Nayanthara: ಇನ್‌ಸ್ಟಾಗ್ರಾಮ್‌ಗೆ ನಯನತಾರ ಗ್ರ್ಯಾಂಡ್‌ ಎಂಟ್ರಿ: ಆಕೆ ಫಾಲೋ ಮಾಡುತ್ತಿರುವ ಏಕೈಕ ನಟ ಯಾರು?

ಸಿನಿಮಾ ತಾರೆಯರು ಸೋಶಿಯಲ್ ಮೀಡಿಯಾ ಮೂಲಕ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಬರ್ತಾ ಬರ್ತಾ ಇನ್‌ಸ್ಟ್ರಾಂ ಎಲ್ಲರ ಹಾಟ್ ಫೇವರಿಟ್ ಆಗುತ್ತಿದೆ. ಆದರೆ ಕೆಲ ಸ್ಟಾರ್‌ಗಳು ಇನ್‌ಸ್ಟಾಗ್ರಾಮ್‌ನಿಂದ ದೂರವೇ ಉಳಿದಿದ್ದರು. ಇದೀಗ ನಿಧಾನವಾಗಿ ಒಬ್ಬೊಬ್ಬರೇ ಖಾತೆ ತೆರೆಯುತ್ತಿದ್ದಾರೆ. ಪ್ರಭಾಸ್, ದಳಪತಿ ವಿಜಯ್ ಬಳಿಕ ಇತ್ತೀಚೆಗೆ ಪವನ್ ಕಲ್ಯಾಣ್ ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದರು.

ಇದೀಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಸಹ ಇನ್‌ಸ್ಟಾ ಪ್ರಪಂಚಕ್ಕೆ ಬಂದಿದ್ದಾರೆ. ನಟಿಯರೇ ಹೆಚ್ಚು ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್ ಆಗಿರುತ್ತಾರೆ. ಲಕ್ಷ ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಜಾಹೀರಾತುಗಳ ಮೂಲಕ ಕೋಟಿ ಕೋಟಿ ಸಂಪಾದಿಸುತ್ತಿದ್ದಾರೆ. ಆದರೆ ಇಷ್ಟು ದಿನ ನಯನತಾರಾಗೆ ಇನ್‌ಸ್ಟಾ ಖಾತೆ ಇರಲಿಲ್ಲ ಎನ್ನುವುದೇ ಅಚ್ಚರಿ ಮೂಡಿಸಿದೆ. ಮೊದಲಿನಿಂದಲೂ ಕೇರಳ ಕುಟ್ಟಿ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು. ಇದೀಗ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.

Nayanthara debuts on Instagram, gains 200k followers within few minutes

ನಯನತಾರಾ ನಟನೆಯ ಬಾಲಿವುಡ್ ಸಿನಿಮಾ 'ಜವಾನ್' ಮುಂದಿನ ವಾರ ರಿಲೀಸ್ ಆಗಲಿದೆ. ಚಿತ್ರದಲ್ಲಿ ಶಾರೂಖ್ ಖಾನ್ ಹೀರೊ ಆಗಿ ನಟಿಸಿದ್ದು ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಸಿನಿಮಾ ಮೂಡಿ ಬಂದಿದೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಇನ್‌ಸ್ಟಾ ಖಾತೆ ತೆರೆಯುತ್ತಿದ್ದಂತೆ ನಯನತಾರ ತಮ್ಮ ಮಕ್ಕಳ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮಕ್ಕಳನ್ನು ಸಂಪೂರ್ಣವಾಗಿ ಅಭಿಮಾನಿಗಳಿಗೆ ತೋರಿಸಿದ್ದಾರೆ. ಬಳಿಕ 'ಜವಾನ್' ಟ್ರೈಲರ್ ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ನೆಚ್ಚಿನ ನಟಿಯನ್ನು ಇನ್‌ಸ್ಟಾಗ್ರಾಮ್‌ಗೆ ಸ್ವಾಗತಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನ ಇನ್‌ಸ್ಟಾದಲ್ಲಿ ಆಕೆಯನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಆದರೆ ಆಕೆ ಮಾತ್ರ 5 ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ. ಪತಿ ವಿಘ್ನೇಶ್ ಶಿವನ್, ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪತ್ನಿ ಮಿಚೆಲ್ ಒಬಾಮ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ತಮ್ಮದೇ ದಿ ರೌಡಿ ಪಿಕ್ಚರ್ ಬ್ಯಾನರ್‌ ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ. ಆಕೆ ಇನ್‌ಸ್ಟಾದಲ್ಲಿ ಫಾಲೋ ಮಾಡುತ್ತಿರುವ ಏಕೈಕ ನಟ ಶಾರುಖ್ ಖಾನ್.

