸಿ ವಿವಾದ: ನಯನತಾರ ಬದುಕೇ ಇಂಟ್ರೆಸ್ಟಿಂಗ್!

  |

  ಲೇಡಿ ಸೂಪರ್ ಸ್ಟಾರ್ ನಯನತಾರಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಿನಿಮಾಗಳು ಮಾತ್ರವಲ್ಲದೇ ವೈಯಕ್ತಿಕ ವಿಚಾರಗಳಿಂದಲೂ ಸಾಕಷ್ಟು ಈ ಕೇರಳ ಕುಟ್ಟಿ ಸಾಕಷ್ಟು ಸದ್ದು ಮಾಡಿದ್ದಾರೆ. ಚಿತ್ರರಂಗಕ್ಕೆ ಬಂದು 19 ವರ್ಷ ಕಳೆದರೂ ಇವತ್ತಿಗೂ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ.

  2003ರಲ್ಲಿ ಮಲಯಾಳಂನ 'ಮನಸ್ಸಿನಕ್ಕರೆ' ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟ ಚೆಲುವೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ತೆಲುಗು, ತಮಿಳಿನ ಸೂಪರ್ ಸ್ಟಾರ್‌ಗಳಿಗೆ ಜೋಡಿಯಾಗಿ ಮಿಂಚಿದ್ದಾರೆ. ಕನ್ನಡದಲ್ಲಿ ಉಪೇಂದ್ರ ಜೊತೆ 'ಸೂಪರ್' ಸಿನಿಮಾದಲ್ಲಿ ನಟಿಸಿ ಗೆದ್ದರು. ಬಹಳ ಹಿಂದೆಯೇ ನಯನತಾರ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಡಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿತ್ತು. ಇದೀಗ ಶಾರುಕ್ ಖಾನ್ ಜೋಡಿಯಾಗಿ 'ಜವಾನ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

  ವಿಕ್ಕಿ- ನಯನ್ ಸರೋಗಸಿ ವಿವಾದ ಸುಖಾಂತ್ಯ: ವರದಿಯಲ್ಲಿದೆ ಆಸಕ್ತಿಕರ ಅಂಶಗಳು!ವಿಕ್ಕಿ- ನಯನ್ ಸರೋಗಸಿ ವಿವಾದ ಸುಖಾಂತ್ಯ: ವರದಿಯಲ್ಲಿದೆ ಆಸಕ್ತಿಕರ ಅಂಶಗಳು!

  ಕೆಲವೇ ತಿಂಗಳ ಹಿಂದೆ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಸೆಮಣೆ ಏರಿದ ನಯನತಾರ ಮದುವೆ ನಂತರ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸರೋಗಸಿ ವಿಧಾನದಲ್ಲಿ ದಂಪತಿ ಅವಳಿ ಮಕ್ಕಳನ್ನು ಪಡೆದಿದ್ದಾರೆ. ನಯನತಾರಾ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿದೆ ನೋಡಿ.

  ಸಿಂಬು, ಪ್ರಭುದೇವಾ ಜೊತೆ ಲವ್ವಿಡವ್ವಿ

  ಸಿಂಬು, ಪ್ರಭುದೇವಾ ಜೊತೆ ಲವ್ವಿಡವ್ವಿ

  ಹೌದು ನಯನತಾರಾ ಲವ್ ಅಫೇರ್‌ಗಳ ವಿಷಯ ಪದೇ ಪದೇ ಸುದ್ದಿ ಆಗುತ್ತಲೇ ಇತ್ತು. ಮೊದಲಿಗೆ ನಯನ್ ಹೆಸರು ನಟ ಸಿಂಬು ಜೊತೆ ತಳುಕು ಹಾಕಿಕೊಂಡಿತ್ತು. 'ವಲ್ಲವನ್' ಇಬ್ಬರು ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಇಬ್ಬರು ಮದುವೆ ಆಗುತ್ತಾರೆ ಎನ್ನಲಾಗಿತ್ತು. ಇಬ್ಬರು ಸಲುಗೆಯಿಂದ ಇದ್ದ ಖಾಸಗಿ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿತ್ತು. ನಂತರ ಇಬ್ಬರು ದೂರಾಗಿದ್ದರು. ನಂತರ ಪ್ರಭುದೇವ ಜೊತೆ ನಯನತಾರಾ ಡೇಟಿಂಗ್ ನಡೆಸಿದರು. ಇಬ್ಬರು ಮದುವೆ ಆಗುತ್ತಾರೆ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಲವ್ ಬ್ರೇಕಪ್ ಆಗಿತ್ತು.

