For Quick Alerts
  ALLOW NOTIFICATIONS  
  For Daily Alerts

  ಪ್ರಿಯಕರನ ಜೊತೆ ನಯನತಾರ ಬರ್ತ್ ಡೇ ಪಾರ್ಟಿ

  |

  ಸೌತ್ ನಟಿ ನಯನತಾರ ಇಂದು (ನವೆಂಬರ್ 18) ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಈ ಬಾರಿ ನ್ಯೂಯಾರ್ಕ ನಲ್ಲಿ ತಮ್ಮ ಬರ್ತ್ ಡೇ ಸೆಲಿಬ್ರಿಟ್ ಮಾಡಿದ್ದಾರೆ.

  ನಯನತಾರ ಪ್ರಿಯಕರ ವಿಜ್ಞೇಶ್ ಶಿವನ್ ಹುಟ್ಟುಹಬ್ಬಕ್ಕಾಗಿ ಸ್ಪೆಷಲ್ ಪ್ಲಾನ್ ಮಾಡಿದ್ದಾರೆ. ಕಾಲಿವುಡ್ ನಲ್ಲಿ ಈ ಜೋಡಿಯ ಲವ್ ಸ್ಟೋರಿ ಬಗ್ಗೆ ದೊಡ್ಡ ಸುದ್ದಿ ಇದ್ದು, ಸದ್ಯದಲ್ಲಿಯೇ ಮದುವೆ ಎನ್ನುವ ಮಾತಿದೆ. ಇದೀಘ ನ್ಯೂಯಾರ್ಕ ನಲ್ಲಿ ನಯನತಾರ ಬರ್ತ್ ಡೇ ಪಾರ್ಟಿ ಸಿದ್ಧ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಯನತಾರ ಜೊತೆಗಿನ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

  ಪ್ರಚಾರಕ್ಕೆ ಬಾರದ ನಯನತಾರಾಗೆ 'ಸೈರಾ' ನಿರ್ಮಾಪಕರಿಂದ ಸಿಕ್ಕ ಸಂಭಾವನೆ ಎಷ್ಟು.?ಪ್ರಚಾರಕ್ಕೆ ಬಾರದ ನಯನತಾರಾಗೆ 'ಸೈರಾ' ನಿರ್ಮಾಪಕರಿಂದ ಸಿಕ್ಕ ಸಂಭಾವನೆ ಎಷ್ಟು.?

  ನಯನತಾರ ನಗುವನ್ನು ವಿಜ್ಞೇಶ್ ಶಿವನ್ ಆಕಾಶಕ್ಕೆ ಹೋಲಿಕೆ ಮಾಡಿದ್ದಾರೆ. ಈ ಸಿಟಿ ತುಂಬ ಸುಂದರವಾಗಿದೆ ಎಂದು ಬರ್ತ್ ಡೇ ವಿಶ್ ಮಾಡಿದ್ದಾರೆ. ನ್ಯೂಯಾರ್ಕ ನಲ್ಲಿಯೇ ಈ ಜೋಡಿ ನಿರ್ಮಾಪಕ ಬೋನಿ ಕಪೂರ್ ಹಾಗೂ ಖುಷಿ ಕಪೂರ್ ರನ್ನು ಭೇಟಿ ಮಾಡಿದ್ದರು.

  ನಯನತಾರ ಇತ್ತೀಚಿಗಷ್ಟೆ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದಾದ ನಂತರ 'ಬಿಗಿಲ್' ಚಿತ್ರದಲ್ಲಿ ನಟಿಸಿದರು. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ 'ದರ್ಬಾರ್' ತೆರೆ ಹಂಚಿಕೊಳ್ಳುತ್ತಿದ್ದಾರೆ.

  ಸಿನಿಮಾ ಪ್ರಚಾರಗಳಿಗೆ ನಟಿ ನಯನತಾರ ಬರಲ್ಲ ಯಾಕೆ?ಸಿನಿಮಾ ಪ್ರಚಾರಗಳಿಗೆ ನಟಿ ನಯನತಾರ ಬರಲ್ಲ ಯಾಕೆ?

  ಅಂದಹಾಗೆ, ನಯನತಾರ 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 2003 ರಲ್ಲಿ ಚಿತ್ರರಂಗ ಪ್ರವೇಶ ಮಾಡಿದ್ದು, ಸದ್ಯ 16 ವರ್ಷಗಳನ್ನು ಪೂರೈಸಿದ್ದಾರೆ. 'ಸೂಪರ್' ಸಿನಿಮಾದ ಮೂಲಕ ಕನ್ನಡ ಚಿತ್ರದಲ್ಲೂ ನಯನತಾರ ನಟಿಸಿದ್ದಾರೆ.

  English summary
  Nayanthara celebrated her birthday with Vignesh Shivan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X