Nayanthara debuts on Instagram, gains 200k followers within few minutes

ಅಟ್ಲಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಜವಾನ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ಕಿಂಗ್ ಖಾನ್ ಡಬಲ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ಹೈವೋಲ್ಟೇಜ್ ಆಕ್ಷನ್ ದೃಶ್ಯಗಳು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿತ್ರದಲ್ಲಿ ನಯನ್ ಗನ್ ಹಿಡ್ದು ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ವಿಜಯ್ ಸೇತುಪತಿ, ಪ್ರಿಯಾಮಣಿ, ದೀಪಿಕಾ ಪಡುಕೋಣೆ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ವಿಘ್ನೇಶ್ ಶಿವನ್ ಹಾಗೂ ನಯನತಾರಾ ದಂಪತಿ ಮದುವೆಯಾದ 7 ತಿಂಗಳಿಗೆ ಸಾರೋಗಸಿ ವಿಧಾನದಲ್ಲಿ ಅವಳಿ ಗಂಡು ಮಕ್ಕಳನ್ನು ಸ್ವಾಗತಿಸಿದ್ದರು. ಆದರೆ ಇದು ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಬಳಿಕ ವಿವಾದ ತಣ್ಣಗಾಯಿತು. ಸಿನಿಮಾಗಳಲ್ಲಿ ನಟಿಸುವುದರ ಜೊತೆ ಜೊತೆಗೆ ನಯನತಾರ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ. ಉಯಿರ್ ಹಾಗೂ ಉಳಗ್ ಎಂದು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಇಷ್ಟು ದಿನ ಮಕ್ಕಳ ಮುಖ ತೋರಿಸದೇ ಫೋಟೊಗಳನ್ನು ದಂಪತಿ ಹಂಚಿಕೊಳ್ಳುತ್ತಿದ್ದಾರೆ.

ಸೂಪರ್ 'ಜೈಲರ್' ಚಿತ್ರದ ಡೈಲಾಗ್ ಜೊತೆಗೆ ಮಕ್ಕಳುನ್ನು ಕರೆದುಕೊಂಡು ಬಂದು ನಯನತಾರಾ ಸ್ಪೆಷಲ್ ವಿಡಿಯೋ ಮಾಡಿದ್ದಾರೆ. ಆ ವಿಡಿಯೋಗೆ ಭರ್ಜರೆ ರೆಸ್ಪಾನ್ಸ್ ಸಿಕ್ತಿದೆ. ಈ ಮೂಲಕ ತಮ್ಮ ಮಕ್ಕಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಮದುವೆ ನಂತರ ಕೂಡ ನಯನ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಜವಾನ್' ಬಳಿಕ 'ಇರೈವನ್', 'ಟೆಸ್ಟ್' ಸೇರಿದಂತೆ ಮೂರ್ನಾಲ್ಕು ಸಿನಿಮಾಗಳು ಆಕೆಯ ಕೈಯಲ್ಲಿವೆ.

More from Filmibeat

English summary
Nayanthara makes her Instagram debut with jawan Trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X