For Quick Alerts
  ALLOW NOTIFICATIONS  
  For Daily Alerts

  ನಯನತಾರ-ವಿಘ್ನೇಶ್ ಮದುವೆ ವಿಳಂಬವಾಗಲು ಕಾರಣ 'ಹಣ'

  |

  ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಪ್ರೀತಿ ಎಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ ಐದಾರು ವರ್ಷದಿಂದ ಡೇಟಿಂಗ್ ಮಾಡ್ತಿದ್ದ ಜೋಡಿ ಆರಂಭದಲ್ಲಿ ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟುಕೊಂಡಿದ್ದರು. ಆದ್ರೀಗ, ನಯನ ಮತ್ತು ವಿಘ್ನೇಶ್ ಲವ್ ಸಾರ್ವಜನಿಕ ವಲಯದಲ್ಲಿದೆ.

  ನಯನತಾರ ಮದುವೆ ವಿಳಂಬಕ್ಕೆ ಕಾರಣ ಕೊಟ್ಟ ಬಾಯ್ ಫ್ರೆಂಡ್ | Filmibeat Kannada

  ಇವರಿಬ್ಬರ ಬಗ್ಗೆ ಕುತೂಹಲದ ವಿಚಾರ ಏನಪ್ಪಾ ಅಂದ್ರೆ ''ಮದ್ವೆ ಯಾವಾಗ ಆಗ್ತಾರೆ'' ಎನ್ನುವುದು. ಇದುವರೆಗೂ ಮದುವೆ ಕುರಿತು ಇಬ್ಬರು ಹೇಳಿಕೆ ಕೊಟ್ಟಿಲ್ಲ. ಆಪ್ತರು ಹೇಳುವಂತೆ ತಯಾರಿ ನಡೆದಿದೆ, ಈ ತಿಂಗಳು, ಮುಂದಿನ ತಿಂಗಳು ಎನ್ನುತ್ತಲೇ ವರ್ಷಗಳು ಉರುಳಿದೆ. ಇದೀಗ, ವಿಘ್ನೇಶ್ ಶಿವನ್ ಮದ್ವೆ ಬಗ್ಗೆ ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸಿದ ವೇಳೆ ಈ ಪ್ರಶ್ನೆ ಎದುರಾಗಿದೆ. ಇದಕ್ಕೆ ನಯನತಾರ ಬಾಯ್‌ಫ್ರೆಂಡ್ ಕೊಟ್ಟ ಉತ್ತರವೇನು? ಮುಂದೆ ಓದಿ...

  ನಯನತಾರಾನ ಮದ್ವೆ ಯಾವಾಗ ಆಗ್ತೀರಾ?

  ನಯನತಾರಾನ ಮದ್ವೆ ಯಾವಾಗ ಆಗ್ತೀರಾ?

  ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಆಗ್ತಾರಾ? ಇಲ್ವಾ? ಎನ್ನುವುದು ಅಭಿಮಾನಿಗಳನ್ನು ಕಾಡ್ತಿರುವ ವಿಷಯ. ಏಕಂದ್ರೆ ಈ ಬಗ್ಗೆ ಇಬ್ಬರು ಅಧಿಕೃತವಾಗಿ ಸ್ಪಷ್ಟನೆ ಕೊಡ್ತಿಲ್ಲ. ಭಾನುವಾರ ಅಭಿಮಾನಿಗಳ ಜೊತೆ ಸಂವಾದ ನಡೆಸಿದ ವಿಘ್ನೇಶ್‌ಗೆ ಓರ್ವ ವ್ಯಕ್ತಿ ''ನೀವು ನಯನತಾರಾ ಅವರನ್ನು ಯಾವಾಗ ಮದ್ವೇ ಆಗ್ತೀರಾ, ಇದಕ್ಕಾಗಿ ನಾನು ಬಹಳ ಕಾತುರದಿಂದ ಕಾಯುತ್ತಿದ್ದೇನೆ'' ಎಂದು ಕೇಳಿದ್ದಾರೆ. ಇದಕ್ಕೆ ವಿಘ್ನೇಶ್ ಕೊಟ್ಟ ಉತ್ತರ ಹಾಸ್ಯಾಸ್ಪದ ಎನಿಸಿದೆ.

  ಸೌತ್ ಇಂಡಿಯಾದ ಶ್ರೀಮಂತ ನಟಿ ನಯನತಾರ ಒಟ್ಟು ಆಸ್ತಿ ಮೌಲ್ಯ ಎಷ್ಟು?ಸೌತ್ ಇಂಡಿಯಾದ ಶ್ರೀಮಂತ ನಟಿ ನಯನತಾರ ಒಟ್ಟು ಆಸ್ತಿ ಮೌಲ್ಯ ಎಷ್ಟು?