  ಹಿಂದೂ ಧರ್ಮಕ್ಕೆ ಮತಾಂತರ

  ಹಿಂದೂ ಧರ್ಮಕ್ಕೆ ಮತಾಂತರ

  ನಯನತಾರಾ ನವೆಂಬರ್ 18, 1984ರಂದು ಕ್ರಿಶ್ಚಿಯನ್ ಕುಟುಂಬದಲ್ಲಿ ಜನಸಿದರು. ಆಕೆಗೆ ಮನೆಯಲ್ಲಿ ಪೋಷಕರು ಇಟ್ಟ ಹೆಸರು ಡಯಾನಾ ಮರಿಯಮ್ ಕುರಿಯನ್. ಚಿತ್ರರಂಗಕ್ಕೆ ಬಂದಾಗ ಹೆಸರು ಬದಲಿಸಿಕೊಂಡಿದ್ದರು. ಇನ್ನು ಆಕೆ ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಕುರಿಯನ್ ಕೊಡಿಯಟ್ಟು ಭಾರತೀಯ ವಾಯುಪಡೆಯ ಅಧಿಕಾರಿ ಆಗಿದ್ದರು. ಹಾಗಾಗಿ ದೇಶದ ನಾನಾ ಭಾಗಕ್ಕೆ ವರ್ಗಾವಣೆ ಆಗುತ್ತಿದ್ದರು. ಹಾಗಾಗಿ ಬೇರೆ ಬೇರೆ ಕಡೆ ಓದಿ ಬೆಳೆಯುವಂತಾಯಿತು. ಪ್ರಭುದೇವ ಅವರನ್ನು ಮದುವೆ ಆಗಬೇಕು ಎನ್ನುವ ಕಾರಣಕ್ಕೆ 2011ರಲ್ಲಿ ಚೆನ್ನೈನ ಆರ್ಯ ಸಮಾಜದಲ್ಲಿ ನಯನ್ ಹಿಂದೂ ಧರ್ಮವನ್ನು ಸ್ವೀಕರಿಸಿದರು. ವಿಪರ್ಯಾಸ ಅಂದರೆ ಪ್ರಭುದೇವ ಜೊತೆ ಮದುವೆ ಆಗಲೇಯಿಲ್ಲ.

  ಕೊನೆಗೂ ಬಾಲಿವುಡ್ ಕನಸು ನನಸು

  ಕೊನೆಗೂ ಬಾಲಿವುಡ್ ಕನಸು ನನಸು

  ಬಹಳ ಹಿಂದೆಯೇ ನಯನತಾರ ಬಿಟೌನ್‌ಗೆ ಎಂಟ್ರಿ ಕೊಡಬೇಕಿತ್ತು. ಕೇರಳ ಕುಟ್ಟಿ ನಯನತಾರ ಶಾರುಕ್ ಖಾನ್ ನಟನೆಯ 'ಚೆನ್ನೈ ಎಕ್ಸ್‌ಪ್ರೆಸ್' ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಬೇಕಿತ್ತು. ಆದರೆ ಆಕೆ ಒಲ್ಲೆ ಎಂದ ಕಾರಣಕ್ಕೆ ಆ ಅವಕಾಶ ಪ್ರಿಯಾಮಣಿಗೆ ಒಲಿದಿತ್ತು. 'ವನ್ ಟು ತ್ರಿ ಫೋರ್' ಎಂದು ಪ್ರಿಯಾಮಣಿ ಹಾಡಿ ಕುಣಿದು ಸಕ್ಸಸ್ ಕಂಡರು. ಸದ್ಯ ಶಾರುಕ್ ಖಾನ್ ನಟನೆ 'ಜವಾನ್' ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಟಿಸುತ್ತಿದ್ದಾರೆ. ಆ ಮೂಲಕ ಬಾಲಿವುಡ್ ಕನಸು ನನಸಾಗುತ್ತಿದೆ.

