For Quick Alerts
  ALLOW NOTIFICATIONS  
  For Daily Alerts

  ನಯನತಾರಾ ಮತ್ತು ವಿಘ್ನೇಶ್ ಶಿವನ್ ಕ್ರಿಸ್‌ಮಸ್ ಆಚರಣೆ ಫೋಟೋ ವೈರಲ್

  |

  ಸೆಲೆಬ್ರಿಟಿಗಳು ಕ್ರಿಸ್‌ಮಸ್‌ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತೆಲುಗು ಮತ್ತು ತಮಿಳು ನಟ-ನಟಿಯರು ಕ್ರೈಸ್ತ ಹಬ್ಬವನ್ನು ಜೋರಾಗಿ ಸಂಭ್ರಮಿಸಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರ ಮತ್ತು ವಿಘ್ನೇಶ್ ಶಿವನ್ ಕ್ರಿಸ್‌ಮಸ್ ಆಚರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಕ್ರಿಸ್‌ಮಸ್ ಆಚರಣೆಯ ಕೆಲವು ಫೋಟೋಗಳನ್ನು ವಿಘ್ನೇಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಒಂದರಲ್ಲಿ ನಯನತಾರಾ ಕೈ ಹಿಡಿದು ಪ್ರೀತಿಯಿಂದ ನೋಡುತ್ತಿರುವ ಫೋಟೋ ಹಾಗೂ ಇನ್ನೊಂದರಲ್ಲಿ ದೂರ ದೂರವಾಗಿ ನಿಂತು ಒಬ್ಬರನ್ನೊಬ್ಬರು ನೋಡುತ್ತಿರುವ ಫೋಟೋ ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ.

  ಕೈ-ಕೈ ಹಿಡಿದು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ನಯನತಾರ-ವಿಘ್ನೇಶ್ಕೈ-ಕೈ ಹಿಡಿದು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ನಯನತಾರ-ವಿಘ್ನೇಶ್

  ಅಂದ್ಹಾಗೆ, ನಯನತಾರಾ ಹೈದರಾಬಾದ್‌ನಲ್ಲಿ ಅಣ್ಣಾತ್ತೆ ಸಿನಿಮಾದ ಚಿತ್ರೀಕರಣದಲ್ಲಿದ್ದರು. ಅಣ್ಣಾತ್ತೆ ಸೆಟ್‌ನಲ್ಲಿ ಏಂಟು ಜನರಿಗೆ ಕೊರೊನಾ ವೈರಸ್ ತಗುಲಿದ ಕಾರಣ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು.

  ಈ ಕಡೆ ವಿಘ್ನೇಶ್ ಶಿವನ್ ಸಹ ವಿಜಯ್ ಸೇತುಪತಿ-ಸಮಂತಾ-ನಯನತಾರಾ ನಟಿಸುತ್ತಿರುವ ಹೊಸ ಸಿನಿಮಾ ಚಿತ್ರೀಕರಣವನ್ನು ಹೈದರಬಾದ್‌ನಲ್ಲಿಯೇ ಮಾಡುತ್ತಿದ್ದರು. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರು ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಕೈ ಕೈ ಹಿಡಿದು ಸಾಗುತ್ತಿದ್ದ ಫೋಟೋ ಸಹ ವೈರಲ್ ಆಗಿತ್ತು.

  ಸಮಂತಾ ಅಕ್ಕಿನೇನಿ-ನಯನತಾರಾ ಸಿನಿಮಾದ ಚಿತ್ರೀಕರಣ ಆರಂಭಸಮಂತಾ ಅಕ್ಕಿನೇನಿ-ನಯನತಾರಾ ಸಿನಿಮಾದ ಚಿತ್ರೀಕರಣ ಆರಂಭ

  KManju ವಿರುದ್ಧ ದಾಖಲಾಯ್ತು ವಂಚನೆ ಪ್ರಕರಣ | Filmibeat Kannada

  ಹೈದರಾಬಾದ್‌ನಿಂದ ಚೆನ್ನೈಗೆ ಹಿಂತಿರುಗಿದ್ದ ಈ ಜೋಡಿ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದೆ. ರಜನಿಕಾಂತ್ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಜನಿ ಚೇತರಿಕೆಯ ನಂತರವೇ ಅಣ್ಣಾತ್ತೆ ಚಿತ್ರೀಕರಣ ನಡೆಯಲಿದೆ. ಅಲ್ಲಿಯವರೆಗೂ ನಯನತಾರಾ ಬ್ರೇಕ್‌ನಲ್ಲಿ ಇರಲಿದ್ದಾರೆ.

  English summary
  South actress Nayanthara celebrates christmas with her boyfriend Vignesh shivan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X