  ಹಣ ಸಂಗ್ರಹಿಸಿ ಇಡುತ್ತಿದ್ದೇವೆ

  ಹಣ ಸಂಗ್ರಹಿಸಿ ಇಡುತ್ತಿದ್ದೇವೆ

  ಮದುವೆ ಯಾವಾಗ ಎಂದು ಕೇಳಿದ ಅಭಿಮಾನಿಗೆ ಉತ್ತರ ಕೊಟ್ಟ ವಿಘ್ನೇಶ್ ಶಿವನ್ 'ಹಣಕ್ಕಾಗಿ ಕಾಯ್ತಿದ್ದೇವೆ' ಎಂದಿದ್ದಾರೆ. ''ಮದುವೆ ಮತ್ತು ಎಲ್ಲಾದಕ್ಕೂ ಬಹಳ ಖರ್ಚು ಆಗುತ್ತದೆ. ಅದಕ್ಕಾಗಿ ಹಣ ಸಂಗ್ರಹಿಸಿ ಇಡ್ತಿದ್ದೇವೆ. ಈ ಕೊರೊನಾ ಹೋದ್ಮೇಲೆ ಆಗೋಣ'' ಎಂದು ಉತ್ತರಿಸಿದ್ದಾರೆ.

  ಹಣ ಇಲ್ಲ ಎನ್ನುವುದು ನಂಬುವ ವಿಚಾರವೇ?

  ಹಣ ಇಲ್ಲ ಎನ್ನುವುದು ನಂಬುವ ವಿಚಾರವೇ?

  ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರಾ. ವಿಘ್ನೇಶ್ ಶಿವನ್ ಸಹ ಯಶಸ್ವಿ ನಿರ್ದೇಶಕ. ಶೂಟಿಂಗ್ ಹಾಗೂ ಹಾಲಿಡೇ ಎಂಜಾಯ್ ಮಾಡಲು ಎಲ್ಲಾದರೂ ಹೋಗಬೇಕು ಎನಿಸಿದಾಗ ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡುವ ಜೋಡಿ ಇದು. ದುಬಾರಿ ಜೀವನ, ಇಷ್ಟಪಟ್ಟ ಸ್ಥಳ, ತಿಂಡಿ, ಬಟ್ಟೆ, ಹೀಗೆ ಲೈಫ್ ಎಂಜಾಯ್ ಮಾಡ್ತಿರುವ ನಯನತಾರ ಮತ್ತು ವಿಘ್ನೇಶ್‌ನ್‌ಗೆ ಹಣದ ಕೊರತೆಯೇ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

  ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಯನತಾರಾ? ಶುಭಾಶಯ ತಿಳಿಸುತ್ತಿದ್ದಾರೆ ಅಭಿಮಾನಿಗಳುಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಯನತಾರಾ? ಶುಭಾಶಯ ತಿಳಿಸುತ್ತಿದ್ದಾರೆ ಅಭಿಮಾನಿಗಳು

  ಎಂಗೇಜ್‌ಮೆಂಟ್ ಆಗಿದೆ?

  ಎಂಗೇಜ್‌ಮೆಂಟ್ ಆಗಿದೆ?

  'ನಾನುಮ್ ರೌಡಿ ಧಾನ್' ಎಂಬ ಚಿತ್ರದ ವೇಳೆ ನಯನತಾರಾ ಮತ್ತು ವಿಘ್ನೇಶ್ ಪ್ರೀತಿಯಲ್ಲಿ ಬಿದ್ದರು. ಈ ಸಿನಿಮಾ ಬಂದು ಆರು ವರ್ಷ ಆಗಿದೆ. ಒಂದಿಷ್ಟು ವರದಿಗಳ ಪ್ರಕಾರ, ನಯನತಾರ ಮತ್ತು ವಿಘ್ನೇಶ್ ಪರಸ್ಪರ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಎರಡು ಮನೆಯವರು ಮದುವೆ ಮಾಡಲು ತಯಾರಿ ನಡೆಸಿದ್ದಾರೆ ಎಂಬ ಗುಮಾನಿಯೂ ಇದೆ. ಆದರೆ ಆ ಸಮಯ ಯಾವುದು ಎನ್ನುವುದೇ ಅಭಿಮಾನಿಗಳ ಪ್ರಶ್ನೆಯಾಗಿದೆ.

  English summary
  South actress Nayanthara boyfriend Vignesh shivan has react about his marriage in instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X