  ಸರೋಗಸಿ ವಿವಾದ

  ಸರೋಗಸಿ ವಿವಾದ

  ಐದಾರು ವರ್ಷ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ನಯನತಾರ ಮದುವೆ ಆಗಿದ್ದರು. ಇದೇ ವರ್ಷ ಜೂನ್ 9ರಂದು ಜೋಡಿ ಹಸೆಮಣೆ ಏರಿತ್ತು. ಮದುವೆಯ ಸುಂದರ ಕ್ಷಣಗಳ ವಿಡಿಯೋ ಪ್ರಸಾರದ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಿದ್ದರು. ಇನ್ನು ಮದುವೆ ಆದ 7 ತಿಂಗಳಿಗೆ ಅವಳಿ ಮಕ್ಕಳ ಪೋಷಕರಾದ ವಿಚಾರ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಸರೋಗಸಿ ವಿಧಾನದಲ್ಲಿ ದಂಪತಿ ಮಕ್ಕಳನ್ನು ಪಡೆದಿದ್ದು ಗೊತ್ತಾಗಿತ್ತು. ದೇಶದಲ್ಲಿ ಸರೋಗಸಿ ವಿಧಾನಕ್ಕೆ ಅವಕಾಶ ಇಲ್ಲದ ಕಾರಣ ಇದು ಅಪರಾಧ ಎನ್ನುವ ಚರ್ಚೆ ನಡೀತು. ಈ ಬಗ್ಗೆ ತಮಿಳುನಾಡು ಸರ್ಕಾರವು ವಿಚಾರಣೆ ನಡೆಸಿ ವರದಿ ನೀಡುವಂತೆ ಸಮಿತಿಯನ್ನು ನೇಮಿಸಿತ್ತು. ವಿಚಾರಣೆ ನಡೆಸಿದ ಸಮಿತಿ ಕಾನೂನುಬದ್ಧವಾಗಿ ದಂಪತಿ ಮಕ್ಕಳು ಪಡೆದಿದ್ದಾರೆ ಎಂದು ಕ್ಲೀನ್ ಚಿಟ್ ನೀಡಿತ್ತು.

  19 ವರ್ಷ ಕಳೆದರೂ ಕಮ್ಮಿಯಾಗಿಲ್ಲ ಕ್ರೇಜ್

  19 ವರ್ಷ ಕಳೆದರೂ ಕಮ್ಮಿಯಾಗಿಲ್ಲ ಕ್ರೇಜ್

  ಒಂದ್ಕಾಲದಲ್ಲಿ ನಟಿಯರ ಸಿನಿ ಕರಿಯರ್ ಕೇವಲ 5 ವರ್ಷ, ಮದುವೆ ಆದರೆ ಕರಿಯರ್ ಮುಗಿದೇ ಹೋಗುತ್ತದೆ ಎನ್ನಲಾಗುತ್ತಿತ್ತು. ಆದರೆ ಬಾಲಿವುಡ್ ನಟಿಯರು ಈ ಮಾತನ್ನು ಸುಳ್ಳಾಗಿಸಿದ್ದರು. ಅದೇ ರೀತಿ ನಯನ್ ಕೂಡ ಚಿತ್ರರಂಗಕ್ಕೆ ಬಂದು 19 ವರ್ಷ ಕಳೆದಿದೆ. ಇವತ್ತಿಗೂ ಆಕೆ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಸಂಭಾನವೆ ವಿಚಾರದಲ್ಲೂ ಬಾಲಿವುಡ್ ಟಾಪ್ ನಟಿಯರಿಗೆ ಪೈಪೋಟಿ ಕೊಡುತ್ತಿದ್ದಾರೆ. ಸದ್ಯ 10 ಸಿನಿಮಾಗಳು ಈ ಸೌತ್ ಲೇಡಿ ಸೂಪರ್ ಸ್ಟಾರ್ ಕೈಯಲ್ಲಿದೆ.

  ನಯನತಾರಾಗೆ ಅವಳಿ ಮಕ್ಕಳು.. ನಯನ್ ಸೊಂಟದ ಮೇಲಿನ ಮಚ್ಚೆ ನೋಡಿ ಅಂದೇ ಜ್ಯೂ. ಎನ್‌ಟಿಆರ್ ಭವಿಷ್ಯ?ನಯನತಾರಾಗೆ ಅವಳಿ ಮಕ್ಕಳು.. ನಯನ್ ಸೊಂಟದ ಮೇಲಿನ ಮಚ್ಚೆ ನೋಡಿ ಅಂದೇ ಜ್ಯೂ. ಎನ್‌ಟಿಆರ್ ಭವಿಷ್ಯ?

  English summary
  Nayanthara Birthday: Lesser known facts about South Lady Super Star. Nayanthara turned 38 on Friday 18 November. Nayanthara has worked in many films in different languages with Super Stars. Know More.
  Friday, November 18, 2022, 15:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X